ಉಡುಪಿ: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಕಾರ್ಯಾಗಾರ

Upayuktha
0

ಉಡುಪಿ: ಪೋಕ್ಸೋ ಕಾಯ್ದೆ 2012 ನ್ನು ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವರ್ತನೆಗಳಂತಹ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ, ಮಕ್ಕಳ ಹಿತಾಸಕ್ತಿ ಮತ್ತು ಒಳಿತಿನ ರಕ್ಷಣೆಗಾಗಿ ಜಾರಿಗೆ ತರಲಾಗಿತ್ತು. ಈ ಕಾಯ್ದೆಯು 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಯಾವುದೇ ವ್ಯಕ್ತಿಯನ್ನು ಮಗು ಎಂದು ವ್ಯಾಖ್ಯಾನಿಸುತ್ತದೆ. ಮತ್ತು ಆ ಮಗುವಿನ ದೈಹಿಕ ಆರೋಗ್ಯ, ಭಾವನಾತ್ಮಕ, ಬೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಪ್ರತೀ ಹಂತದಲ್ಲಿಯೂ ಆದ್ಯತೆ ನೀಡಿ ಖಾತ್ರಿಪಡಿಸುತ್ತದೆ. ಈ ಕಾಯ್ದೆ ಲಿಂಗ ತಟಸ್ತವಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿಯಾದ ಡಾ.ಪ್ರಮೀಳಾ ವಾಜ್ ತಿಳಿಸಿದರು.


ಅವರು ಸದ್ರಿ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಾ, ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ (ಪೋಕ್ಸೋ) ಕಾಯ್ದೆ-2012 ರ ಸೆಕ್ಷನ್ -4, ಸೆಕ್ಷನ್ -5, ಸೆಕ್ಷನ್ -6, ಸೆಕ್ಷನ್ -9, ಸೆಕ್ಷನ್ -15 ಮತ್ತು ಸೆಕ್ಷನ್ -೧೫ ಮತ್ತು ಸೆಕ್ಷನ್ -42 ಕ್ಕೆ ತಿದ್ದುಪಡಿಗಳನ್ನು ಮಕ್ಕಳ ಲೈಂಗಿಕ ದುರುಪಯೋಗವನ್ನು ಸೂಕ್ತ ರೀತಿಯಲ್ಲಿ ಪರಿಹಸುವುದಕ್ಕಾಗಿ ಮಾಡಲಾಗಿದೆ. ಈ ಸುಧಾರಣೆಯನ್ನು ದೇಶದಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದುರುಪಯೋಗದ ಪ್ರಕರಣಗಳ ಓಘವನ್ನು ನಿಯಂತ್ರಿಸಲು ಕಠಿಣ ಕ್ರಮಗಳು ಅವಶ್ಯವೆಂಬ ಹಿನ್ನೆಲೆಯಲ್ಲಿ ಮಾಡಲಾಗಿದೆ.ಪೋಕ್ಸೋ ಕಾಯ್ದೆ, 2012 ರ ಸೆಕ್ಷನ್ -14 ಮತ್ತು ಸೆಕ್ಷನ್ -15 ನ್ನು ಕೂಡಾ ಮಕ್ಕಳನ್ನು ಅಶ್ಲೀಲತೆಗೆ ದೂಡುವ ಹಾವಳಿಯನ್ನು ನಿಯಂತ್ರಿಸಲು ತಿದ್ದುಪಡಿಗೆ ಒಳಪಡಿಸಲು ಪ್ರಸ್ತಾವಿಸಲಾಗಿದೆ.  


ಮಗುವೊಂದು ಅಶ್ಲೀಲ ಭಂಗಿಯಲ್ಲಿರುವ ವಸ್ತುವನ್ನು/ ಚಿತ್ರವನ್ನು ವರದಿ ಮಾಡುವುದಕ್ಕೆ ಅಥವಾ ಅದನ್ನು ನಾಶ ಮಾಡದೇ ಇರುವುದಕ್ಕೆ, ತೆಗೆದುಹಾಕದೇ ಇರುವುದಕ್ಕೆ ದಂಡವನ್ನು ವಿಧಿಸುವ ಪ್ರಸ್ತಾವ ಇದರಲ್ಲಿದೆ. ಇಂತಹ ಚಿತ್ರಗಳನ್ನು ವರ್ಗಾವಣೆ ಮಾಡುವುದಕ್ಕಾಗಿ, ಪ್ರಚುರಪಡಿಸುತ್ತಿರುವುದಕ್ಕಾಗಿ, ಯಾವುದೇ ರೀತಿಯಲ್ಲಿ ಅದನ್ನು ನಿರ್ವಹಿಸುತ್ತಿದ್ದಲ್ಲಿ ಅಂತಹ ವ್ಯಕ್ತಿಗೆ ಜೈಲು ವಾಸ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಆದರೆ ನ್ಯಾಯಾಲಯದಲ್ಲಿ ಇದನ್ನು ಸಾಕ್ಷಿಗಾಗಿ ಬಳಸಲು ಸೂಚಿತ ರೀತಿಯಲ್ಲಿ ವರದಿ ಮಾಡಿದ್ದರೆ ಅದಕ್ಕೆ ವಿನಾಯತಿ ಇದೆ.ಮಕ್ಕಳು ಒಳಗೊಂಡ ಯಾವುದೇ ಅಶ್ಲೀಲ ವಸ್ತುಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ದಾಸ್ತಾನು ಮಾಡಿಡುವುದನ್ನು/ ಹೊಂದಿರುವುದನ್ನು ನಿರ್ಬಂಧಿಸಲು ಇಂತಹ ಕೃತ್ಯ ಎಸಗಿದವರಿಗೆ ದಂಡದ ಪ್ರಸ್ತಾವನೆಗಳನ್ನೂ ಹೆಚ್ಚು ಬಿಗಿಗೊಳಿಸಲಾಗಿದೆ ಎಂದು ಅಭಿಪ್ರಾಯ ಪಟ್ಟರು.


ಕಾರ್ಯ ಕ್ರಮದ ಅಧ್ಯಕ್ಷರಾಗಿ ಅರ್ಥಶಾಸ್ತ್ರ ವಿಭಾಗದ ಸಹ ಪಾಧ್ಯಾಪಕರಾದ ಶ್ರೀ ನಿವಾಸ ಶೆಟ್ಟಿಯವರು ಮಾತನಾಡು್ತಾ ಈ ಕಾಯ್ದೆಯಲ್ಲಿ ಕಠಿಣವಾದ, ಬಲವಾದ ದಂಡದ ಪ್ರಸ್ತಾವನೆಗಳು ಇರುವುದರಿಂದ ಮಕ್ಕಳ ಲೈಂಗಿಕ ದುರ್ಬಳಕೆಯನ್ನು ಈ ತಿದ್ದುಪಡಿ ತಡೆಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಒತ್ತಡದ ಸಂದರ್ಭಗಳಲ್ಲಿ ಅಪಾಯಕ್ಕೀಡಾಗುವ ಸಾಧ್ಯತೆ ಇರುವ ಮಕ್ಕಳನ್ನು ಇದು ರಕ್ಷಿಸುತ್ತದೆ ಮತ್ತು ಅವರ ಸುರಕ್ಷೆ ಹಾಗೂ ಘನತೆಯನ್ನು ಖಾತ್ರಿಪಡಿಸುತ್ತದೆ. ಈ ತಿದ್ದುಪಡಿಯು ಮಕ್ಕಳ ದುರ್ಬಳಕೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ಸ್ಪಷ್ಟತೆಯನ್ನು ಸ್ಥಾಪಿಸುತ್ತದೆ ಮತ್ತು ಆ ಮೂಲಕ ಶಿಕ್ಷೆಯನ್ನೂ ಸ್ಪಷ್ಟಪಡಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top