ಶಿಕ್ಷಣದಲ್ಲಾಗುವ ಬದಲಾವಣೆಗಳ ಸ್ವೀಕರಿಸಲು ಸನ್ನದ್ಧರಾಗಬೇಕು: ಡಾ.ಎಸ್. ಸತೀಶ್ಚಂದ್ರ

Upayuktha
0

ಉಜಿರೆ: ಶಿಕ್ಷಣ ಮತ್ತು ಜೀವನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪ ಕಾಯದರ್ಶಿ ಡಾ. ಎಸ್ ಸತೀಶ್ಚಂದ್ರ ಹೇಳಿದರು.


ಶುಕ್ರವಾರ ಉಜಿರೆಯ ಶ್ರೀ ಧ.ಮಂ ಪದವಿ ಕಾಲೇಜಿನ ಸಮ್ಯಗ್ದರ್ಶನ್ ಹಾಲ್‍ನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ನಡೆಸಿದ ‘ಪಿನಾಕಲ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.


ಕಾಲಕ್ಕೆ ತಕ್ಕಂತೆ ಶಿಕ್ಷಣ ಆಧುನೀಕರಣಗೊಳ್ಳುತ್ತದೆ. ಅದನ್ನು ಸ್ವೀಕರಿಸಲು ನಾವು ಸದಾ ಸಿದ್ಧರಿರಬೇಕು. ಶಿಕ್ಷಣ ನಮ್ಮ ಬದುಕಿಗೆ ಭದ್ರ ಬುನಾದಿಯನ್ನು ಹಾಕಿಕೊಡುತ್ತದೆ, ಹಾಗಾಗಿ ಉತ್ತಮ ಜೀವನ ನಡೆಸಲು ನಮಗೆ ಶಿಕ್ಷಣ ಅತೀ ಅತ್ಯಗತ್ಯ. ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ನಮ್ಮ ಯೋಚನಾ ಲಹರಿಯನ್ನು ವೃದ್ಧಿಸಲು ಉತ್ತಮ ಶಿಕ್ಷಣ ಒಂದು ಮಾರ್ಗವಾಗಿದೆ. ಶಿಕ್ಷಣ ನಮ್ಮ ಗಮನವನ್ನು ಗುರಿಯತ್ತ ಕೇಂದ್ರೀಕರಿಸುವಲ್ಲಿ ಮುಖ್ಯಪಾತ್ರ ವಹಿಸುತ್ತದೆ ಎಂದರು.


ನಂತರ ಕಾಲೇಜು ಪ್ರಾಂಶುಪಾಲ ಡಾ. ಪಿ.ಎನ್ ಉದಯಚಂದ್ರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಣ ಅನ್ವೇಷಣಾ ಗುಣಗಳನ್ನ ಹುಟ್ಟುಹಾಕುತ್ತದೆ ಆ ಗುಣಗಳು ನಮ್ಮನ್ನ ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಜೀವನದಲ್ಲಿ ಆತ್ಮವಿಶ್ವಾಸ ಇದ್ದವರು ಮಾತ್ರ ಸ್ಫರ್ಧಿಸಲು ಅರ್ಹರಾಗುತ್ತಾರೆ. ಹಾಗಾಗಿ ನಿಮ್ಮೊಳಗಿನ ಆತ್ಮವಿಶ್ವಾಸವನ್ನ ಹೆಚ್ಚಿಸುವ ಕಡೆಗೆ ಗಮನಹರಿಸಿ ಎಂದರು.


ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಿಕ್ಷಕರಾದ ಡಾ.ರತ್ನಾವತಿ, ಡಾ.ಲಕ್ಮೀನಾರಾಯಣ ಕೆ.ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಗಸ್ಟೀನ್ ಸ್ವಾಗತಿಸಿ, ಅನನ್ಯ ಜೈನ್ ವಂದಿಸಿದರು. ಶ್ರಾವ್ಯ ಕಾರ್ಯಕ್ರಮವನ್ನು ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top