ಉಜಿರೆ: ಪ್ರಸ್ತುತ ಷೇರು ಮಾರುಕಟ್ಟೆಯು ಬಹು ಚರ್ಚಿತ ವಿಷಯವಾದರೂ ಸರಿಯಾದ ಅಧ್ಯಯನವಿಲ್ಲದೆ ಪಾಲುದಾರರಾಗಬಾರದು ಎಂದು ಎಸ್.ಡಿ.ಎಂ ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗದ ಅಧ್ಯಾಪಕ ಶರಶ್ಚಂದ್ರ ಕೆ.ಎಸ್. ಅಭಿಪ್ರಾಯಪಟ್ಟರು.
ಎಸ್.ಡಿ.ಎಂ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ ನಡೆದ 'ಫಂಡಮೆಂಟಲ್ಸ್ ಆಫ್ ದ ಸ್ಟಾಕ್ ಮಾರ್ಕೆಟ್' ಎಂಬ ವಿಷಯದ ಕುರಿತಾದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇತ್ತೀಚಿಗೆ ಯುವಕರಲ್ಲಿ ಷೇರು ಮಾರುಕಟ್ಟೆಯ ಕುರಿತಾಗಿ ಆಸಕ್ತಿ ಹೆಚ್ಚಾಗಿದ್ದು, ಸರಿಯಾದ ಮಾಹಿತಿಯ ಕೊರತೆಯಿಂದ ಜಾಹೀರಾತಿನ ಮೊರೆ ಹೋಗುತ್ತಾರೆ ಅಥವಾ ತಪ್ಪು ತಿಳುವಳಿಕೆಯ ಮೂಲಕ ಹಣ ವಿನಿಯೋಗ ಮಾಡಿ ತಮ್ಮ ಹಣ ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ಕಂಪನಿಯ ಮೇಲೆ ಹೂಡಿಕೆ ಮಾಡುವ ಮೊದಲು ಕಂಪನಿಯ ಪೂರ್ವಾಪರ ತಿಳಿದಿರಬೇಕು ಎಂದರು.
ಭಾರತೀಯ ಷೇರು ಮಾರುಕಟ್ಟೆಯು ಸಾಕಷ್ಟು ಭದ್ರತಾ ವ್ಯವಸ್ಥೆ ಹೊಂದಿರುವುದರಿಂದ ಹೂಡಿಕೆದಾರರು ಭಯ ಪಡಬೇಕಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆಂದೇ ಮಧ್ಯವರ್ತಿ ಕಂಪನಿಗಳಿದ್ದು ಅದರ ಮೂಲಕ ಹಣ ಹೂಡಿಕೆ ಮಾಡುವಾಗ ಜಾಗೃತಿ ಹೊಂದಬೇಕು ಎಂದರು. ಕಾರ್ಯಾಗಾರದಲ್ಲಿ ಷೇರು ಮಾರುಕಟ್ಟೆಯ ಕುರಿತಾಗಿ ಮೂಲಭೂತ ವಿಷಯವನ್ನು ಹಂಚಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎ. ಜಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ವಿಭಾಗದ ಅಧ್ಯಾಪಕರಾದ ಡಾ.ಗಣರಾಜ್, ಡಾ.ಮಹೇಶ್, ಡಾ.ನಾಗರಾಜ್ ಹಾಗೂ ಅಭಿನಂದನ್ ಜೈನ್ ಹಾಜರಿದ್ದರು. ಕಾರ್ಯಕ್ರಮವನ್ನು ಧರ್ಮಶ್ರೀ ನಿರೂಪಿಸಿ, ಶಿವಕುಮಾರ್ ಸ್ವಾಗತಿಸಿ, ಸುರೇಶ್ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ