|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದಾಸ ಪಂಥ- ಸಮಾಜ ಮುಖಿ ವಿಚಾರ ಧಾರೆಯ ವಿಶಿಷ್ಟ ಸಾಹಿತ್ಯ

ದಾಸ ಪಂಥ- ಸಮಾಜ ಮುಖಿ ವಿಚಾರ ಧಾರೆಯ ವಿಶಿಷ್ಟ ಸಾಹಿತ್ಯಮಾನವೀಯ ಮೌಲ್ಯಗಳು, ತಾಳ್ಮೆ, ದಾನ,ಭಕ್ತಿ, ಅನುಕಂಪ, ತಮ್ಮ ಕೀತ೯ನೆಗಳಲ್ಲಿ, ವಚನಗಳಲ್ಲಿ  ರಚಿಸಿ, ಅಂಕಿತನಾಮ ಸೇರಿಸಿ, ಭಗವಂತನಿಗೆ ಅಪಿ೯ಸಿ, ಅಮರರಾದರು ಹಲವಾರು ದಾಸರು.  ಡಾಂಭಿಕತೆ, ಜಾತೀಯತೆ, ಮಡಿವಂತಿಕೆ, ಸಂಕುಚಿತ ಮನೋಭಾವ ತೊರೆಯಬೇಕೆಂದು ಸಮಾಜಕ್ಕೆ ತಿಳಿಸಿದ ಮಹಾನುಭಾವರು. ಅಚಲಾನಂದದಾಸರಿಂದ ಉಗಮಗೊಂಡ ದಾಸ ಸಾಹಿತ್ಯ, ಶ್ರೀ ಪಾದರಾಜರಾದಿ ಯತಿಗಳು, ಪುರಂದರದಾಸರಾದಿ ದಾಸರುಗಳಿಂದ ಹರಿದಾಸ ಸಾಹಿತ್ಯ ಕೀತಿ೯ ಶಿಖರ ಏರಿದ್ದು ಕನ್ನಡ ಭಾಷೆಯ ಸೊಗಡು. ರಾಮಾಯಣ, ಮಹಾಭಾರತ, ಭಾಗವತ, ಉಪನಿಷತ್ತು, ಭಗವದ್ಗೀತೆ, ಮುಂತಾದ ಪುರಾಣದ ಹಿನ್ನಲೆಯಲ್ಲಿ ಅನೇಕ ಪದಗಳು, ಸುಳಾದಿಗಳು, ಕೀತ೯ನೆಗಳು, ದಾಸರುಗಳಿಂದ ರಚಿತವಾಗಿ, ಭಕ್ತ ಜನರ ಉಧ್ಧಾರಕ್ಕೆ ಪೂರಕವಾಗಿದ್ದು ಪುಣ್ಯವೆಂದೇ ಹೇಳಬಹುದು. 


ಸಂಸ್ಕೃತ ಅರಿಯದ ಜನರಿಗೆ ಸುಲಭವಾಗಿ ಅಥ೯ಮಾಡಿಕೊಳ್ಳಲು, ಕನ್ನಡದಲ್ಲಿ, ಸರಳವಾಗಿ ದೇಶಭಾಷೆಯಲ್ಲಿ ಹರಿದಾಸ ಸಾಹಿತ್ಯದ ಮೂಲಕ ದೇವರನಾಮಗಳು ಬಂದವು. ಸಕಲಶಾಸ್ತ್ರಗಳ ಅಥ೯ವನ್ನು ಕಥನ ರೂಪದಲ್ಲಿ ಬರೆದು ಪುನೀತರಾದರು ಹರಿದಾಸರು.


ಶ್ರೀ ಪಾದರಾಜರಂತೆ, ವ್ಯಾಸ ಸಾಹಿತ್ಯ ದಾಸ ಸಾಹಿತ್ಯಕ್ಕೆ ವ್ಯವಸ್ಥಿತ ವೇದಿಕೆ ನಿಮಾ೯ಣ ಮಾಡಿದ ವ್ಯಾಸರಾಜರಿಂದ, ಪುರಂದರದಾಸರು, ಕನಕದಾಸರು, ವೈಕುಂಠ ದಾಸರು, ವಾದಿರಾಜರು, ವಿಜಯೀಂದ್ರರು, ದಾಸಪಂಥ ಪ್ರಚಾರ ಮಾಡಿ, ಪ್ರಸಿಧ್ದರಾದ ಮಹಾನುಭಾವರು. ವ್ಯಾಸ ಸಾಹಿತ್ಯ ದಾಸ ಸಾಹಿತ್ಯದ ಪರಸ್ಪರ ಭಿನ್ನತೆ ಬಂದ ಸಂಧರ್ಭದಲ್ಲಿ, ಮುಂದೆ ಜಗನ್ನಾಥ ದಾಸರು ಉತ್ಕೃಷ್ಟ ಗ್ರಂಥ "ಹರಿಕಥಾಮೃತಸಾರ" ರಚಿಸಿ, ಸಮನ್ವಯಗೊಳಿಸಿ, ಇತಿಹಾಸ ನಿರ್ಮಿಸಿದ ದಾಸಚತುಷ್ಟಯದಲ್ಲಿ ಒಬ್ಬರಾದ ದಾರ್ಶನಿಕರು. ಹಿತಮಿತವಾಗಿ ,ಹೃದಯಂಗಮವಾಗಿ,ಜನಮನದಲ್ಲಿ ಶಾಶ್ವತವಾಗಿ ಉಳಿಯುವಂತಹ,ಸಂಗೀತ ಸಾಂಗತ್ಯ ಪಡೆಯುವ ಕೀತ೯ನೆಗಳನ್ನು ರಚಿಸಿ, ಭಕ್ತಿ ಪಂಥ ಹರಿಸಿದ ದಾಸರು ಸಮಾಜಕ್ಕೆ ಮಾಗ೯ದಶಿ೯ಯಾಗಿದ್ದು ವಿಶೇಷ!


ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಯುವ ಲೇಖಕರು, ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹಿರಿಯ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಯೋಜನಾ ಸಂಪಾದಕರಾಗಿ ರೂಪಿಸಿರುವ ದೇಸಿ ದಶ೯ನ ಮಾಲೆ ಮೂಲಕ. "ದಾಸ ಪಂಥ" ಎಂಬ ಕೃತಿ ರಚಿಸಿ, ದಾಸ ಸಾಹಿತ್ಯದ ಸಂಪೂರ್ಣ ಚರಿತ್ರೆ, ಭಾರತೀಯ ಸಂಸ್ಕೃತಿ, ಪರಿಚಯಿಸಿ, ದೇಸೀ ಪರಂಪರೆ, ಅದರ ದಶ೯ನ ಅತ್ಯಂತ ಶ್ರಮವಹಿಸಿ, ವಿವಿಧ ಮಾನದಂಡಗಳ, ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಓದುಗರಿಗೆ ಕನ್ನಡಿ ಹಿಡಿದಿದ್ದಾರೆ.   


ಬಿಂಬ ಪ್ರತಿಬಿಂಬ ಭಾವ, ಭಕ್ತರ ಹರಿಸರ್ವೋತ್ತಮತ್ವ, ದಾಸರು ಎತ್ತಿ ಹಿಡಿದು, ಪದ ಪದ್ಯಗಳ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಸಾರವನ್ನು. ದಾಸ ಪಂಥದಲ್ಲಿ ಬರೆದು ಕನ್ನಡಿಗರಿಗೆ ಉಣಬಡಿಸಿದ  ಲೇಖಕರು ಅಭಿನಂದನಾಹ೯ರು. ದಾಸ ಪಂಥದ 5 ಅಧ್ಯಾಯದಲ್ಲಿ, ಹರಿದಾಸದ ಹಿನ್ನೆಲೆ, ಭಕ್ತಿ ಪಂಥದ ಉಗಮ, ಕರ್ನಾಟಕ ಹರಿದಾಸ ಸಾಹಿತ್ಯ, ದಾಸಪಂಥದ ಹಿನ್ನೆಲೆ, ಶೋಧನೆ, ಸಾಧನೆ ಅತ್ಯಂತ  ಸಮಯೋಚಿತ, ಸಾರ್ವಜನಿಕವಾಗಿ ತಿಳಿಸಿ, ಧರ್ಮಶ್ರಧ್ದೆ ಬರುವಂತೆ, ಎಲ್ಲಾ ಆಯಾಮಗಳ ಉಲ್ಲೇಖ ಅವಲೋಕಿಸಿ, ದಾಸ ಸಾಹಿತ್ಯದ ಸೌಂದಯ೯ ಇಮ್ಮಡಿಗೊಳಿಸಿದ ಲೇಖಕರು ಬಹುಶ್ರುತರು. "ದಾಸ ಪಂಥ" ಕೃತಿ ಸಮಗ್ರ ಭಕ್ತಿ ಪಂಥದ, ಶ್ರೇಷ್ಠ ಕೃತಿಯಾಗಿ, ಸಂಗ್ರಾಹ್ಯ ಯೋಗ್ಯ ಕೃತಿಯಾಗಿದೆ. 

                                           

-ಶ್ರೀಧರ ರಾಯಸಂ,

ಕಥಾರಂಗಂ ಪ್ರಶಸ್ತಿ ಪುರಸ್ಕೃತರು

ಭಾಗ೯ವ ಪ್ರಶಸ್ತಿ ಪುರಸ್ಕೃತರು, ಗಿರಿನಗರ, ಬೆಂಗಳೂರು. 85.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post