|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದಯಾನಂದ ಕೋಡಿಕಲ್‌ಗೆ ವಾಗೀಶ್ವರೀ ಸಂಮಾನ

ದಯಾನಂದ ಕೋಡಿಕಲ್‌ಗೆ ವಾಗೀಶ್ವರೀ ಸಂಮಾನ


ಮಂಗಳೂರು: ಯಕ್ಷಗಾನ ಭಾಗವತ, ಚೆಂಡೆ ಮದ್ದಳೆ ವಾದಕ, ಯಕ್ಷಗುರು ದಯಾನಂದ ಕೋಡಿಕಲ್ ಅವರಿಗೆ ವಾಗೀಶ್ವರೀ ಶತಮಾನೋತ್ಸವ ಸಂಮಾನವು ಮಂಗಳೂರಿನ ಕುಡ್ತೇರಿ ಮಹಾಮಾಯಾ ದೇವಸ್ಥಾನದಲ್ಲಿ ಗಣೇಶ್ ಬಜಾರ್‌ನ ಮಾಲಕ ಎಚ್. ನರೇಂದ್ರ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.


ಕಳೆದ ಮೂರು ದಶಕಗಳಿಂದ ಕರಾವಳಿಯ ಹಲವು ಹವ್ಯಾಸಿ ಸಂಘಗಳಲ್ಲಿ ಹಾಗೂ ವಿವಿಧ ಮೇಳಗಳಲ್ಲಿ ಚೆಂಡೆ ಮದ್ದಳೆ ವಾದಕರಾಗಿ, ಭಾಗವತರಾಗಿ ಪ್ರಸಿದ್ದಿ ಪಡೆದಿರುವ, ಪ್ರಸ್ತುತ ಹಿರಿಯಡ್ಕ ಮೇಳದಲ್ಲಿ ಭಾಗವತರಾಗಿ ಕಲಾವ್ಯವಸಾಯ ಗೈಯ್ಯುತ್ತಿರುವ ಶ್ರೀ ದಯಾನಂದ ಕೋಡಿಕಲ್ ಅವರ ಕಲಾಸಾಧನೆಯನ್ನು ಪರಿಚಯಿಸಿ  ಶೋಭಾ ಐತಾಳ್ ಅಭಿನಂದಿಸಿದರು ಹಾಗೂ ದಯಾನಂದ ಅವರ ವೃತ್ತಿ ಜೀವನಕ್ಕೆ ವಾಗೀಶ್ವರೀ ಸಂಘದ ಕೊಡುಗೆಯನ್ನು ನೆನಪಿಸಿದರು‌.


ಭಾಗವತ ಸೋಮಶೇಖರ ಸಂಸ್ಮರಣೆ:

ಹವ್ಯಾಸಿ ಭಾಗವತನಾಗಿ ಹಲವು ದಶಕಗಳ ಕಾಲ ಉರ್ವ ಮಾರಿಗುಡಿಯ ಶ್ರೀ ಜಗದಾಂಬಾ ಯಕ್ಷಗಾನ ಸಂಘದಲ್ಲಿ ಪ್ರಧಾನ ಭಾಗವತರಾಗಿ ಸಕ್ರಿಯರಾಗಿದ್ದ ಕೀರ್ತಿಶೇಷ ಸೋಮಶೇಖರ ಅವರ ಸಂಸ್ಮರಣೆ ಮಾಡಿದ ಅಶೋಕ ಬೋಳೂರು ಅವರು "ಎನ್.ಸಿ.ಸಿ ಯಲ್ಲಿ ಉದ್ಯೋಗಿಯಾಗಿದ್ದು, ಪ್ರತೀ ವಾರ ತಪ್ಪದೆ ಹಾಜರಾಗಿ ಭಾಗವತಿಕೆ ಮಾಡಿ ಸಂಘವನ್ನು ಮುನ್ನಡೆಸಿದ ಕಲಾಸಾಧನೆಯನ್ನು ನೆನಪಿಸಿದರು.

ಸೋಮಶೇಖರ ಅವರು ಬಿಜೈ ಯುವಕ ಸಂಘದ ಕದ್ರಿಯ ಜಾತ್ರೆಯ ಆಟದಲ್ಲಿ ಪರಿಸರದ ಅನೇಕ ಕಲಾವಿದರಿಗೆ ಅವಕಾಶ ಕಲ್ಪಿಸಿದ್ದರು.

ಮುಖ್ಯ ಅತಿಥಿಯಾಗಿದ್ದ ರಂಗನಟ, ಚಿತ್ರನಟ ಪ್ರದೀಪ ಆಳ್ವ ಕದ್ರಿ ಅವರು ಇಂತಹ ಕಾರ್ಯಕ್ರಮಗಳ ಮೂಲಕ ಇನ್ನಷ್ಟು ಪ್ರೇಕ್ಷಕರು, ಕಲಾವಿದರು ಯಕ್ಷಗಾನದತ್ತ ಆಕರ್ಷಿತರಾಗಲಿ ಎಂದು ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘಕ್ಕೆ ಶುಭವನ್ನು ಹಾರೈಸಿದರು.

ಶಿವಷ್ರಸಾದ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.

ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಕಾರ್ಯಾಧ್ಯಕ್ಷ ನಾಗೇಶ್ ಪ್ರಭು, ಉಪಾಧ್ಯಕ್ಷೆ ಪ್ರಪುಲ್ಲಾ ನಾಯಕ್  ಉಪಸ್ಥಿತರಿದ್ದರು.

ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಯೋಗದಲ್ಲಿ ನಡೆಯುತ್ತಿರುವ ಶತಮಾನೋತ್ಸವ ಸರಣಿಯ 17 ನೇ ಸಭಾ ಕಾರ್ಯಕ್ರಮದ ಬಳಿಕ ಸಂಘದ ಕಲಾವಿದರಿಂದ "ಲಂಕಾ ದಹನ" ತಾಳಮದ್ದಳೆ ಜರಗಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post