|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ನಿತ್ಯ ಸತ್ಯ

ಕವನ: ನಿತ್ಯ ಸತ್ಯ



ನೀ ನನಗಿದ್ದರೆ ನಾ ನಿನಗೆ..

ಇದು ಹೊಂದಾಣಿಕೆ... 


ನೀ ನನಗಿದ್ದರೇ ನಾ ನಿನಗೆ..

ಇದು ವ್ಯವಹಾರ...


ನಾ ನಿನಗಿದ್ದರೆ ನೀ ನನಗೆ..

ಇದು ವಾಸ್ತವ...


ನಾ ನಿನಗಿದ್ದರೇ ನೀ ನನಗೆ..

ಇದು ಲೆಕ್ಕಾಚಾರ...


ನಾ ನಿನಗಿರದಿದ್ದರೂ ನೀ ನನಗೆ..

ಇದು ಸ್ವಾರ್ಥ...


ನೀ ನನಗಿರದಿದ್ದರೂ ನಾ ನಿನಗೆ..

ಇದು ನಿಷ್ಕಲ್ಮಶ ಪ್ರೀತಿ...


ನಾನು ನೀನೆಂಬುದ ಕಳೆದು ನಾವೆಂದರೆ

ಅದು ನಿತ್ಯ ಸತ್ಯ....

************

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم