|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಲಿಕೆಯ ಪ್ರೌಢಿಮೆ ವೃತ್ತಿಗೆ ಕನ್ನಡಿಯಾಗಬೇಕು: ಮುರಳಿಕೃಷ್ಣ ಕೆ.ಎನ್

ಕಲಿಕೆಯ ಪ್ರೌಢಿಮೆ ವೃತ್ತಿಗೆ ಕನ್ನಡಿಯಾಗಬೇಕು: ಮುರಳಿಕೃಷ್ಣ ಕೆ.ಎನ್

ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗ, ಐಕ್ಯೂಎಸಿ ಮತ್ತು ಸಂಶೋಧನಾ ಕೇಂದ್ರದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ  ನೆಟ್/ಕೆ- ಸೆಟ್ ಪ್ರಿಪರೇಷನ್ ಟೆಕ್ನಿಕ್ಸ್ ಕಾರ್ಯಾಗಾರ


ಪುತ್ತೂರು: ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತೆರೆದುಕೊಳ್ಳಬೇಕು. ಕಲಿಕಾ ಸಾಮಥ್ರ್ಯ ಸ್ಪರ್ಧಾತ್ಮಕವಾಗಿ ಬರುವ ಸವಾಲುಗಳನ್ನು ಎದುರಿಸುವಂತಿರಬೇಕು. ಉದ್ಯೋಗಕ್ಕೆ ಕಾಲಿಡುವ ಘಟ್ಟದಲ್ಲಿ ಸ್ವತಃ ವೇದಿಕೆಗಳನ್ನು ಕಲ್ಪಿಸಿಕೊಂಡು, ಪ್ರೌಢ ಆಲೋಚನೆಗಳನ್ನು ರೂಢಿಸಿಕೊಂಡು ವೃತ್ತಿಪರರಾಗುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಹಾಗೆಯೇ ಪ್ರಸ್ತುತ ತಾಂತ್ರಿಕ ಬದುಕಿಗೆ ಬೇಕಾದಂತೆ ನಮ್ಮನ್ನು ತಯಾರಿ ಮಾಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ. ಎಂದು ವಿವೇಕಾನಂದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ. ಎನ್ ಹೇಳಿದರು.


ಇವರು ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗ, ಐಕ್ಯೂಎಸಿ ಮತ್ತು ಸಂಶೋಧನಾ ಕೇಂದ್ರದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ  ಎನ್‍ಇಟಿ/ಕೆ- ಎಸ್‍ಇಟಿ ಪ್ರಿಪರೇಷನ್ ಟೆಕ್ನಿಕ್ಸ್ ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದ ಅವರು ಶಿಕ್ಷಣ ಮುಗಿದ ಕೂಡಲೇ ವೃತ್ತಿ ಜೀವನಕ್ಕೆ ಕಾಲಿಡಲು ಹಾತೊರೆಯುವ ಯುವಜನತೆ ಉನ್ನತ ಶಿಕ್ಷಣದ ಕುರಿತು ಯೋಚಿಸುವಲ್ಲಿ ವಿಫಲರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕಡೆಗೆ ಮುಖ ಮಾಡಿದಷ್ಟು ನಮ್ಮ ದೇಶ ಅಭಿವೃದ್ಧಿ ಹೊಂದುತ್ತದೆ. ಹಾಗಾಗಿ ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದರು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪೆÇ್ರಫೆಸರ್ ವಿಷ್ಣು ಗಣಪತಿ ಭಟ್ ಮಾತನಾಡಿ ಜೀವನದಲ್ಲಿ ಸಾಧಿಸಲು ಇಚ್ಚಿಸುವವರಿಗೆ ಅನೇಕ ಅವಕಾಶಗಳಿವೆ. ಅವಕಾಶಗಳನ್ನು ನಮ್ಮ ಕಠಿಣ ಪರಿಶ್ರಮದ ಮೂಲಕ ಪಡೆದುಕೊಳ್ಳಬೇಕು. ಉನ್ನತ ಶಿಕ್ಷಣ ಮಾಡಲು ಪ್ರಸ್ತುತ ಅನೇಕ ಸೌಲಭ್ಯಗಳು ಲಭ್ಯವಿದ್ದು ಶಿಕ್ಷಣದ ಜೊತೆಗೆ ಗಳಿಕೆಯನ್ನು ಮಾಡಬಹುದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳು ನಮ್ಮನ್ನು ಉನ್ನತ ಸ್ಥರದ ಹುದ್ದೆಗೆ ಅರ್ಹರನ್ನಾಗಿಸುತ್ತದೆ, ನಮ್ಮ ಜ್ಞಾನಭಂಡಾರ ವೃದ್ಧಿಸಲು ಇಂತಹ ಪರೀಕ್ಷೆಗಳು ಸಹಕಾರಿಯಾಗಿವೆ. ಪರೀಕ್ಷೆಗಳಲ್ಲಿ ಭಾಗವಹಿಸುವ ಮುನ್ನ ಉತ್ತಮ ಪೂರ್ವ ತಯಾರಿ ಮಾಡಿಕೊಳ್ಳುವುದು ಅಗತ್ಯ ಜೊತೆಗೆ ಓದುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದ ಬಗ್ಗೆ ಉತ್ತಮ ಮಾಹಿತಿ ಇದ್ದಾಗ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗುತ್ತದೆ, ಹಾಗಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿತುಕೊಂಡು ಪರೀಕ್ಷೆಗಳಲ್ಲಿ ಭಾಗವಹಿಸಿ ಎಂದರು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಮೈತ್ರಿ ಭಟ್ ಮಾತನಾಡಿ, ಯಾವುದೇ ಪ್ರಯತ್ನಗಳನ್ನು ಮಾಡುವ ಮುಂಚೆ ನಾವು ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸವನ್ನು ಹೊಂದಿರಬೇಕು. ಇಂತಹ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಾಗಿರುವಾಗಲೇ ಭಾಗವಹಿಸುವುದು ಉತ್ತಮ. ಅದೃಷ್ಟ ಮತ್ತು ಜಾಣ್ಮೆ ಜೊತೆಗೆ ಪ್ರಯತ್ನ ಇದ್ದರೆ ಗೆಲುವು ನಮ್ಮದೇ ಎಂದರು.


ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಸಂಶೋಧನಾ ಕೇಂದ್ರದ ಸಂಯೋಜಕ ಡಾ. ಹೆಚ್. ಜಿ ಶ್ರೀಧರ್ ಸ್ವಾಗತಿಸಿ ,ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ವಂದಿಸಿ, ಪ್ರಥಮ ಎಂ.ಕಾಂ ವಿದ್ಯಾರ್ಥಿನಿ ಅಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم