ಎಸ್‌ಡಿಎಂ ʼಮನೀಷಾʼಗೆ ಮಂಗಳೂರು ವಿವಿಯಿಂದ ಅತ್ಯುತ್ತಮ ಕಾಲೇಜು ಸಂಚಿಕೆ ಮನ್ನಣೆ

Upayuktha
0



ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜು 2020-21ನೇ ಶೈಕ್ಷಣಿಕ ಸಾಲಿನಲ್ಲಿ ಹೊರತಂದ ʼಮನೀಷಾʼ ವಾರ್ಷಿಕ ನಿಯತಕಾಲಿಕವು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಯಲ್ಲಿ ʼಅತ್ಯುತ್ತಮ ಕಾಲೇಜು ವಾರ್ಷಿಕ ಸಂಚಿಕೆʼ ಎಂಬ ಮನ್ನಣೆಗೆ ಪಾತ್ರವಾಗಿದೆ.


ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲರಾದ ಡಾ.ಉದಯಚಂದ್ರ ಪಿ.ಎನ್. ಅವರಿಗೆ ಅತ್ಯುತ್ತಮ ಕಾಲೇಜು ವಾರ್ಷಿಕ ಸಂಚಿಕೆ ಮನ್ನಣೆಯ ಪ್ರಮಾಣ ಪತ್ರ ಮತ್ತು ಟ್ರೋಫಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ʼಮನೀಷಾʼ ಸಂಚಿಕೆಯ ಸಂಪಾದಕ ಮಂಡಳಿಯ ಡಾ.ರಾಮಚಂದ್ರ ಪುರೋಹಿತ, ಡಾ.ರಾಜಶೇಖರ ಹಳೆಮನೆ ಮತ್ತು ಡಾ.ಎನ್.ಕೆ. ಪದ್ಮನಾಭ ಅವರು ಉಪಸ್ಥಿತರಿದ್ದರು.


ಕಳೆದ ವರ್ಷವೂ ಕಾಲೇಜಿನ ʼಮನೀಷಾʼ ಸಂಚಿಕೆಗೆ ಇದೇ ಮನ್ನಣೆ ಲಭಿಸಿತ್ತು. ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ ನಿರತ ವಿದ್ಯಾರ್ಥಿಗಳು ಬರೆದ ವೈವಿಧ್ಯಮಯ ಬರಹಗಳನ್ನು ಈ ಸಂಚಿಕೆ ಒಳಗೊಂಡಿದೆ. ವಿದ್ಯಾರ್ಥಿಗಳ ವಸ್ತುನಿಷ್ಠ ಚಿಂತನೆ, ಭಾಷಾ ವೈವಿಧ್ಯ, ವಿವಿಧ ಸಾಂಸ್ಕೃತಿಕ ವೈಶಿಷ್ಟ್ಯ, ಸಮಕಾಲೀನ ವಿದ್ಯಮಾನಗಳ ಕುರಿತ ಚಿಕಿತ್ಸಕ ದೃಷ್ಟಿಕೋನಗಳೊಂದಿಗಿನ ಬರಹಗಳನ್ನು ಈ ಸಂಚಿಕೆಯು ಒಳಗೊಂಡಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top