
ತಿಳಿಯದೇ ಹೋದೆ ಬಾಳದಾರಿಯಲಿ
ನಾ ಹೋದ ದಾರಿಯೇ ಸ್ವರ್ಗವೆಂದು ತಿಳಿದೆ
ನನ್ನ ಕಷ್ಟ ಸುಖಗಳನ್ನು ಹಂಚಿ ಕೊಂಡೆನು ಅಂದು
ದಿನ ಕಳೆದರೂ ಮನವರಿಕೆ ಆಗಲಿಲ್ಲ
ನಾ ಹೋದ ದಾರಿ ತಪ್ಪೆಂದು
ಮನವರಿಕೆ ಮಾಡಲು ಯತ್ನಿಸಿದರು ಹಲವರು
ಆದರೂ ಅವರ ಮಾತು ಅರಿಯಲಿಲ್ಲ ನನ್ನ ಮನ
ಕೊನೆಗೊಂದು ದಿನ ಅರಿವಾಯಿತು ನಾ ದಾರಿ ತಪ್ಪಿದೆಯೆಂದು.
ನಾನಂದು ಅರಿಯದೇ ತುಳಿದ ದಾರಿಗೆ ಕಾರಣವೇನೆಂದು.
ಯಾರೊಂದಿಗೂ ಹೇಳಲಾಗದೆ ಕೊರಗುವೆನು ಮನನೊಂದು
ಅಂತರಾಳದಿ ಹುಚ್ಚಿಯಾಗುತಿರುವೆನು ನಾನಿಂದು.
-ದೀಪ್ತಿ ಅಡ್ಡಂತ್ತಡ್ಕ
ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ ನೆಹರು ನಗರ ಪುತ್ತೂರು.