ಬದುಕೆಂಬ ಪಯಣ
ಕಷ್ಟ ದುಃಖವೆಂಬ ಚರಣ
ಯಾವಾಗ ಮುಗಿಯುವುದು
ನಾ......ಕಾಣೆ ......
ಮೌನವೇ ಉತ್ತರವಾಗಿದೆ
ನಗುವೇ ಕಾಣದಾಗಿದೆ
ಚಿತ್ರ ವಿಚಿತ್ರಗಳ ಈ ಲೋಕ
ಮುನಿಸು ಕೋಪ ತಾಪ
ಬದಲಾದ ಮನುಷ್ಯರೆದುರು
ಕಷ್ಟ ಹೇಳಿಕೊಳ್ಳಲಾಗದ ಮನ
ಹಸಿದ ಹೊಟ್ಟೆಗೆ
ಬಿಗಿದು ಕಟ್ಟಿದ ಬಟ್ಟೆ
ಯಾವಾಗ ಕೂಗಿತೋ ಹೊಟ್ಟೆ
ಕಣ್ಣೀರು ಒರೆಸಿತು ಬಟ್ಟೆ
ಆಕೆಯ ಬಳಿ ಹೇಳೋಣವೆಂದರೆ ಕರುಳಬಳ್ಳಿಯ ನೆನೆದು
ಅತ್ತಳು ಎನ್ನುವ ಮನ
ಈತನ ಬಳಿ ಹೇಳೋಣವೆಂದರೆ
ಕರೆ ಸ್ವೀಕರಿಸಿದ ಮೊದಲೆ
ಊಟ ಮಾಡಿದ್ಯ ಎಂದು ಕೇಳುವ
ಈ ಜನ್ಮ ಕೊಟ್ಟ ಸಾವುಕಾರ
ಆ ಕ್ಷಣ ಹೊರಳಾಡದ ನಾಲಿಗೆ
ಕೊಂಚ ಹೊತ್ತಿನ ಬಳಿಕ
ಆ ಆಯ್ತೆನುವ ಈ ಅಪಸ್ವರ
ಆತನ ಮನಸೆಲ್ಲ ಉಲ್ಲಾಸದಂತಾಯಿತು
ಬಡಪಾಯಿ ಹೊಟ್ಟೆ ಕೂಗಿಯೇ ಇತ್ತು
ಕಣ್ಣಲ್ಲೆ ಕಣ್ಣೀರು ಹಿಂಗುತ್ತ
ತೊದಲೆರಡು ಮಾತನಾಡಿ
ಮನಸ್ಸು ಸದಾ ತಲ್ಲಣ ತಲ್ಲಣ
-ದೀಕ್ಷಿತ ಗಿರೀಶ್
ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ