ಆಳ್ವಾಸ್ `ಬೇಕ್ ಎಂಪೋರಿಯಮ್’ ಉದ್ಘಾಟನೆ

Upayuktha
0

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ವಿದ್ಯಾಗಿರಿ ಕ್ಯಾಂಪಸ್ ನಲ್ಲಿ ನೂತನವಾಗಿ ಆರಂಭಗೊಂಡಿರುವ ಬೇಕರಿ ಮಳಿಗೆ 'ಆಳ್ವಾಸ್ ಬೇಕ್ ಎಂಪೋರಿಯಮ್'ಗೆ ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ರಿಬ್ಬನ್ ಕತ್ತರಿಸಿ, ದೀಪ ಹಚ್ಚುವ ಮೂಲಕ ಬೇಕರಿಯನ್ನು ಉದ್ಘಾಟಿಸಿದರು.


ಕಾಲೇಜಿನ ಹೋಟೆಲ್ ಮ್ಯಾನೇಜ್ಮೆಂಟ್ ವಿಭಾಗದ ವಿದ್ಯಾರ್ಥಿಗಳಿಗೆ ಬೇಕರಿ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟದ ಪ್ರಾಯೋಗಿಕ ಕಲಿಕೆಗೆ ಪೂರಕವಾಗಿ ಈ ಬೇಕರಿಯನ್ನು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬೇಕರಿ ಉದ್ಯಮಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಆರಂಭಿಸುವ ಯೋಜನೆಯೂ ಇದೆ. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು.

 

ಬೇಕರಿ ವಿಶೇಷತೆ:

ಆಳ್ವಾಸ್ ಬೇಕ್ ಎಂಪೋರಿಯಮ್‍ನಲ್ಲಿ ಉತ್ಪನ್ನಗಳನ್ನು ತಯಾರಿಸಲು ಆಧುನಿಕ ಯಂತ್ರೋಪಕರಣಗಳಾದ ರೋಟರಿ ಒವೆನ್, ಡೆಕ್ ಒವೆನ್, ಡೋವ್ ಮಿಕ್ಸರ್, ಡೋವ್ ಶೀಟರ್, ಕ್ರೀಮ್ ಮಿಕ್ಸರ್, ಎಲೆಕ್ಟ್ರಿಕ್ ಬ್ಲೆಂಡರ್ಸ್, ಬ್ರೆಡ್ ಸ್ಲಯ್ಸರ್, ರೆಫ್ರಿಜರೇಟರ್, ವೆಜ್ ಸ್ಲಯ್ಸರ್‍ಗಳನ್ನು ಬಳಸಲಾಗುತ್ತಿದೆ. 4 ಬಗೆಯ ಪಪ್ಸ್, ಬ್ರೆಡ್, ಪಾವ್, ಬನ್, ಕೇಕ್ ಹಾಗೂ ಇನ್ನಿತರ ಬಗೆಯ ಬೇಕರಿ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಹೋಟೆಲ್ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಟೆರೆನ್ಸ್ ರೊಡ್ರಿಗಸ್, ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಉಪನ್ಯಾಸಕರುಗಳಾದ ಡಾ ಚಂದ್ರಶೇಖರ ಮಯ್ಯ, ರತ್ನಾಕರ ಪ್ರಭು, ವನಿತಾ ಪ್ರಭು, ವಿದ್ಯಾರ್ಥಿನಿ ಮಾಲಾಶ್ರೀ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top