ಕಲ್ಪನೆಯೇ ಕನಸಾಯಿತು

Upayuktha
0

ಕನಸುಗಾರರ ಕನಸುಗಳು ಅವರ ನಿದ್ದೆಯಲ್ಲಿ ಸಂಭ್ರಮದ ಬಣ್ಣದೋಕುಳಿ ಹರಿಸಿದರೂ ಅವರ ನಿಜ ಜೀವನದಲ್ಲಿ ಈಡೇರದ ಕನಸುಗಳ ವೇದನೆಯೇ ಹೆಚ್ಚು. ನಮ್ಮ ಕಲ್ಪನೆಯೇ ಹೊರತು ಕನಸುಗಳು ನನಸಾಗುವುದು ಬಹಳ ಕಡಿಮೆ. ಪ್ರತಿಯೊಬ್ಬ ಮನುಷ್ಯನು ಅನೇಕ ರೀತಿಯಲ್ಲಿ ಕನಸು ಕಾಣುತ್ತಾನೆ. ಹಾಗೇ ಕಲ್ಪನೆಯೂ ಮಾಡುತ್ತಾನೆ. ಅದೇ ರೀತಿ ನಾನು ಎಷ್ಟೋ ಕನಸನ್ನು ಕಂಡಿದ್ದೇನೆ. ಆದರೆ ಅದೆಲ್ಲ ಯಾವುದು ಈಡೇರದಿದ್ದಾಗ ನೊಂದುಕೊಳ್ಳುತ್ತಿದ್ದೆ. ಆದರೆ ನಿನ್ನೆಯ-ಮೊನ್ನೆಯ ದಿನಗಳಲ್ಲಿ ನೊಂದುಕೊಂಡದ್ದಕ್ಕೆ ಲೆಕ್ಕವೇ ಇಲ್ಲ. ಕಾರಣ ಒಂದು ದೇವಿಯ ಸನ್ನಿಧಾನಕ್ಕೆ ಹೋಗಲು ಬಹಳ ಕಾತುರದಿಂದ ಕಾಯುತ್ತಿದ್ದೆ. ಎರಡು ಸಲ ಹೋದಾಗ ಭಕ್ತಿಯಿಂದ ಪ್ರಾರ್ಥನೆ ಮಾಡಿ ನನ್ನ ಆಸೆ ಆಕಾಂಕ್ಷೆಗಳನ್ನು ಬೇಡಿಕೊಂಡೆ. ಇನ್ನೊಂದು ಸಲ ಒಂದು ಒಳ್ಳೆಯ ಕಾರ್ಯರೂಪವನ್ನು ಯಶಸ್ವಿಗೊಳಿಸಲು ನನ್ನ ಮನದ ರೋದನೆ, ಕಷ್ಟ, ಮುಂದಿನ ಭವಿಷ್ಯ, ಮನೆಯ ಪರಿಸ್ಥಿತಿಗಳನ್ನು ದೇವಿಯ ಮುಂದಿಟ್ಟು ಆದಷ್ಟು ಬೇಗ ನನ್ನವರು ಎಂದುಕೊಂಡವರಿಗೂ, ನನಗೂ ಮನಸ್ಸಿಗೆ ನೆಮ್ಮದಿಯ ಫಲವನ್ನು ಅನುಭವಿಸಬೇಕೆಂದು ಹೊರಟೆ. ಬಹಳ ಸಂತೋಷದಿಂದ ನಗುನಗುತ್ತಾ ಮಾತಾಡಿಕೊಂಡು ಹೋದೆ.


ನಿನ್ನೆಯ ದಿನ ದೇವಿಯ ಸನ್ನಿಧಾನಕ್ಕೆ ಹೋಗಿ ಪೂಜೆಯನ್ನು ಮುಗಿಸಿ ಮೂರು ಸಲ ಪ್ರದಕ್ಷಿಣೆ ಹಾಕಿ ಅಡ್ಡ ಬಿದ್ದು ದೇವಿಯನ್ನು ಪ್ರಾರ್ಥನೆ ಮಾಡಿ ಬಂದೆವು. ಆನಂತರ ಸ್ವಲ್ಪ ಸುತ್ತಾಡಿ ಆ ದಿನ ಅಲ್ಲೇ ತಂಗಲು ಸಿದ್ಧರಾಗಿದ್ದೆವು. ಕಾರಣ ನಾವು ಬಂದ ಕೆಲಸ ಮುಗಿದಿರಲಿಲ್ಲ. ಆದರೆ ನನ್ನ ಹಣೆಬರಹ. ಯಾವುದೂ ನನಗೆ‌ ಬಗೆಯಲಿಲ್ಲ. ಯಾಕೆಂದರೆ ಯಾವುದೋ ಒಂದು ಅಪಶಕುನ ಅಡ್ಡ ಬಂತು. ನಾನು ನನ್ನವರು ಎಂದುಕೊಂಡವರ ಜೊತೆ ಜೀವನ ಪೂರ್ತಿ ಸಂತೋಷದಿಂದಿರಲು ವಿಧಿ ಬಿಡುತ್ತಿಲ್ಲ. ಈ ವಿಷಯದಲ್ಲಿ ದೇವಿಯ ದರ್ಶನ ಪಡೆಯಲು ಕಾತುರದಿಂದ ಕಾಯುತ್ತಿದ್ದ ನನಗೆ ರಾತ್ರಿ ವೇಳೆಯೇ ಸನ್ನಿಧಾನದಿಂದ ತಿರುಗಿ ಬರುವಂತಹ ಪರಿಸ್ಥಿತಿ. ಕಾರ್ ಅಲ್ಲಿ ಕೂತದ್ದು ಒಂದೆ ತಡ ಏನೋ ಬಾಯಲ್ಲಿ ನುಸುಳಿಕೊಂಡು ಅಳಲು ಶುರು ಮಾಡಿದೆ. ಆ ದಿನ ನಾನು ಪಿಜಿಯಲ್ಲಿ ಉಳಿದು ಮಾರನೇ ದಿನ ಹಾಸ್ಟೆಲ್ ಗೆ ಬಂದೆ.


ಏನೋ ಕನಸು ಕಂಡ ನಾನು ಕೊನೆಗೂ ಕಣ್ಣೀರೆ ಗತಿಯಾಯಿತು, ನನ್ನ ಹಣೆಬರಹದಲ್ಲಿ ಯಾವುದನ್ನು ಯಾರನ್ನು ಪಡೆಯುವ ಅದೃಷ್ಟದ ಬುತ್ತಿ ನನಗಿಲ್ಲ ಎಂದು ಮನಸಲ್ಲಿ ನೊಂದುಕೊಂಡೆ. ಸಮಾಧಾನ ಮಾಡುವ ಕೈಗಳಿದ್ದರೂ ಮನದ ನೋವು ತಡೆಯಲಾರದು. ಯಾಕೆಂದರೆ ಆ ದಿನದ ದರ್ಶನ ನಮ್ಮ ಕೊನೆಯ ಪ್ರಯತ್ನವಾಗಿತ್ತು. ಅದರಲ್ಲಿ ನಾನು ಮಿಸ್ಸ್ ಆದೆ ಎಂದು ತುಂಬಾ ಬೇಜಾರು. ಆದರೆ ಈ ಪ್ರಯತ್ನ ಸಲಿಗೆ ಬಿಡಬಾರದೆಂದು ಉಳಿದ ಇಬ್ಬರು ದೇವಿಯಲ್ಲಿ ತಮ್ಮ ನೋವುಗಳನ್ನು ಹೇಳಿಕೊಳ್ಳಲು ಕಾಯುತ್ತಾರೆ. ಆದರೆ ನಾನು ದರ್ಶನವನ್ನು ಪಡೆಯುವ ಕನಸು ಕಂಡೆ ಹೊರತು ನನಸಾಗಲಿಲ್ಲ...


-ನಿರೀಕ್ಷಾ ಸಿ

ದ್ವಿತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top