ಮಂಗಳೂರು: ಹಲಸು ಮೇಳ- ಆಹಾರೋತ್ಸವ ಸಮಿತಿ ಸಭೆ ಶ್ರೀ ಭಾರತೀ ಸಮೂಹ ಸಂಸ್ಥೆಯ ಶಂಕರಶ್ರೀ ಸಭಾಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ಹಲವು ಪ್ರಮುಖ ತೀರ್ಮಾನ ಕೈಗೊಳ್ಳಲಾಯಿತು.
ತಿಂಡಿ ತಿನಸುಗಳಿಗೆ ದರ ನಿಗದಿಪಡಿಸಿ, ವಿವಿಧ ತಿಂಡಿಗಳಿಗೆ ವಿವಿಧ ದರದ ಕೂಪನ್ ಮಾಡಲು ತೀರ್ಮಾನಿಸಲಾಯಿತು.
ಜೂ.19ರಂದು ಶಂಕರಶ್ರೀಯಲ್ಲಿ ಯಾವ ತಿಂಡಿ ತಯಾರಿಸುವುದು? ಅನ್ನಶ್ರೀ ಅನ್ನಕುಟೀರದಲ್ಲಿ ಯಾವ ತಿಂಡಿ ತಯಾರಿಸುವುದು? ಎಂದು ಚರ್ಚಿಸಲಾಯಿತು.
ಎರಡೂ ಕಡೆಗಳಲ್ಲಿ ತಲಾ 10ರಿಂದ 12 ಕೌಂಟರ್ ರಚಿಸಲು ಮತ್ತು ಕಾಲೇಜಿನ ತರಗತಿ ಕೊಠಡಿಯಲ್ಲಿ ಹಪ್ಪಳ, ಉಂಡ್ಳಕಾಳು, ಸೋಂಟೆ, ಹಲ್ವ, ಇತರ ಸಿಹಿತಿಂಡಿಗಳ ಕೌಂಟರ್ ರಚಿಸಲು ನಿರ್ಧರಿಸಲಾಯಿತು.
ಹಲಸಿನಹಣ್ಣು ಮತ್ತು ಹಲಸಿನಕಾಯಿಯ ಸೊಳೆಯನ್ನು ಕೆಜಿ ಲೆಕ್ಕಲ್ಲಿ ಮಾರಾಟ ಮಾಡಬೇಕಾಗಿದ್ದು, ಎಲ್ಲಾ ಕಾರ್ಯಕರ್ತರು ಆಗಮಿಸುವಾಗ ತಮ್ಮ ತಮ್ಮ ವಾಹನಗಳಲ್ಲಿ ಹಲಸು ಹಣ್ಣು ಮತ್ತು ಕಾಯಿಯನ್ನು ತರಬೇಕೆಂದು ವಿನಂತಿಸಲು ತೀರ್ಮಾನಿಸಲಾಯಿತು.
ಮೇಳ ನಡೆಯುವ ದಿನ ಪ್ರತೀ ಕೌಂಟರಿನಲ್ಲಿ ಕನಿಷ್ಠ ಆರೇಳು ಕಾರ್ಯಕರ್ತರಿರಬೇಕಾಗುತ್ತದೆ. ಆದುದರಿಂದ ಪ್ರತೀ ವಲಯದಿಂದ ಹದಿನೈದಕ್ಕೂ ಅಧಿಕ ಮಂದಿ ಕಾರ್ಯಕರ್ತರು ಆಗಮಿಸಬೇಕೆಂದು ವಿನಂತಿಸಲು ತೀರ್ಮಾನಿಸಲಾಯಿತು.
ಸಮಿತಿಯೇ ತೆಂಗಿನೆಣ್ಣೆಯನ್ನು ಒದಗಿಸುತ್ತದೆ. ಆದುದರಿಂದ ಸೋಂಟೆ ಇನ್ನಿತರ ಎಣ್ಣೆ ತಿಂಡಿಗಳನ್ನು ಮಾಡುವವರು ಸಮಿತಿಯಿಂದ ಎಣ್ಣೆ ಪಡೆದುಕೊಳ್ಳುವುದು. ಕಡಿಮೆ ದರದಲ್ಲಿ ಎಣ್ಣೆ ಖರೀದಿಸಲಾಗಿದ್ದು, ಅಪೇಕ್ಷಿತರು ಸಮಿತಿಯ ಗಮನಕ್ಕೆ ತರಬೇಕೆಂದು ತಿಳಿಸಲು ನಿರ್ಧರಿಸಲಾಯಿತು.
ಈಗಾಗಲೇ ನಿರ್ಧರಿಸಿದಂತೆ ಹಲಸುಮೇಳ ಆಹಾರೋತ್ಸವದ ಆದಾಯವನ್ನು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗೆ ಮತ್ತು ವಿವಿವಿಗೆ ನೀಡಲು ನಿರ್ಧರಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಖರ್ಚನ್ನು ಭರಿಸಲು ಧನಸಹಾಯ ಅಪೇಕ್ಷಿಸಲಾಗಿದೆ. ಶ್ರೀ ಭಾರತೀ ಸೌಹಾರ್ದ ಸಹಕಾರಿ ಪ್ಯಾಂಪ್ಲೆಟ್ ಮತ್ತು ಬ್ಯಾನರ್ ವೆಚ್ಚವನ್ನು ಭರಿಸಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ, ಕರ್ಣಾಟಕ ಬ್ಯಾಂಕ್ ಮತ್ತಿತರರಿಗೆ ಪ್ರಾಯೋಜಕತ್ವ ಸಹಕಾರ ನೀಡಲು ವಿನಂತಿಸಲಾಗಿದೆ. ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ಅವರು 1000/- ರೂ. ನೀಡಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ