ಆಳ್ವಾಸ್ ಸಮಾಜಕಾರ್ಯ ವಿಭಾಗ: ‘ರೋಲ್ ಆಫ್ ಪ್ಲೇ ಇನ್ ಹ್ಯೂಮನ್ ವೆಲ್ ಬಿಯಿಂಗ್’ ಕಾರ್ಯಾಗಾರ

Upayuktha
0

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗವು ಬೆಂಗಳೂರಿನ ಹೆಡ್‍ಸ್ಟ್ರೀಮ್ ಕಂಪೆನಿಯ ಜಂಟಿ ಆಶ್ರಯದಲ್ಲಿ ಆಯೋಜಿಸರುವ ‘ರೋಲ್ ಆಫ್ ಪ್ಲೇ ಇನ್ ಹ್ಯೂಮನ್ ವೆಲ್ ಬಿಯಿಂಗ್’ ವಿಷಯದ ಕುರಿತಾದ ಮೂರು ದಿನದ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಮಕ್ಕಳ ಮೇಲೆ ಹೆತ್ತವರ ಅತಿಯಾದ ಕಾಳಜಿ ಅವರ ಬೆಳವಣಿಗೆಯ ಕುಂಠಿತಕ್ಕೆ ಕಾರಣವಾಗಬಹುದು. ಅಂತಹ ಸಂದರ್ಭದಲ್ಲಿ ಪ್ಲೇಥೆರಪಿಯಂತಹ ಚಟುವಟಿಕೆಗಳು ಮಕ್ಕಳಲ್ಲಿ ಸಂಕೋಚನ ಪ್ರವೃತ್ತಿಯನ್ನು ಕಡಿಮೆ ಮಾಡುತ್ತವೆ ಎಂದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಬೆಂಗಳೂರಿನ ಹೆಡ್‍ಸ್ಟ್ರೀಮ್ ಕಂಪೆನಿಯ ಡಿಸೈನ್ ಮತ್ತು ಟ್ರೈನಿಂಗ್ ಮ್ಯಾನೇಜರ್ ತಾರಿಣಿ ಶ್ರೀನಿವಾಸ್ ಹಾಗೂ ಪ್ರೊಜೆಕ್ಟ್ ಕೋ ಆರ್ಡಿನೇಟ್ ದಿವ್ಯ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.


ಕಾರ್ಯಕ್ರಮ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪದವಿ ಸಮಾಜಕಾರ್ಯ ವಿಭಾಗದ ಸಂಯೋಜಕರಾದ ಡಾ.ಮಧುಮಾಲ, ಸಹಾಯಕ ಪ್ರಾಧ್ಯಾಪಕಿ ಡಾ.ಮೂಕಾಂಬಿಕ ಹಾಗೂ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಂಜಲಿನಾ ಸ್ವಾಗತಿಸಿ, ಸಾನಿಕ ನಿರೂಪಿಸಿದರು.


ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಾಗಾರದಲ್ಲಿ ಮಾನವನ ಯೋಗಕ್ಷೇಮದಲ್ಲಿ ಪಾತ್ರಾಭಿನಯದ ಪ್ರಾಮುಖ್ಯತೆ, ಹೋವರ್ಡ್ ಗಾಡ್ರ್ನರ್‍ರ ಬಹು ಬುದ್ಧಿವಂತಿಕೆಯ ಸಿದ್ಧಾಂತ, ಪಾತ್ರಾಭಿನಯದ ಅಭಾವದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಬೇಕಾದ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಮಿರರ್ ಗೇಮ್ಸ್, ಪ್ಲೇ ಹಿಸ್ಟರಿ, ಎನಾಕ್ಟ್‌ಮೆಂಟ್, ಫ್ರೀಝ್ ಗೇಮ್ ಮುಂತಾದ ಚಟುವಟಿಕೆಗಳು ನಡೆದವು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top