ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2022-23ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ನಡೆಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಗುರುದತ್ ನಾಯಕ್ ಆಯ್ಕೆಯಾದರು. ಈತನು ಪುತ್ತೂರು ನರಿಮೊಗರಿನ ಗಣೇಶ್ ನಾಯಕ್ ಮತ್ತು ಕೆ ವೀಣಾ ದಂಪತಿ ಪುತ್ರ. ಉಪಾಧ್ಯಕ್ಷೆಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ರುದ್ಧಿ ಎಂ ವಿ ಆಯ್ಕೆಯಾದರು.
ಈಕೆ ನೆಹರೂ ನಗರದ ವಿಜಯ್ ಕುಮಾರ್ ಮತ್ತು ಶಾಂತಿ ದಂಪತಿ ಪುತ್ರಿ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕೀರ್ತನ್ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಈತನು ಬೊಳುವಾರಿನ ಟಿ. ಪಾಂಡಿ ಕಣ್ಣನ್ ಮತ್ತು ಜಯಂತಿ ರವರ ಪುತ್ರ. ಜತೆ ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಧನುಷ (ಹುಣಸೂರಿನ ಲಕ್ಷ್ಮಣ ಮತ್ತು ಮಂಜುಳಾ ದಂಪತಿ ಪುತ್ರಿ) ಮತ್ತು ವಿಜ್ಞಾನ ವಿಭಾಗದ ಪ್ರತೀಕ್ಷಾ ಎ ಕೆ (ಕಬಕದ ಆನಂದ ಗೌಡ ಕೆ ಮತ್ತು ಪಿ. ದೇಜಮ್ಮ ದಂಪತಿ ಪುತ್ರಿ) ಆಯ್ಕೆಯಾದರು.
ಕ್ರೀಡಾ ಸಂಘದ ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರಜತ್ ಆರ್ ಭಟ್ (ವಿಟ್ಲದ ರಾಜೇಶ್ ಭಟ್ ಮತ್ತು ರಾಧಿಕಾ ಭಟ್ ದಂಪತಿ ಪುತ್ರ) ಹಾಗೂ ಕ್ರೀಡಾ ಜತೆ ಕಾರ್ಯದರ್ಶಿಯಾಗಿ ಖುಷಿ ರೈ (ಕುಂಬ್ರದ ರಾಧಾಕೃಷ್ಣ ರೈ ಮತ್ತು ಸುನೀತಾ ರೈ ದಂಪತಿ ಪುತ್ರಿ) ಆಯ್ಕೆಯಾದರು. ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಶ್ರೇಯ ಜೆ. ಶೆಟ್ಟಿ (ಮುಂಬೈಯ ಜಯಾನಂದ ಜೆ ಶೆಟ್ಟಿ ಮತ್ತು ಸುಮತಿ ಜೆ ಶೆಟ್ಟಿ ದಂಪತಿ ಪುತ್ರಿ) ಆಯ್ಕೆಯಾದರು.
ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ, ವಿದ್ಯಾರ್ಥಿ ಕ್ಷೇಮಪಾಲಕ ದೇವಿಪ್ರಸಾದ್, ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಲಲಿತ ಕಲಾ ಸಂಘದ ಸಂಯೋಜಕ ಶ್ರೀಧರ ಶೆಟ್ಟಿಗಾರ್ ಮತ್ತು ಉಪನ್ಯಾಸಕರು ವಿದ್ಯಾರ್ಥಿ ಸಂಘದ ನಾಯಕರನ್ನು ಅಭಿನಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ