ಯುವ ಪೀಳಿಗೆಗೆ ತಾಳಮದ್ದಳೆ ಕಲಿಸುವ ಅನಿವಾರ್ಯತೆ ಇದೆ: ಸಂಜೀವ ಶೆಟ್ಟಿ

Upayuktha
0



ಮಂಗಳೂರು: "ಯುವ ಜನಾಂಗವು ಯಕ್ಷಗಾನ ಬಯಲಾಟ ವನ್ನು ನೋಡಿ ನೃತ್ಯ ಕಲಿತು ವೇಷಧಾರಿಗಳಾಗುತ್ತಿರುವುದು ಸ್ವಾಗತಾರ್ಹ. ಆದರೆ ತಾಳಮದ್ದಳೆ ಅರ್ಥಧಾರಿಗಳಾಗುವಲ್ಲಿ ಯುವಜನಾಂಗ ಉತ್ಸಾಹ ತೋರುವುದಿಲ್ಲ. ಆ ದಿಕ್ಕಿನಲ್ಲಿ ಚಿಂತನೆ ನಡೆಯಬೇಕು. ಸಂಘದ ತಾಳಮದ್ದಳೆ ಕೂಟಗಳಿಗೆ ಕಾಯಕಲ್ಪ ಬೇಕು. ವಾಗೀಶ್ವರೀ ಸಂಘದ ಶತಮಾನೋತ್ಸವದ ಪರಿಕಲ್ಪನೆಯ ಕಾರ್ಯಕ್ರಮಗಳು ಅಭಿನಂದನೀಯ" ಎಂದು ಹಿರಿಯ ಅರ್ಥಧಾರಿ, ಲಯನ್ಸ್ ಸೇವಾ ಕ್ಷೇತ್ರದ ಹಿರಿಯ ನಾಯಕ ಬೊಳಂತೂರುಗುತ್ತು ಸಂಜೀವ ಶೆಟ್ಟಿ ಅವರು ವಾಗೀಶ್ವರೀ ಸಂಘದಲ್ಲಿ  ಅರ್ಥ ಹೇಳಿದ್ದ ನೆನಪನ್ನು ಹಂಚಿಕೊಂಡರು.


ಮಂಗಳೂರಿನ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಪ್ರಶಸ್ತಿ- 13ರ ಸಂಮಾನ ಭಾಜನರಾಗಿ ಅವರು ಮಾತನಾಡಿದರು.


ಬಸ್ಸ್ ಮಾಲಕ, ಕಲಾಪೋಷಕ ಎ.ಕೆ.ಜಯರಾಮ ಶೇಖ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಅಭಿನಂದಿಸಿದರು.


ಮುಖ್ಯ ಅತಿಥಿ ಜನಾರ್ಧನ ಹಂದೆ ಅವರು  ಸ್ವರಚಿತ ಕವನ ವಾಚನದೊಂದಿಗೆ ಶ್ರೀ ವಾಗೀಶ್ವರೀ ಶತಮಾನೋತ್ಸವದ ಸರಣಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 


ಅರ್ಕುಳ ಶಿವರಾಯ ಆಚಾರ್ಯ ಸಂಸ್ಮರಣೆ  

ವಾಗೀಶ್ವರೀ ಸಂಘದಲ್ಲಿ ಭಾಗವತನಾಗಿ, ಅರ್ಥಧಾರಿಯಾಗಿ ಹಲವು ವರ್ಷ ಸೇವೆಗೈದಿದ್ದ ಹಿರಿಯ ಕಲಾವಿದ ಅರ್ಕುಳ ಶಿವರಾಯ ಆಚಾರ್ಯ ಅವರ ಸಂಸ್ಮರಣೆ ಮಾಡಲಾಯಿತು. ಅವರು ಕೌರವ, ಜರಾಸಂಧ, ಭೀಮ, ರಾವಣ ಮೊದಲಾದ ಪಾತ್ರ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದಿದ್ದರು.


ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಭಾಗಿತ್ವದಲ್ಲಿ 50 ಭಾನುವಾರ ನಿರಂತರ "ಸಂಮಾನ, ಸಂಸ್ಮರಣೆ, ತಾಳಮದ್ದಳೆ "ಯು ಮಹಾಮಾಯಾ ದೇವಸ್ಥಾನದ ಅಂಗಣದಲ್ಲಿ ನಡೆಯುತ್ತಿದೆ.


ಸಂಘದ ಗೌರವಾಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಅಧ್ಯಕ್ಷ ಶ್ರೀನಾಥ್ ಪ್ರಭು, ಕಾರ್ಯಾಧ್ಯಕ್ಷ ನಾಗೇಶ್ ಪ್ರಭು, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ.ಎಸ್. ಭಂಢಾರಿ, ಶಿವಪ್ರಸಾದ್ ಪ್ರಭು  ಉಪಸ್ಥಿತರಿದ್ದರು.


ಯಕ್ಷಗುರು ಅಶೋಕ ಬೋಳೂರು ಅಭಿನಂದನಾ ಪತ್ರ ವಾಚಿಸಿದರು. ಪ್ರಧಾನ ಸಂಚಾಲಕ ಯಕ್ಷಗಾನ ಅಕಾಡಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಎಫ್.ಎಚ್.ಒಡೆಯರ್ ನೆನಪು:

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ವೈದ್ಯ, ಯಕ್ಷಗಾನ ಸಂಘಟಕ, ಅರ್ಥಧಾರಿ ದಿ. ಎಫ್.ಎಚ್. ಒಡೆಯರ್ ಅವರನ್ನು ಬಾಲ್ಯದಲ್ಲಿ ನೋಡಿದ್ದೆ ಎಂದು ನೆನಪಿಸಿ ಕೊಂಡ ಜಯರಾಮ ಶೇಖ ಅವರು ಒಡೆಯರ್ ಗರಡಿಯಲ್ಲಿ ಪಳಗಿದ್ದ ತಮ್ಮ ಹಿರಿಯರೊಂದಿಗಿನ ಒಡೆಯರ್ ಸಾಹಚರ್ಯವನ್ನು ಸ್ಮರಿಸಿದರು. ಒಡೆಯರ್ ಅವರು  ಮಸಲ್ಮಾನರಾಗಿದ್ದು ಕುರಾನ್ ನೀತಿವಾಕ್ಯಗಳನ್ನು ಅರ್ಥಗಾರಿಕೆಯಲ್ಲಿ ಸೊಗಸಾಗಿ ಪೋಣಿಸುತ್ತಿದ್ದರು. ವಾಗೀಶ್ವರೀ ಸಂಘದಲ್ಲಿ ಹಲವಾರು ವರ್ಷ ಅರ್ಥಧಾರಿಗಳಾಗಿ ಪಾಲ್ಗೊಂಡಿದ್ದರು.


ಶ್ರೀರಾಮ ಯಕ್ಷಗಾನ ಮಂಡಳಿ ಬಿ.ಸಿ.ರೋಡ್ ಇದರ ಸದಸ್ಯರ ಕೂಡುವಿಕೆಯಲ್ಲಿ "ಸೀತಾನ್ವೇಷಣೆ" ತಾಳಮದ್ದಳೆ ಜರಗಿತು.


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top