ಕವನ: ಹೆಣ್ಣಿಗೊಂದು ಸಲಾಂ

Upayuktha
0

ಮಮತೆ ವಾತ್ಸಲ್ಯಕ್ಕೆ 

ಹೆಸರೇ ಹೆಣ್ಣು

ಕತ್ತಲನು ಹೋಗಲಾಡಿಸುವ 

ಸಂಸಾರದ ಕಣ್ಣು


ಪ್ರೀತಿ ಮಮತೆಗೆ ಕರುಣೆಗೆ

ಕೊಂಚವೂ ಬಡವಿಯಲ್ಲ

ಶ್ರೀಮಂತಿಕೆಯ ಚಿತ್ತ ಉಳ್ಳವಳು

ಹೆಣ್ಣು......


ತವರುಮನೆಯ ಹಾಲುಂಡಿ  

ಹಾರೈಸುವಳು  ಹೆಣ್ಣು

ತನ್ನ ತವರು ಸುಖಭೋಗ 

ಸಂತೋಷದಿಂದ ತುಂಬರಿಯಲೆಂದು


ಒಳಿತಿನ ಮನಸ್ಸಿನಿಂದ ಸಂತೈಸುವಳು 

ಪರಮ ಪೂಜೆಯಾದ ಆ.. ಹೆಣ್ಣು


ಸಂಸಾರವೆಂಬ ದೀಪವನ್ನು ಬೆಳಗಿಸುತ್ತಾ

ಹಗಲಿರುಳು ತನ್ನ ಪರಿವಾರವನ್ನು

ಪೋಷಿಸುವವಳು ಹೆಣ್ಣು...


ಜನ್ಮ ಕೊಟ್ಟ ಮಾತೆ ಹೆಣ್ಣು

ನಮ್ಮ ಹೊತ್ತ ಭೂ ತಾಯಿ ಹೆಣ್ಣು

ಜಗನ್ಮಾತೆ ಭುವನೇಶ್ವರಿ ಹೆಣ್ಣು


ಅತ್ತ-ಇತ್ತ ಎತ್ತೆತ್ತ ಆಲಿಸಿದರು

ಕೋಮಲವಾದ ಪದವೇ ಹೆಣ್ಣು

ಇವಳ ವರ್ಣಿಸಲು ಎಂದು ಸಾಲದು

ವರ್ಣಿಸುತ್ತಾ ಕುಳಿತರೆ ಎಂದು ಮುಗಿಯದು


ಹೆಣ್ಣು ..ಹೆಣ್ಣು ..ಹೆಣ್ಣು ...

ಅದೋ ಅರಿಯದ ಪುರುಷರೇ

ನಮ್ಮೆಲ್ಲರ ಉಸಿರೇ ಹೆಣ್ಣಾಗಿರುವಾಗ

ಹೆಣ್ಣಿನ ಉಸಿರನ್ನು ಉಳಿಸಿ

ಅವಳ ಹೆಸರನ್ನು ಅಳಿಸದಿರಿ


 -ದೀಕ್ಷಿತ ಗಿರೀಶ್ 

ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ 

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top