|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವಿ ಕಾಲೇಜು: ವಿದ್ಯಾರ್ಥಿಗಳ ವಿರಾಟ್ ಪ್ರತಿಭಾ ಪ್ರದರ್ಶನ

ವಿವಿ ಕಾಲೇಜು: ವಿದ್ಯಾರ್ಥಿಗಳ ವಿರಾಟ್ ಪ್ರತಿಭಾ ಪ್ರದರ್ಶನ


ಮಂಗಳೂರು: ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ. ಅಲ್ಲದೆ ಅವು ಒಗ್ಗಟ್ಟಿನ, ಸಾಮರಸ್ಯದ ಬದುಕನ್ನು ಕಲಿಸಿಕೊಡುತ್ತವೆ, ಎಂದು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ ಅಭಿಪ್ರಾಯಪಟ್ಟಿದ್ದಾರೆ. 


ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಲಲಿತ ಕಲಾ ಸಂಘದ ವತಿಯಿಂದ ಮಂಗಳವಾರ ನಡೆದ ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಅಂತರ್ಕಾಲೇಜು ಮಟ್ಟದಲ್ಲಿಯೂ ಪ್ರತಿಭೆ ಪ್ರದರ್ಶಿಸುವಂತಾಗಲಿ ಎಂದು ಶುಭ ಹಾರೈಸಿದರು.  


ವಿದ್ಯಾರ್ಥಿ ಸಂಘದ ಉಪನಿರ್ದೇಶಕ ಡಾ. ಹರೀಶ್ ಎ, ಲಲಿತ ಕಲಾ ಸಂಘದ ಸಂಯೋಜಕಿ ಡಾ. ಮೀನಾಕ್ಷಿ ಎಂ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಧೀರಜ್, ಸಹ ಕಾರ್ಯದರ್ಶಿನಿ ಅಂಕಿತಾ ಎಸ್, ಲಲಿತಾ ಕಲಾ ಸಂಘದ ಕಾರ್ಯದರ್ಶಿ ಅಪರ್ಣಾ ಎಸ್. ಶೆಟ್ಟಿ, ಸಹ ಕಾರ್ಯದರ್ಶಿನಿ ಕಾವ್ಯಾ ಎನ್. ಕೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣಕ ವಿಜ್ಞಾನದ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಡಾ. ಭಾರತಿ ಪಿಲಾರ್ ಕಾರ್ಯಕ್ರಮ ನಿರೂಪಿಸಿದರು.

ಫೋಟೋ ಆಲ್ಬಂ

ಚಿತ್ರ ಮಾಲಿಕೆ:

Italy
Forest
Mountains
Mountains

Mountains
Mountains

ರವೀಂದ್ರ ಕಲಾಭವನ ಮತ್ತು ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಏಕಕಾಲದಲ್ಲಿ ನಡೆದ ಪ್ರತಿಭಾ ಪ್ರದರ್ಶದಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದರು. ವೈಯಕ್ತಿಕ ಮತ್ತು ಗುಂಪು ವಿಭಾಗಗಳೆರಡರಲ್ಲೂ ಭಾರೀ ಪೈಪೋಟಿ ಕಂಡುಬಂತು. ಶಾಸ್ತ್ರೀಯ, ಈಸ್ಟರ್ನ್, ಜಾನಪದ, ನೃತ್ಯ-ಗಾಯನ, ಯಕ್ಷಗಾನ ಭಾಗವತಿಕೆ, ಪಾಶ್ಚಾತ್ಯ ಸಂಗೀತ ಸೇರಿದಂತೆ ಸುಮಾರು 12 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.

 


ಸಾಂಸ್ಕೃತಿಕ ವೈಭವ:

ರವೀಂದ್ರ ಕಲಾಭವನ ಮತ್ತು ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಏಕಕಾಲದಲ್ಲಿ ನಡೆದ ಪ್ರತಿಭಾ ಪ್ರದರ್ಶದಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದರು. ವೈಯಕ್ತಿಕ ಮತ್ತು ಗುಂಪು ವಿಭಾಗಗಳೆರಡರಲ್ಲೂ ಭಾರೀ ಪೈಪೋಟಿ ಕಂಡುಬಂತು. ಶಾಸ್ತ್ರೀಯ, ಈಸ್ಟರ್ನ್, ಜಾನಪದ, ನೃತ್ಯ-ಗಾಯನ, ಯಕ್ಷಗಾನ ಭಾಗವತಿಕೆ, ಪಾಶ್ಚಾತ್ಯ ಸಂಗೀತ ಸೇರಿದಂತೆ ಸುಮಾರು 12 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಸಮೂಹ ನೃತ್ಯ ಮತ್ತು ಕಿರು ಪ್ರಹಸನ (ಸ್ಕಿಟ್) ವಿಭಾಗಗಳಲ್ಲಿ ಹಲವು ಪ್ರದರ್ಶನಗಳು ನೋಡುಗರ ಗಮನ ಸೆಳೆದವು. 


ಇಂದು ಪ್ರತೀ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮೊದಲ ಮೂರು ಸ್ಪರ್ಧಿಗಳಿಗೆ ಪ್ರತಿಭಾ ದಿನಾಚರಣೆಯಂದು ಬಹುಮಾನ ವಿತರಿಸಲಾಗುವುದು, ಅಲ್ಲದೆ ಈ ಸ್ಪರ್ಧಿಗಳು  ಅಂತರ್ಕಾಲೇಜು ಸ್ಪರ್ಧೆಗಳಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಲಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post