ಕೆನರಾ ಕಾಲೇಜು- 2 ದಿನಗಳ 'ಕೇನ್ ಫೆಸ್ಟ್ 2022'

Upayuktha
0

ಮಂಗಳೂರು: ನಗರದ ಕೆನರಾ ಕಾಲೇಜಿನಲ್ಲಿ ಜೂನ್ 6 ಮತ್ತು 7 ಈ ಎರಡು ದಿನಗಳ ಕಾಲ ನಡೆಯುವ 'ಕೇನ್ ಫೆಸ್ಟ್ -2022' ಅಂತರ ಪದವಿ ಕಾಲೇಜು ಗಳ ಸ್ಪರ್ಧಾ ಕಾರ್ಯಕ್ರಮವನ್ನು ಡಾ. ನರಸಿಂಹ ಪೈ ಡಿ, ಕೆಎಂಸಿ, ಕಾರ್ಡಿಯಾಲಜಿ ವಿಭಾಗದ ಪ್ರೊಫೆಸರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅವರು "ವಿದ್ಯಾರ್ಥಿಗಳ ಹೊಸ ಆಲೋಚನೆಗಳಿಗೆ, ಕ್ರಿಯಾ ಶಕ್ತಿಗಳಿಗೆ,  ಗುಂಪು ಚಟುವಟಿಕೆಗಳಿಗೆ ಇಂತಹ ಕಾರ್ಯಕ್ರಮ ಬಹಳ ಅಗತ್ಯ. ತಮ್ಮ ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳು ವುದರಿಂದ ವ್ಯಕ್ತಿತ್ವವು ಗಟ್ಟಿಗೊಳ್ಳುತ್ತದೆ" ಎಂದು ಹೇಳಿ ಕೆನರಾ ಸಂಸ್ಥೆ ತನಗೆ ವಿದ್ಯೆ ನೀಡಿದ ಮಾತೃಸಂಸ್ಥೆ ಹಾಗೂ ಅದರ ಸ್ಥಾಪಕರನ್ನು ತಮ್ಮ ಗುರುಗಳನ್ನು ನೆನಪಿಸಿಕೊಂಡರು.  


ಕೆನರಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಶ್ರೀ ಎಂ. ರಂಗನಾಥ ಭಟ್ ಅವರು ಅಧ್ಯಕ್ಷತೆ ವಹಿಸಿದ್ದು "ವೈವಿಧ್ಯಮಯ ಸೃಜನಶೀಲತೆಗೆ ಈ ವೇದಿಕೆ ಬಹಳ ಉಪಯುಕ್ತವಾಗಿದ್ದು ವಿದ್ಯಾರ್ಥಿಗಳು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳಬೇಕು" ಎಂದು ನುಡಿದರು.


ಕಾಲೇಜಿನ ಪ್ರಾಂಶುಪಾಲೆ ಡಾ ಪ್ರೇಮಲತಾ. ವಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಜಯಭಾರತಿ ಕೆ.ಪಿ ಅವರು ಕ್ಯಾನ್ ಫೆಸ್ಟ್ ಉದ್ದೇಶವನ್ನು ತಿಳಿಸಿದರು. ಸಂಯೋಜಕ ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರೀ ಗರಾ ಡಿಯ, ಕುಮಾರಿ ದಿವ್ಯ ಎಂ ಹಿರೇಮಠ್ 'ಕಮರ್ಷಿಯಾ' ಮತ್ತು 'ಸೈನ್ಟಿಕಾ' ಬಗ್ಗೆ ವಿವರಣೆ ನೀಡಿದರು.


ಕಾಲೇಜಿನ ಸಂಚಾಲಕ ಶ್ರೀ ಸಿಎ. ಎಂ. ಜಗನ್ನಾಥ ಕಾಮತ್, ವ್ಯವಸ್ಥಾಪಕರಾದ ಶ್ರೀ ಕೆ ಶಿವಾನಂದ ಶೆಣೈ,  ಕೆನರಾ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಶ್ರೀ ಬಸ್ತಿ ಪುರುಷೋತ್ತಮ ಶೆಣೈ, ಶ್ರೀ ನರೇಶ್ ಶೆಣೈ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅನಿಲ, ಉಪನ್ಯಾಸಕಿಯರಾದ ಶ್ರೀಮತಿ ಶೈಲಜಾ ಕುಮಾರಿ, ಶ್ರೀಮತಿ ಪುಷ್ಪಾಂಜಲಿ, ಶ್ರೀಮತಿ ಪೂರ್ಣಿಮಾ, ಕು. ಪ್ರಿಯಾಂಕ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಪ್ರತಿಮಾ. ವಿ ಬಾಳಿಗಾ ಸ್ವಾಗತಿಸಿ, ಶ್ರೀಮತಿ ಲಕ್ಷ್ಮಿ ಪ್ರಭು ವಂದಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಸುದೀಕ್ಷಾ ಹಾಗೂ ಶ್ರೀವಿದ್ಯಾ ಪ್ರಾರ್ಥಿಸಿ, ವಿಕಿತ.ವಿ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top