||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಫಿ ನಾಡಿಗೆ ವಿದ್ಯಾರ್ಥಿಗಳ ಪಯಣ

ಕಾಫಿ ನಾಡಿಗೆ ವಿದ್ಯಾರ್ಥಿಗಳ ಪಯಣ


ಭೂಲೋಕದ ಸ್ವರ್ಗ, ಮಂಜಿನ ಸ್ಪರ್ಶದಿಂದ ಸದಾ ಹಸಿರಿನಿಂದ ಕೂಡಿರುವ ಮಡಿಕೇರಿ ತಲಕಾವೇರಿಯ ಪುಣ್ಯ ಭೂಮಿಯಲ್ಲಿ, ಭಗಂಡೇಶ್ವರ ಪುಣ್ಯ ನೆಲೆ ಮಡಿಕೇರಿ. ಸದಾ ತಣ್ಣನೆ ಬೀಸುವ ತಣ್ಣನೆಯ ಗಾಳಿ ಅದಕ್ಕೆ ಸರಿ ಎಂಬಂತೆ ಜಲಧಾರೆಗಳ ನರ್ತನ. ಈ ಸುಂದರ ತಾಣ ಸುಮಧುರ ನೋಟಗಳು ಮೈ ಮನ ನವಿರುಗೊಳಿಸುತ್ತದೆ.


ಪುತ್ತೂರು ವಿವೇಕಾನಂದ ಕಾಲೇಜಿನಿಂದ ಹೊರಟ ನಮ್ಮ ಪಯಣವು ಕಾಫಿ ನಾಡಿನೆಡೆಗೆ ಸಾಗಿತ್ತು. ಹಸಿರುಗಳಿಂದ ಕಣ್ಣು ಸೆಳೆಯುವಂತಿದ್ದ ಜೋಡುಪಾಲದಲ್ಲಿ ಬೆಳಗಿನ ಪಲಹಾರ ಮುಗಿದು ನಮ್ಮ ಪಯಣವು ಭಾಗಮಂಡಲದ ಭಗಂಡೇಶ್ವರ ಸನ್ನಿಧಾನದೆಡೆಗೆ ಸಾಗಿತ್ತು. ಅದಿದೇವತೆಗಳಾದ ಭಗಂಡೇಶ್ವರ, ವಿಷ್ಣು, ಸುಬ್ರಮಣ್ಯ ದೇವರುಗಳ ಗುಡಿಯನ್ನು ಒಂದೇ ಕಡೆ ಕಾಣಬಹುದಾಗಿದೆ. ಅಲ್ಲಿಂದ 8 ಕಿಲೋಮೀಟರ್ ಸಾಗಿದರೆ ಕಾವೇರಿ ನದಿಯ ಉಗಮ ಸ್ಥಾನವಾದ ತಳಕಾವೇರಿಯನ್ನು ಕಾಣಬಹುದು. ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿದ್ದು ಅದರೊಂದಿಗೆ ಎಲ್ಲರಿಗೂ ಮುದ ನೀಡುವಂತೆ ಮಂಜಿನಿಂದ ಕೂಡಿದ ವಾತಾವರಣ ಅದೇ ರೀತಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ವಾತಾವರಣ ಮೈ ಮನ ನವಿರುಗೊಳಿಸುವಂತೆ ಮಾಡುತ್ತದೆ. ತಿಳಿ ನೀರಾ ತನ್ನನೆಯ ಗಾಳಿಯಲ್ಲಿ ಸಾಗಿದ ನಮ್ಮ ಪಯಣದಲ್ಲಿ ಮಧ್ಯಾಹ್ನದ ಉಪಹಾರವನ್ನು ಭಗಂಡೇಶ್ವರ ಸನ್ನಿದಿಯಲ್ಲಿ ಮುಗಿಸಿ, ಕುಶಾಲನಗರದ ಗೋಲ್ಡನ್ ಟೆಂಪಲ್ ನಡೆಗೆ ವಿದ್ಯಾರ್ಥಿ ಪಯಣ ಸಾಗಿತ್ತು. ಚೀನಾದ ನಿರಾಶ್ರಿತರಾದ ಈ ಟಿಬೇಟಿಯನ್ನರು ಕುಶಾಲನಗರ ಬಳಿಯ ಬೈಲುಕುಪ್ಪೆ ಬೆಂಗಾಡಿನಲ್ಲಿ ಬಂದು ನೆಲೆ ನಿಂತಿದ್ದಾರೆ.


ಶೈಕ್ಷಣಿಕ ಪ್ರವಾಸಕೈಗೊಂಡ ಮುಖ್ಯ ಉದ್ದೇಶ ವಿದ್ಯಾರ್ಥಿಗಳು ಐತಿಹಾಸಿಕ ಸ್ಥಳಗಳಿಗೆ ಬೇಟಿ ನೀಡಿ ಇದರ ಬಗ್ಗೆ ವರದಿಯನ್ನು ತಯಾರಿಸುವುದು ಹಾಗೂ ಮುಂದೆ ಐತಿಹಾಸಿಕ ಸ್ಥಳಗಳ ಬಗ್ಗೆ ಪ್ರೊಜೆಕ್ಟ್ ಸಿದ್ಧಪಡಿಸುವುದು ವಿದ್ಯಾರ್ಥಿಗಳು ಎಲ್ಲಾ ಅತ್ಯಂತ ಉತ್ಸಾಹದಿಂದ ಈ ಶೈಕ್ಷಣಿಕ ಪ್ರವಾಸದಲ್ಲಿ ಪಾಲ್ಗೊಂಡಿದ್ದು ವರದಿಯನ್ನು ತಯಾರಿಸಿ ತಮ್ಮ ತಮ್ಮ ಶೈಕ್ಷಣಿಕ ಸಲಹೆಗಾರರಿಗೆ ಒಪ್ಪಿಸುವವರಿದ್ದಾರೆ.

ಅನಿತಾ ಕಾಮತ್

ರಾಜ್ಯಶಾಸ್ತ್ರ ಮುಖ್ಯಸ್ಥರು


ದಾಲಯೈ ಲಾಮನ ನೇತೃತ್ವದಲ್ಲಿ ನಿರ್ಮಾಣಗೊಂಡ ಈ ಮಂದಿರವು ಸಾಂಸ್ಕೃತಿಕವಾಗಿ ತನ್ನದೇ ಆದಂತಹ ಚಾಪನ್ನು ಮೂಡಿಸಿದೆ. ಮಂದಿರದ ಕಲಾ ಶೈಲಿಗಳು ಹಾಗೂ ಅಲ್ಲಿಯ ಜನರುಗಳ ವೇಷ 

ಭೂಷಣ ಆಧುನಿಕತೆಗೆ ಮಾರುಹೋಗುತ್ತಿರುವ ಈ ಕಾಲದಲ್ಲಿ ,ತಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಈ ಟಿಬೇಟಿಯನ್ನರು ತಮ್ಮದೇ ಆದಂತಹ ಪಾತ್ರವನ್ನು ವಹಿಸಿದ್ದಾರೆ .ಅವರುಗಳ ಪ್ರಾರ್ಥನಾ ಶೈಲಿ ,ನೃತ್ಯ ಗಳನ್ನು ನೋಡುವ ಭಾಗ್ಯ  ನಮ್ಮದಾಗಿತ್ತು. ಅದೇ ರೀತಿ ಧ್ಯಾನ ಕೇಂದ್ರ, ಸನ್ಯಾಸಿನಿಯರ ಬೌದ್ಧ ವಿಹಾರ, ಬೌದ್ಧ ಭಿಕ್ಷುಗಳ ಮಹಾವಿದ್ಯಾಲಯ, ಹೀಗೆ ಎಂಟು ಸ್ತುಪಗಳು ಹೀಗೆ ತನ್ನದೇ ವೈಶಿಷ್ಟತೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ.


ನಮಗೆ ಹಮ್ಮಿಕೊಂಡ ಈ ಶೈಕ್ಷಣಿಕ ಪ್ರವಾಸದಲ್ಲಿ  ಶಿಕ್ಷಣದ ಜೊತೆ ಇನ್ನಿತರೆ ಚಟುವಟಕೆಗಳಲ್ಲಿ ಯಾವರೀತಿ ತೊಡಗಿಸಿಕೊಳ್ಳಬಹುದು ಹಾಗೂ ಆ ಸ್ಥಳಗಳಲ್ಲಿನ ಐತಿಹಾಸಿಕ ಹಿನ್ನೆಲೆಗಳ ಬಗೆಗೆ ತಿಳಿಸಿ ಕೊಟ್ಟರು.

ನಿರಂಜನ್. ಕೆ 

ಪತ್ರಿಕೋದ್ಯಮ ವಿದ್ಯಾರ್ಥಿ


ತದನಂತರ ನಮ್ಮ ಸಂಜೆಯ ಪಯಣ ರಾಜಾಸೀಟ್ ನಡೆಗೆ ಸಾಗಿತ್ತು. ಕೊಡಗಿನ ಪ್ರವಾಸಿ ತಾಣಗಳ ಪೈಕಿ ರಾಜಾಸೀಟ್ ಪ್ರಮುಖ ಸಂದರ್ಶನ ತಾಣವಾಗಿದೆ. ಇಲ್ಲಿ ಹೂಗಳ ರಾಶಿ ಕಾರಂಜಿಗಳ ಉದ್ಯಾನವನ, ಈ ಕಾರಂಜಿ ಸಂಗೀತ ಮಯವಾಗಿದ್ದು, ಬಣ್ಣ ಬಣ್ಣದ ನೀರನ್ನು ಸಂಗೀತದ ಲಯಕ್ಕೆ ತಕ್ಕಂತೆ ಹಾರಿಸಲಾಗುತ್ತದೆ. ಮಡಿಕೇರಿ ನಗರದ ಅಂಚಿನಲ್ಲಿ ನಿರ್ಮಾಣವಾಗಿರುವ ಈ ಉದ್ಯಾನವನದಿಂದ ಇಣುಕಿ ನೋಡಿದರೆ ಒಂದೆಡೆ ಮೈ ಜುಂ ಎನಿಸುವ ಕಂದಕ ಕಂಡರೆ ಮತ್ತೊಂದೆಡೆ ಪ್ರಕೃತಿಯ ವಿಹಂಗಮ ನೋಟ ಮನವನ್ನು ಪುಳಕಗೊಳಿಸುತ್ತದೆ. ಇಲ್ಲಿಂದ ನಮ್ಮ ಪ್ರವಾಸಕ್ಕೆ ಅಂತ್ಯವನ್ನು ಹಾಡಿ ಮನೆಗಳೆಡೆಗೆ ನಮ್ಮ ಪಯಣವನ್ನು ಬೆಳೆಸಿದೆವು.


- ಯಶಸ್ವಿನಿ

ಬಿ. ಎ ವಿದ್ಯಾರ್ಥಿನಿ

ವಿವೇಕಾನಂದ ಕಾಲೇಜು ಪುತ್ತೂರು

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


0 Comments

Post a Comment

Post a Comment (0)

Previous Post Next Post