|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾಯೊದಪ್ಪೆ ಮಂತ್ರದೇವತೆಗೆ ಮುಹೂರ್ತ

ಮಾಯೊದಪ್ಪೆ ಮಂತ್ರದೇವತೆಗೆ ಮುಹೂರ್ತ

ಪ್ರಾಪ್ತಿ ಕಲಾವಿದೆರ್‌ ಕುಡ್ಲ ತಂಡದಿಂದ ಪೌರಾಣಿಕ ನಾಟಕ



ಮಂಗಳೂರು: ಪ್ರಾಪ್ತಿ ಕಲಾವಿದೆರ್‌ ಕುಡ್ಲ ಪ್ರದರ್ಶಿಸಲಿರುವ ಕಲಾ ಸವ್ಯಸಾಚಿ ಪ್ರಶಾಂತ್‌ ಸಿ.ಕೆ. ರಚಿಸಿ ನಿರ್ದೇಶಿಸಿರುವ ಮಾಯೊದಪ್ಪೆ ಮಂತ್ರದೇವತೆ ತುಳು ಪೌರಾಣಿಕ ನಾಟಕದ ಮುಹೂರ್ತ ಕದ್ರಿ ಮಂಜುನಾಥೇಶ್ವರ ಕ್ಷೇತ್ರದಲ್ಲಿ ನಡೆಯಿತು.


ಪೌರಾಣಿಕ ರಂಗಭೂಮಿಯ ದಿಗ್ಗಜರಾದ ಜಿ.ಕೆ.ರೈ, ಸತೀಶ್‌ ಕದ್ರಿ, ಉದಯ್‌ ಆಚಾರ್‌, ಮಾಧವ ಇರುವೈಲ್‌ ಜತೆ ಸುಹಾನ್‌ ಕುಳಾಯಿ ಮೊದಲಾದ ಯುವ ಕಲಾವಿದರ ಸೇರ್ಪಡೆಯೊಂದಿಗೆ ನಾಟಕ ರಂಗಭೂಮಿ ಪಯಣಕ್ಕೆ ಸಜ್ಜಾಗುತ್ತಿದೆ.


ಮುಹೂರ್ತ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ನಿರ್ದೇಶಕ ಕಿಶೋರ್‌ ಡಿ.ಶೆಟ್ಟಿ ಮಾತನಾಡಿ, ಪೌರಾಣಿಕ ನಾಟಕದ ಕುರಿತು ಪ್ರೇಕ್ಷಕರ ನಿರೀಕ್ಷೆಯೂ ಬೆಟ್ಟದಷ್ಟಿರುತ್ತದೆ, ಖರ್ಚುವೆಚ್ಚ, ಕಷ್ಟ ನಷ್ಟಗಳೂ ಹೆಚ್ಚು, ಕಷ್ಟ ಪಟ್ಟು ದುಡಿದರೆ ರಂಗಭೂಮಿಯಲ್ಲಿ ಹೆಸರು ಅಚ್ಚಳಿಯದೆ ಉಳಿಯುತ್ತದೆ ಎಂದರು.


ಉದ್ಘಾಟಿಸಿದ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಮಾತನಾಡಿ, ಸಮೃದ್ಧವಾದ ತುಳು ರಂಗಭೂಮಿಯಲ್ಲಿ ಯುವ ಕಲಾವಿದರಿಗೆ, ಪ್ರಯೋಗಶೀಲರಿಗೆ ಹೆಚ್ಚಿನ ಅವಕಾಶ ಇದೆ, ಇದನ್ನು ಇತ್ತೀಚೆಗೆ ಪೌರಾಣಿಕ ನಾಟಕಗಳು ಮಾಡುತ್ತಿರುವ ಪ್ರದರ್ಶನಗಳ ದಾಖಲೆಯೇ ಹೇಳುತ್ತದೆ ಎಂದರು.

ಕ್ಯಾಟ್ಕ ಸಂಘದ ಅಧ್ಯಕ್ಷ ಮೋಹನ ಕೊಪ್ಪಲ ಮಾತನಾಡಿ, ಕರೋನಾ ಬಳಿಕ ಕಲಾವಿದರಿಗೆ ಮತ್ತೆ ಒಳ್ಳೆಯ ಅವಕಾಶಗಳು ಸಿಗುತ್ತಿದ್ದು, ಸದುಪಯೋಗಪಡಿಸಿಕೊಳ್ಳಿ, ನಾಟಕ ಅತಿ ಹೆಚ್ಚು ಪ್ರದರ್ಶನಗಳನ್ನು ನೀಡಲಿ ಎಂದು ಹಾರೈಸಿದರು.


ನಿರ್ದೇಶಕ ಪ್ರಶಾಂತ್‌ ಸಿ.ಕೆ. ಸ್ವಾಗತಿಸಿದರು. ವಿಜೆ ಮಧುರಾಜ್‌ ಕಾರ್ಯಕ್ರಮ ನಿರೂಪಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 تعليقات

إرسال تعليق

Post a Comment (0)

أحدث أقدم