ಕಡಲ ಸೊಬಗು- ವಿಶ್ವ ಸಾಗರದ ದಿನಕ್ಕಾಗಿ ಒಂದು ಕವನ

Upayuktha
0


ಸಾಗರದಿ ಮುಳುಗುತಿಹ ರವಿಯನ್ನು ಕಾಣುತಲಿ

ಸ್ವರ್ಗವೇ ಭುವಿಗಿಳಿದಂತೆ ತೋಷವೇ ತುಂಬುತಿದೆ

ಬಾನಲ್ಲಿ ಕಲಸಿರುವ ಚೆಲು ಬಣ್ಣದೆಡೆಯಲ್ಲಿ

ಇಣುಕುತಲಿ ಬರುತಿಹನು ರಾತ್ರಿ ರಾಜ


ಕಡಲಿನಾ ತಡಿಯಲ್ಲಿ ಕುಳಿತಿರಲು ಈ ಹೊತ್ತು

ಯುಗವೊಂದು ಕ್ಷಣವಾಗಿ ಮೈಮನಕೆ ಪುಳಕ

ಅಬ್ಬರಿಸಿ ಬೊಬ್ಬಿಡುವ ಅಲೆಗಳ ನಾಟ್ಯವನು ನೋಡುತಲಿ

ಮೈಮನದಲಿ ಮೂಡುವುದು ರೋಮಾಂಚವೂ


ಹಾರುತಲಿ ಬೀಳುತಲಿ ಬರುತಿರುವ ತೆರೆಯೊಡನೆ

ಆಡುತಲಿ ಕುಣಿಯುತಿರೇ ಅ

ಆಮೋದವೇ

ಮೈಮನವ ಮರೆಯಿಸುವ ಕಡಲಿನಾ ಸೊಬಗನ್ನು

ನೋಡದಿರೆ ಬಾಳೊಂದು ಬಲು ವ್ಯರ್ಥವೇ


ಕೊಟ್ಟಿರುವೆ ಅಮೂಲ್ಯ ವಸ್ತುಗಳ ನಮಗೆಂದು

ಹರಿಯುತಲಿ ಅಬ್ಬರಿಸಿ ಬೊಬ್ಬಿರಿದು ಮೊರೆದು

ಹಾಕಿದರೂ ತ್ಯಾಜ್ಯವನು ನಿನ್ನೊಡಲಿಗಿಳಿದು

ಕೋಪವನು ತೋರದೆಯೇ ಕೊಡುತಿರುವೆ ಸಕಲವ


-ಪಂಕಜಾ.ಕೆ. ಮುಡಿಪು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter
Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top