|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವಿ ಕಾಲೇಜು: ವಿಶ್ವ ಪರಿಸರ ದಿನಾಚರಣೆ, ಚಿಟ್ಟೆ ಉದ್ಯಾನ ರಚನೆ

ವಿವಿ ಕಾಲೇಜು: ವಿಶ್ವ ಪರಿಸರ ದಿನಾಚರಣೆ, ಚಿಟ್ಟೆ ಉದ್ಯಾನ ರಚನೆ

ಜಾಗೃತಿಯಾಯಿತು, ಇನ್ನು ಗಿಡ ನೆಟ್ಟು ಪೋಷಿಸೋಣ: ಡಾ.ಅನಸೂಯಾ ರೈ


ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ನೇಚರ್ ಕ್ಲಬ್, ಸಸ್ಯಶಾಸ್ತ್ರ ವಿಭಾಗ ಮತ್ತು ಯುವ ರೆಡ್ ಕ್ರಾಸ್ ಘಟಕಗಳು ಜಂಟಿಯಾಗಿ ಶನಿವಾರ ಕಾಲೇಜಿನ ಆವರಣದಲ್ಲಿ ಚಿಟ್ಟೆ ಉದ್ಯಾನವನ್ನು ನಿರ್ಮಿಸುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. 


ಪ್ರಾಂಶುಪಾಲೆ ಡಾ.ಅನಸೂಯಾ ರೈ, ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಮೂಲಕ ಚಿಟ್ಟೆ ಉದ್ಯಾನವನ್ನು ಉದ್ಘಾಟಿಸಿದರು.  “ಯಾವುದೇ ಸದ್ದುಗದ್ದಲ, ಒಣ ಆಡಂಬರ ಮತ್ತು ಪ್ರಚಾರಗಳಿಲ್ಲದೆ ನೀವು ನಿಮಗಾಗಿ ನಿಮಗೆ ಸರಿ ಎನಿಸಿದ ಜಾಗದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ,”  ಎಂದು ಕರೆ ನೀಡಿದರು.  ನೇಚರ್ ಕ್ಲಬ್ನ ಸಂಯೋಜಕ ಡಾ.ಸಿದ್ದರಾಜು ಎಂ.ಎನ್, ಕಳೆ ಬೆಳೆದಿರುವ ಕ್ಯಾಂಪಸ್ನ ಖಾಲಿ ಜಾಗಗಳಲ್ಲಿ ಹೂವಿನ ಗಿಡಗಳು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಸಲಾಗುವುದು, ಎಂದರು. ನೇಚರ್ ಕ್ಲಬ್ ಮತ್ತು ವೈಆರ್ಸಿ ವಿದ್ಯಾರ್ಥಿಗಳು ಚಿಟ್ಟೆಗಳನ್ನು ಆಕರ್ಷಿಸಲು ಕ್ಯಾಂಪಸ್ನಲ್ಲಿ ವಿವಿಧ ಹೂವಿನ ಗಿಡಗಳನ್ನು ನೆಟ್ಟರು.  

 

ಕಾರ್ಯಕ್ರಮದ ಅಂಗವಾಗಿ ಪ್ರತೀಕಾ ಅವರು ಚಿಟ್ಟೆ ಉದ್ಯಾನದ ಮಹತ್ವವನ್ನು ವಿವರಿಸಿದರು. ಪ್ರಜ್ಞಾಶ್ರೀ ಅವರು ವಿಶ್ವ ಪರಿಸರ ದಿನದ ಕುರಿತು ವಿಶ್ವದಲ್ಲಿ ಹಸಿರುಮನೆ ಪರಿಣಾಮವನ್ನು ವಿವರಿಸಿ ಮಾತನಾಡಿದರು. ವೈಆರ್ಸಿಯ ಸಂಯೋಜಕ ಡಾ.ಕುಮಾರಸ್ವಾಮಿ ಎಂ, ತ್ಯಾಜ್ಯ ಬಾಟಲಿಗಳು ಮತ್ತು ದಿನನಿತ್ಯ ಬಳಸಬಹುದಾದ ಪ್ಲಾಸ್ಟಿಕ್ ಕವರ್ಗಳನ್ನು ಬಳಸಿ ಪ್ಲಾಸ್ಟಿಕ್ ಮರುಬಳಕೆ ಮಾದರಿಯನ್ನು ತೋರಿಸಿದರು.

 

ವಿದ್ಯಾರ್ಥಿಗಳು ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸಿದರು ಮತ್ತು ಕಾಲೇಜಿನ ವಿಜ್ಞಾನ ವಿಭಾಗದ ಹಿಂಭಾಗದಲ್ಲಿ ಚಿಟ್ಟೆ ಉದ್ಯಾನವನ್ನು ರಚಿಸಿದರು. ಮೆಲ್ರೀನ್ ಅವರ ದೈವಿಕ ಪ್ರಾರ್ಥನೆ, ಅಶ್ವಿನಿ ಅವರ ಸ್ವಾಗತ ಮತ್ತು ನವಿತಾ ಧನ್ಯವಾದ ಸಮರ್ಪಣೆ ಗಮನ ಸೆಳೆಯಿತು. ನೇಚರ್ ಕ್ಲಬ್ ಕಾರ್ಯಕಾರಿ ಸದಸ್ಯರಾದ ಚೇತನ್, ವೇದಾಶಿನಿ, ಸಂಗೀತಾ ಮತ್ತು ಮೆಲ್ರೀನ್ ಅವರ  ಮೇಲ್ವಿಚಾರಣೆಯಲ್ಲಿ ನಡೆಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post