ಪುರುಷೋತ್ತಮ ಬೆಳ್ಮಣ್ ಅವರಿಗೆ ವಾಗೀಶ್ವರೀ ಸಂಮಾನ

Upayuktha
0

ಮಂಗಳೂರು: ಹಿರಿಯ ಹವ್ಯಾಸಿ ಯಕ್ಷಗಾನ ಚೆಂಡೆ ಮದ್ದಳೆ ವಾದಕ ಪುರುಷೋತ್ತಮ ಬೆಳ್ಮನ್ ಅವರಿಗೆ ವಾಗೀಶ್ವರೀ ಶತಮಾನೋತ್ಸವ ಸಂಮಾನವು ಮಂಗಳೂರಿನ ಕುಡ್ತೇರಿ ಮಹಾಮಾಯಾ ದೇವಸ್ಥಾನದಲ್ಲಿ ನಡೆಯಿತು ಬಿ. ನಾರಾಯಣ ಪ್ರಭು ಅವರ ಅಧ್ಯಕ್ಷತೆಯಲ್ಲಿ ಜರಗಿತು.


ಕಳೆದ ಐದು ದಶಕಗಳಿಂದ ಮಂಗಳೂರು ಹಾಗೂ ಮುಂಬೈಯ ಹತ್ತಾರು ಹವ್ಯಾಸಿ ಸಂಘಗಳಲ್ಲಿ ಚೆಂಡೆ ಮದ್ದಳೆ ವಾದಕರಾಗಿ, ಸಂಘಟಕರಾಗಿ ಕಲಾಸೇವೆಮಾಡಿರುವ, ಲಯನ್ಸ್ ಸೇವಾಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಹಿರಿಯ ಕಲಾವಿದ ಪುರುಷೋತ್ತಮ ಬೆಳ್ಮಣ್ ಅವರನ್ನು ಭಾಗವತ ಅಶೋಕ್ ಬೋಳೂರು ಅಭಿನಂದಿಸಿದರು.


ಮುಂಬೈಯ ಪ್ರತಿಷ್ಟಿತ ಯಕ್ಷಗಾನ ಸಂಘಗಳಲ್ಲಿ ಹಾಗೂ ಹಿರಿಯ ವೃತ್ತಿಪರ ಭಾಗವತರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡ ಸಂಮಾನಿತರು ವಾಗೀಶ್ವರೀ ಸಂಘದ ಶತಮಾನೋತ್ಸವ ಕಾರ್ಯಕ್ರಮ, ಸಂಸ್ಮರಣೆ, ಸಮ್ಮಾನ ಸ್ತುತ್ಯರ್ಹ ಎಂದರು.


ಭಾಗವತ ಯೋಗೀಶ್ ಆಚಾರ್ಯ ಸಂಸ್ಮರಣೆ:

ಹವ್ಯಾಸಿ ಭಾಗವತನಾಗಿ ಹಲವು ದಶಕಗಳಕಾಲ ವಾಗೀಶ್ವರೀ ಸಂಘದಲ್ಲಿ ಸಕ್ರಿಯರಾಗಿದ್ದ ಕೀರ್ತಿಶೇಷ  ಯೋಗೀಶ್ ಆಚಾರ್ಯರ ಸಂಸ್ಮರಣೆ ಮಾಡಿದ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿಯವರು ನಗರದ ಹೂವಿನ ವ್ಯಾಪಾರಿಯಗಿದ್ದ ಆಚಾರ್ಯರ ಕಲಾಸಾಧನೆಯನ್ನು ನೆನಪಿಸಿದರು. 


ಮುಖ್ಯ ಅತಿಥಿಯಾಗಿದ್ದ ಉದ್ಯಮಿ ರವೀಂದ್ರ ಮಲ್ಯ ಅವರು ಯಕ್ಷಗಾನಕ್ಕೆ ಪ್ರೇಕ್ಷಕರ ಕೊಡುಗೆ ಅಪಾರ.ಇಂತಹ ಕಾರ್ಯಕ್ರಮಗಳ ಮೂಲಕ ಇನ್ನಷ್ಟು ಪ್ರೇಕ್ಷಕರು ಯಕ್ಷಗಾನದತ್ತ ಆಕರ್ಷಿತರಾಗಲಿ ಎಂದು ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘಕ್ಕೆ ಶುಭವನ್ನು ಹಾರೈಸಿದರು.


ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಶಿವಪ್ರಸಾದ್ ಪ್ರಭು, ಶೋಭಾ ಐತಾಳ್ ಉಪಸ್ಥಿತರಿದ್ದರು.


ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಯೋಗದಲ್ಲಿ ನಡೆಯುತ್ತಿರುವ ಶತಮಾನೋತ್ಸವ ಸರಣಿಯ 14ನೇ ಸಭಾ ಕಾರ್ಯಕ್ರಮದ ಬಳಿಕ ಸಂಘದ ಕಲಾವಿದರಿಂದ "ಚೂಡಾಮಣಿ" ತಾಳಮದ್ದಳೆ ಜರಗಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top