ಉಡುಪಿ: ಮುಖ್ಯಮಂತ್ರಿ ಎಸ್ ಬಸವರಾಜ ಬೊಮ್ಮಾಯಿಯವರು ಬುಧವಾರ ಗುರುಪೂರ್ಣಿಮೆಯ ಪವಿತ್ರ ದಿನದಂದು ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದರು. ಬಳಿಕ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾ ಸಾಗರ ತೀರ್ಥ ಶ್ರೀಪಾದರಿಗೆ ನಾಡಿನ ಸಮಸ್ತ ಜನತೆಯ ಪರವಾಗಿ ಗುರುಪೂಜೆಯನ್ನು ಸಲ್ಲಿಸಿ ಆಶೀರ್ವಾದ ಪಡೆದರು.
ಕಂದಾಯ ಸಚಿವ ಆರ್ ಅಶೋಕ್, ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಮತ್ತು ಬಂದರು ಮೀನುಗಾರಿಕೆ ಸಚಿವ ಎಸ್ ಅಂಗಾರ, ಶಾಸಕರಾದ ಕೆ ರಘುಪತಿ ಭಟ್, ಬಿ ಎಂ ಸುಕುಮಾರ ಶೆಟ್ಟಿ, ಪ್ರಮುಖರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಗುರ್ಮೆ ಸುರೇಶ ಶೆಟ್ಟಿ, ಕೆ ಸುರೇಶ್ ನಾಯಕ್, ಉದಯ್ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಎಸ್ ಪಿ, ತಹಸೀಲ್ದಾರ್ ಮೊದಲಾದವರಿದ್ದರು.
ಮಠದ ದಿವಾನ ವರದರಾಜ ಭಟ್, ಪುರೋಹಿತರಾದ ಶ್ರೀನಿವಾಸ ಭಟ್ ವಿಷ್ಣುಪಾಡಿಗಾರ್, ವಾಸುದೇವ ಭಟ್ ಪೆರಂಪಳ್ಳಿ ಸಹಕರಿಸಿ ಮುಖ್ಯಮಂತ್ರಿಗಳ ಮೂಲಕ ಗುರುಪೂಜಾವಿಧಿ ನಡೆಸಿಕೊಟ್ಡರು. ಪರ್ಯಾಯ ಶ್ರೀಗಳವರು ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಮುಖ್ಯಪ್ರಾಣ ಹಾಗೂ ಜಗದ್ಗುರು ಶ್ರೀ ಮಧ್ವಾಚಾರ್ಯರ ಅನುಗ್ರಹವಾಗಲೆಂದು ಪ್ರಾರ್ಥಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ