|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ ಸುರೇಶ ನೆಗಳಗುಳಿ- ಬಹುಮುಖೀ ಸಾಹಿತ್ಯದ ಪರಿಚಾರಕರು

ಡಾ ಸುರೇಶ ನೆಗಳಗುಳಿ- ಬಹುಮುಖೀ ಸಾಹಿತ್ಯದ ಪರಿಚಾರಕರುಡಾ|| ಸುರೇಶ ನೆಗಳಗುಳಿಯವರು ಬಂಟ್ವಾಳ ತಾಲೂಕಿನ ಆಳಿಕೆ ಗ್ರಾಮದ ನೆಗಳಗುಳಿ ಎಂಬಲ್ಲಿ ಜನಿಸಿದ್ದು,  ಇವರ ತಂದೆ ಶ್ರೀ ತಿಮ್ಮಣ್ಣ ಭಟ್ಟ ಮತ್ತು ತಾಯಿ ಶ್ರೀಮತಿ ಸಾವಿತ್ರಿಯವರ ಕೊನೆಯ ಪುತ್ರರಾಗಿ ಜನಿಸಿದರು.  


ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು  ಅಡ್ಯನಡ್ಕದಲ್ಲಿ ಮಾಡಿ ಮುಂದೆ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಸತ್ಯಸಾಯಿ ವಿಹಾರ ಅಳಿಕೆಯಲ್ಲಿ ಮತ್ತು ಆರ್ಯವೇದ ವೈದ್ಯಕೀಯ ಶಿಕ್ಷಣವನ್ನು ಉಡುಪಿಯಲ್ಲಿ ಪೂರೈಸಿದವರು ಮತ್ತು ಶಸ್ತ್ರ ಚಿಕಿತ್ಸೆಯ ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನಲ್ಲಿ ಮಾಡಿದರು.  ವೈದ್ಯಕೀಯ ಶಿಕ್ಷಣ ಸಂದರ್ಭದಲ್ಲಿ ೬ನೇ ಸ್ಥಾನ  (ರ್ಯಾಂಕ್)‌ ಪಡೆದವರು. ತಮ್ಮ ಸ್ವಂತ ಚಿಕಿತ್ಸಾಲಯದ ಜೊತೆಗೆ ೧೫ವರ್ಷಗಳಕಾಲ ಮೂಡಬಿದರೆಯಲ್ಲಿ ಹಾಗೂ ೧೦ ವರ್ಷಗಳ ಕಾಲ ಕೊಪ್ಪದಲ್ಲಿ ಪ್ರಾಂಶುಪಾಲರಾಗಿದ್ದವರು.ಅನಂತರ 6 ವರ್ಷ ಡೀನ್ ಆಗಿ ಸೇವೆ.ಹಾಗೆಯೇ ಕೇರಳದ ಶೋರನೂರು ವೈದ್ಯಕೀಯ ಸಂಸ್ಥೆಯ ಸ್ನಾತಕೋತ್ತರ ಮುಖ್ಯಸ್ಥರಾಗಿ ದುಡಿದವರು. ಪ್ರಕೃತ ಮಣಿಪಾಲದಲ್ಲಿ  ವಿಭಾಗ ಪ್ರಮುಖ ಪ್ರಾಧ್ಯಾಪಕರಾಗಿರುತ್ತಾರೆ


ಇನ್ನು ಬರವಣಿಗೆಯ ವಿಷಯಕ್ಕೆ ಬಂದರೆ ಕನ್ನಡ ಸಾಹಿತ್ಯವಷ್ಟೇ ಅಲ್ಲದೇ ವೈದ್ಯಕೀಯ ಸಾಹಿತ್ಯದಲ್ಲೂ ಶ್ರಮಿಸಿದವರು ಹಲವಾರು ಸಮ್ಮೇಳನಗಳಲ್ಲಿ ತಮ್ಮ ಪ್ರಬಂಧವನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ಅನೇಕ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ಮಾಡಿದ್ದಾರೆ ಪರೀಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ಚುಟುಕಗಳ ರಾಜ ಎಂತಲೂ ಕರೆಯಬಹುದು ಬಃಳಷ್ಟು ಚುಟುಕ ಮತ್ತು ಮುಕ್ತಕಗಳ ರಚನೆಯನ್ನು ಮಾಡುತ್ತಲೇ ಇರುವ ಆಶುಕವಿಗಳಾಗಿದ್ದಾರೆ.  ಜಾಲತಾಣದ ಅನೇಕ ಸ್ಪರ್ಧೆಗಳಲ್ಲಿಯೂ ಭಾಗವಹಿಸುತ್ತಿರುವ ಇವರ  ಚುಟುಕ ಕವನಗಳು ರಾಜ್ಯದಾದ್ಯಂತ ಬೇರೆ ಬೇರೆ ಪತ್ರಿಕೆ ವಾರ ಪತ್ರಿಕೆಗಳಲ್ಲಿ  ಪ್ರಕಟವಾಗಿದ್ದು. ತಮ್ಮ ಸ್ವಂತದ ಗಜಲ್‌, ಹನಿಗವನ, ಚಿತ್ರ ಕವನ ಇತ್ಯಾದಿಗಳ ಒಟ್ಟಾರೆ ಏಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.   ವೈದ್ಯಕೀಯ ಮತ್ತು ವೈದ್ಯಕೇತರ ಸಾಹಿತ್ಯದಲ್ಲಿ ಇವರ ಕೊಡುಗೆ ಬಹಳಷ್ಟು ಇರುವುದು.


ಇವರ ಪುಸ್ತಕಗಳು :-

ತುಷಾರ ಬಿಂದು,ಎಂಬ ತುಷಾರ ಮಾಸಪತ್ರಿಕೆಯ ಚಿತ್ರಕವನ ವಿಭಾಗದಲ್ಲಿ  ವಿಜೇತವಾದ ತಮ್ಮ ಕವನಗಳ ಸಂಕಲನ

ಪಡುಗಡಲ ತೆರೆಮಿಂಚು,ಎಂಬ ಕಾಸರಗೋಡು ಚುಟುಕು ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ವಿಜೇತ ಗಜಲ್ ಸಂಕಲನ

ಗೋ ಗೀತೆ, ಎಂಬ ಗೋವಿನ ಮಹತ್ವ ಸಾರುವ ನೂರು ಚುಟುಕಗಳು ಮತ್ತು

ನೆಗಳಗುಳಿ ಗಜಲ್ಸ್ ಎಂಬ ಆರು ಭಾಷೆಯ ಗಝಲ್ ಸಂಕಲನ


ಧೀರತಮ್ಮನ ಕಬ್ಬ, ಎಂಬ ಕಾಸರಗೋಡಿನ‌ ಚು ಸಾ ಪ ವತಿಯಿಂದ ರಾಜ್ಯ ಮಟ್ಟದ ಪ್ರಶಸ್ತಿ  ಪಡೆದ ,ಕಯ್ಯಾರ ಕಿಂಞಣ್ಣ ರೈಯವರ ಆಶಯ ನುಡಿ ಸಹಿತದ ಕಗ್ಗ ಮಾದರಿಯ ಹನಿಗಳು,

ಇದೀಗ ಧೀರತಮ್ಮನ ಕಬ್ಬ ಸಂಪುಟ ೩ ಮುಕ್ತಕ ಸಂಕಲನ ಲೋಕಾರ್ಪಣೆಯಾಗಿದೆ

೨೦೨೧ ರ ಬಂಟ್ವಾಳ ಕ.ಸಾ.ಪ. ಸಮ್ಮೇಳನದ ಸರ್ವಾಧ್ಯಕ್ಷ ಭಾಷಣದ ಪುಸ್ತಕ ಅಚ್ಚಾಗಿದೆ

ಕಾವ್ಯ ಭೋಜನ ,- ಪ್ರಥಮ‌ಬಹುಮಾನ ಪಡೆದ ೩೭೦ ಆಶು ಚುಟುಕು ಸಂಕಲನ


ಇವರಿಗೆ ಸಂದ ಪ್ರಶಸ್ತಿ ಗೌರವಗಳ ಪಟ್ಟಿ ಬಹಳ ದೊಡ್ಡದಿದೆ.:-

ವೈದ್ಯಕೀಯ ರಂಗದಲ್ಲಿ ಮೂಡಬಿದರೆ ವೈದ್ಯ ಸಂಘದ ಅಧ್ಯಕ್ಷರು

ಹಲವಾರು ವೈದ್ಯಕೀಯ ಸಮ್ಮೇಳನ ನಿರ್ವಹಣೆ

ರಾಜೀವ ಗಾಂಧಿ ಅರೋಗ್ಯ ವಿಶ್ವ ವಿದ್ಯಾಲಯದ ಎಕಾಡೆಮಿಕ್ ಸದಸ್ಯ,ಫೇಕಲ್ಟಿ ಸದಸ್ಯ,ಬಿ.ಒ.ಎಸ್ ಸದಸ್ಯ,ಇನ್ಸಪೆಕ್ಷನ್ ವಿಭಾಗ ಚೇರ್ ಮೆನ್ ಹೀಗೆ ಹಲವಾರು ಶೈಕ್ಷಣಿಕ ಜವಾಬುದಾರಿ ನಿರ್ವಹಣೆ

ಅಂತಾರಾಜ್ಯ ವಿಶ್ವ ವಿದ್ಯಾಲಯ ( ಪುಣೆ,ಚೆನ್ನೈ,ಕೇರಳ) ಸ್ನಾತಕೋತ್ತರ ಪರೀಕ್ಷಾಧಿಕಾರಿ


ಮೂಡಬಿದಿರೆಯ ಡಾಕ್ಟರ್ ಎಸೋಸಿಯೇಶನ್ ಪ್ರಶಸ್ತಿ2017

ಕಾಸರಗೋಡಿನಿಂದ ಸಾಹಿತ್ಯ ಸೇವೆಗಾಗಿ  ೨೦೦೫ ರಲ್ಲಿ ಸಾಹಿತ್ಯ ಪ್ರಶಸ್ತಿ

ಹುಟ್ಟುಊರಿನಲ್ಲಿ ೨೦೨೦ ರಲ್ಲಿ ಗಡಿನಾಡ ವೈದ್ಯ ಪ್ರಶಸ್ತಿ

ರಾಜ್ಯಮಟ್ಟದ ಯುವ ಬರಹಗಾರ ಪ್ರಶಸ್ತಿ

ಕಾವ್ಯ ವಿಭೂಷಣ 2018

ರಾಜ್ಯಮಟ್ಟದ ಕೆಎಸ್‌ನ ಕಾವ್ಯ ಸನ್ಮಾನ2019

ಸ್ಪೂರ್ತಿ ರತ್ನ2019

ಭಕ್ತಿಗೀತೆ ರಚನೆಗೆ ಧರ್ಮಜ್ಯೋತಿ 2019

ಹೊಯ್ಸಳ ರಾಜ್ಯ ಪ್ರಶಸ್ತಿ2020

ಮೈಸೂರಿನಲ್ಲಿ ಪ್ರಜಾರತ್ನ,2020

ಸೇವಾರತ್ನ ಪ್ರಶಸ್ತಿ2022

ಪ್ರಕೃತಿ ರತ್ನ2022

ಕೊರೋನಾ ವಾರಿಯರ್ ಸನ್ಮಾನ2022 ಬೆಂಗಳೂರು

ಸಾಹಿತ್ಯ ರತ್ನ ಚಿತ್ರದುರ್ಗ2022

ಯುಗಪುರುಷ  ಪ್ರಶಸ್ತಿ-ಕಿನ್ನಿಗೋಳಿ2022


ಮಂಗಳೂರು ಕೆ ಎಂಸಿ ಎಏಫ್ ಐ ವೈದ್ಯ ಸೇವಾ ಪ್ರಶಸ್ತಿ 2022


ದೂರದರ್ಶನದ ಥಟ್‌ ಅಂತ ಹೇಳಿ ಸ್ಪರ್ಧೆಯಲ್ಲಿ ಭಾಗವಹಿಸಿ 9 ಪುಸ್ತಕ ಗಳಿಸಿರುವುದು

ಕಾಸರಗೋಡಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಶಸ್ತಿ

ಕೊಪ್ಪ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾದ ಗೌರವ


ಸಾಂಘಿಕ‌ನೆಲೆಯಲ್ಲಿ ಕೊಪ್ಪ ಜೂನಿಯರ್ ಚೇಂಬರ್ ನ ಅಧ್ಯಕ್ಷ ಹಾಗೂ ಹೆಚ್ ಜಿ ಎಫ್ ಫೆಲೊಷಿಪ್ ;


೧೯೮೩ ರಲ್ಲಿ ಗಡಿನಾಡು ಲೇಖಕರ ಸಂಘದ ಸದಸ್ಯ

೧೯೯೬ ರಲ್ಲಿ ಕೊಪ್ಪ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಮುಖ್ಯ ಅತಿಥಿಗಳಾಗಿಯೂ, ಮೂಡಬಿದ್ರಿ ರೋಟರಿ ಸದಸ್ಯರೂ, 

ಡಾಕ್ಟರ್ ಎಸೋಸಿಯೇಶನ್ ಮೂಡುಬಿದಿರೆ ಅಧ್ಯಕ್ಷತೆ ೨೦೦೩

ಕದ್ರಿಹಿಲ್ಸ್ ಲಯನ್ ಸಂಸ್ಥೆಯ ಸದಸ್ಯನೂ ಮಾಜಿ ಉಪಾಧ್ಯಕ್ಷ  ೨೦೧೯

ಚುಟುಕು ಸಾಹಿತ್ಯ ಪರಿಷತ್ತು ಮಂಗಳೂರು ಇದರ ಮಾಜಿ ಅಧ್ಯಕ್ಷ 

ಅಖಿಲ ಭಾರತೀಯ ಬಂಟ್ವಾಳ ತಾಲೂಕು ಅಧ್ಯಕ್ಷ ೨೦೨೨

ಹಾಲಿ ಮುಖ್ಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ.

ದೂರದರ್ಶನ,ಆಕಾಶವಾಣಿ ಗಳಲ್ಲಿ ಸಂವಾದ, ಕವಿ ಸಮಯ 

ಉದಯವಾಣಿ ತುಷಾರ ಪರ್ಯಂತ ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ತರಹೇವಾರಿ ಬರಹ‌ ಪ್ರಕಟಿತ.

ಇದಲ್ಲದೆ ಪ್ರಸ್ತುತ ಬಹಳ ಮುಂಚೂಣಿಯಲ್ಲಿರುವ ಜಾಲತಾಣ ಸಾಹಿತ್ಯ ಬಳಗಗಳನೇಕಗಳಲ್ಲಿ ಸುಮಾರು ನೂರರಷ್ಟು ಪ್ರಶಸ್ತಿ  ಹಾಗೂ ಸ್ಥಾನ ಮಾನ.

ತುಷಾರ ಚಿತ್ರಕವನಗಳಲ್ಲಿ ಎಂಭತ್ತಕ್ಕೂ ಹೆಚ್ಚು ಚಿತ್ರಕವನಗಳ ವಿಜೇತ ಹಾಗೂ ಅಷ್ಟೇ ಮೆಚ್ಚುಗೆಯ ಸ್ಥಾನ‌ ಪ್ರಾಪ್ತಿ 

೨೧-೨-೨೧ ರಂದು ನಡೆದ ಬಂಟ್ವಾಳ ತಾಲೂಕಿನ ಕನ್ನಡ ಭವನದ ಲೋಕಾರ್ಪಣೆ ಸಹಿತದ ೨೧ ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಇವರಿಗೆ ಲಭಿಸಿದ್ದು ತನ್ನ ತಾಯ್ನಾಡಿನ ಗುರುತಿಸುವಿಕೆಗೆ ಸಾಕ್ ಷಿ


 ಬದಲಾಗದವರು ಎಂಬ ಚಲನ ಚಿತ್ರದಲ್ಲೂ ಅತಿಥಿ ಕಲಾವಿದರಾಗಿ ನಟಿಸಿ ,ಚಿತ್ರ ನಟರೆಂಬ ಹೆಗ್ಗಳಿಕೆ.


 ಪ್ರಸ್ತುತ ಮಂಗಳೂರು  ಮಂಗಳಾ ಆಸ್ಪತ್ರೆಯಲ್ಲಿ ಮೂಲವ್ಯಾಧಿ , ಚರ್ಮರೋಗಗಳ ವಿಶೇಷ ಕ್ಷಾರ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸಕರಾಗಿರುವ ಇವರು


ಪತ್ನಿ ವೈದ್ಯೆ ಡಾ|| ಸಾವಿತ್ರಿ, ಪುತ್ರ ಕರ್ಣಾಟಕ ಬ್ಯಾಂಕಿನ ಉದ್ಯೋಗಿ ಸುಹಾಸ ನೆಗಳಗುಳಿ, ಮತ್ತು ಸೊಸೆ ಶುಭಲಕ್ಷ್ಮಿ ಯರೊಂದಿಗೆ ಮಂಗಳೂರಿನ ಎಕ್ಕೂರು ಸಮೀಪ ತಮ್ಮ ನಿವಾಸ "ಸುಹಾಸ" ದಲ್ಲಿ ವೈದ್ಯ ವೃತ್ತಿ ಹಾಗೂ ವಾಸ್ತವ್ಯದಲ್ಲಿದ್ದಾರೆ


-ಡಾ ಸುರೇಶ ನೆಗಳಗುಳಿ

ಸುಹಾಸ

ಬಜಾಲ್ ಪಕ್ಕಲಡ್ಕ ಎಕ್ಕೂರು ರಸ್ತೆ

ಮಂಗಳೂರು ೫೮೫೦೦೭

೯೪೪೮೨೧೬೬೭೪

negalagulis@gmail.com

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post