ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ವತಿಯಿಂದ `ಟೆಕ್ನಿಕ್ಸ್ ಆಫ್ ಆರ್ಗ್ಯಾನಿಕ್ ಸಿಂಥೆಸಿಸ್ ಆ್ಯಂಡ್ ಐಸೋಲೇಷನ್ ಪ್ರೊಸೆಸ್' ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಪ್ರಸ್ತುತ ಫಾರ್ಮಾ ಇಂಡಸ್ಟ್ರಿಗಳಲ್ಲಿ ವಿಪುಲ ಅವಕಾಶಗಳಿವೆ. ಇಂಡಸ್ಟ್ರಿಗಳು ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಶಿಕ್ಷಣ ಸಂಸ್ಥೆಗಳಿಂದ ಸಿಗುವ ಜ್ಞಾನವಷ್ಟೇ ಸಾಲುವುದಿಲ್ಲ, ಜತೆಗೆ ಸಂಶೋಧನೆಗೆ ಪೂರಕವಾದ ಕೌಶಲ್ಯಗಳೂ ಅಗತ್ಯ. ವಿದ್ಯಾರ್ಥಿಗಳು ಇಂಡಸ್ಟ್ರಿ ನುರಿತ ವ್ಯಕ್ತಿಗಳಿಂದ ಕಲಿಯುವ ಮೂಲಕ ವೃತ್ತಿ ಬದುಕಿನ ಪ್ರಾಯೋಗಿಕ ನಿರೀಕ್ಷೆಗಳನ್ನು ತಲುಪಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಶಿಕ್ಷಣ ಮತ್ತು ಕೌಶಲ್ಯಗಳ ವಿನಿಮಯದಿಂದ ವಿದ್ಯಾರ್ಥಿಗಳಲ್ಲಿ ಸ್ವಾಭಾವಿಕವಾಗಿ ಜ್ಞಾನದ ಹರಿವು ಉಂಟಾಗುತ್ತದೆ. ಕೌಶಲ್ಯಗಳು ಜ್ಞಾನವಾಗಿ ಬದಲಾಗಬೇಕಾದರೆ ಪ್ರಾಯೋಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು.
ಬೆಂಗಳೂರಿನ ಜುಬಿಲಿಯೆಂಟ್ ಬಯೋಸಿಸ್ ಲಿಮಿಟೆಡ್ ಸಂಸ್ಥೆಯ ಅಸೋಸಿಯೇಟ್ ಡೈರೆಕ್ಟರ್ ಡಾ. ಮಹಾನಂದೀಶ ಹಲ್ಲೂರ್ ಹಾಗೂ ಪ್ರಿನ್ಸಿಪಾಲ್ ಸೈಂಟಿಸ್ಟ್ ಡಾ. ನಾರಾಯಣನ್ ಬಾಲಾಜಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ `ಸಿಂಥೆಸಿಸ್ ಮೆತಡಾಲಜಿ ಇನ್ ಇಂಡಸ್ಟ್ರಿ ಹಾಗೂ ಇನ್ನಿತರ ಫಾರ್ಮಾ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ವಿನಿಮಯ ಮಾಡಿದರು. ಈ ಸಂದರ್ಭದಲ್ಲಿ ಆಳ್ವಾಸ್ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗ ಹಾಗೂ ಜುಬಿಲಿಯೆಂಟ್ ಬಯೋಸಿಸ್ ಲಿಮಿಟೆಡ್ ಸಂಸ್ಥೆಯ ನಡುವೆ ಔದ್ಯೋಗಿಕ ಸಹಭಾಗಿತ್ವದ ಒಡಂಬಡಿಕೆಗೆ ಸಹಿ ಹಾಕಲಾಯಿತು.
ವಿಭಾಗ ಮುಖ್ಯಸ್ಥ ಪ್ರೊ. ರಾಜ್‍ಕುಮಾರ್ ಭಟ್, ಸಂಯೋಜಕಿ ಡಾ. ಶೃತಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ಮಿತಾಶ್ರೀ ಸ್ವಾಗತಿನಿ, ಉನ್ನಿ ಮಾಯ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ