ಪಿಯುಸಿ ಫಲಿತಾಂಶ: ಆಳ್ವಾಸ್‍ಗೆ ಸಿಂಹಪಾಲು

Upayuktha
0

ರಾಜ್ಯದ ಟಾಪ್ 10 ರ‍್ಯಾಂಕ್‌ ಗಳಲ್ಲಿ ಆಳ್ವಾಸ್‍ನ 30 ವಿದ್ಯಾರ್ಥಿಗಳು


ಮೂಡುಬಿದಿರೆ: ರಾಜ್ಯ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ 30 ವಿದ್ಯಾರ್ಥಿಗಳು ರಾಜ್ಯದಲ್ಲೇ ಟಾಪ್ 10 ಸ್ಥಾನಗಳನ್ನು ಅಲಂಕರಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶ್ರೀಕೃಷ್ಣ ಪೆಜತ್ತಾಯ ಪಿ.ಎಸ್. (597) ಹಾಗೂ ವಾಣಿಜ್ಯ ವಿಭಾಗದಲ್ಲಿ ಸಮರ್ಥ್ ವಿಶ್ವನಾಥ್ ಜೋಶಿ (595) ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.


ವಿಜ್ಞಾನ ವಿಭಾಗದ ಸಾಧಕರು:

ವಿದ್ಯಾರ್ಥಿಗಳಾದ ಶಿವಾಂಗ್ (594) ಐದನೇ ಸ್ಥಾನ, ಸಹನಾ (593) ಆರನೇ ಸ್ಥಾನ, ಭರತ್ ಎಂ. ಯು. (592), ಜಾಹ್ನವಿ ಶೆಟ್ಟಿ (592), ವಿಘ್ನೇಶ್ ಮಲ್ಯ (592), ಸಿಂಚನಾ ಆರ್. ಪಿ. (592) ಏಳನೇ ಸ್ಥಾನ ಗಳಿಸಿದ್ದಾರೆ. ಭರತ್ ಗೌಡ (591), ರಾಘಶ್ರೀ (591), ವೈಷ್ಣವಿ ಡಿ. ರಾವ್ (591) ಎಂಟನೇ ಸ್ಥಾನ, ಹಿತೇಶ್ (590), ಮಧುಸೂಧನ್ (590) ಒಂಬತ್ತನೇ ಸ್ಥಾನ ಹಾಗೂ ಹರ್ಷಿತಾ (589) ಹತ್ತನೇ ಸ್ಥಾನ ಪಡೆದಿದ್ದಾರೆ.


ವಾಣಿಜ್ಯ ವಿಭಾಗದ ಸಾಧಕರು:

ಶಹಾ ವೇದಾಂತ್ ದೀಪಕ್ (594), ಪ್ರಜ್ಞಾ ಗಣಪತಿ ಹೆಗ್ಡೆ (594) ತೃತೀಯ ಸ್ಥಾನ, ಆಶಿತಾ (593), ಸ್ಯಾಮ್‍ಸನ್ ಆಕಾಶ್ ರೋಡ್ರಿಗಸ್ (593) ನಾಲ್ಕನೇ ಸ್ಥಾನ, ಕಾವ್ಯ(591) ಆರನೇ ಸ್ಥಾನ, ಚೈತನ್ಯ (590), ಮೀಷ್ಣಾ ಆರ್. (590) ಏಳನೇ ಸ್ಥಾನ, ಹರ್ಷಿತಾ ಕೆ. ಎನ್ (589), ಅಂಕಿತಾ ಎ. ಬರಾಡ್ಕರ್ (589) ಅನ್ವಿತಾ ಆರ್ ಶೆಟ್ಟಿ (589) ಹಾಗೂ ಕೃತಿಕಾ ಕೆ. ಎಂ. (589) ಎಂಟನೇ ಸ್ಥಾನ ಗಳಿಸಿದ್ದಾರೆ. ಪಲ್ಲವಿ ಮಲ್ಲಿಕಾರ್ಜುನ್ ಮುಶಿ (588), ವೇದಾಂತ್ ಜೈನ್ (588) ಒಂಬತ್ತನೇ ಸ್ಥಾನ, ತೇಜಸ್ ಬಿ. ವಿ. (587), ದೇಶಿಕಾ ಕೆ. (587) ಹಾಗೂ ಶ್ರೇಯಸ್ ಗೌಡ ಎಂ. ಎಸ್ (587) ರಾಜ್ಯದಲ್ಲೇ ಹತ್ತನೇ ಸ್ಥಾನ ಅಲಂಕರಿಸಿದ್ದಾರೆ.


ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ.ಪೂ ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ ಉಪಸ್ಥಿತರಿದ್ದರು.


ವಿದ್ಯಾರ್ಥಿ ಸಾಧಕರಿಗೆ ನಗದು ಬಹುಮಾನ

ವಿದ್ಯಾರ್ಥಿ ಜೀವನದಲ್ಲಿ ಪದವಿಪೂರ್ವ ಶಿಕ್ಷಣ ಒಂದು ಪ್ರಮುಖ ಘಟ್ಟ. ಈ ಹಂತದಲ್ಲಿ ಅದ್ವಿತೀಯ ಸಾಧನೆಗೈದು, ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲೇ ದ್ವಿತೀಯ ಸ್ಥಾನಗಳಿಸಿದ ಶ್ರೀಕೃಷ್ಣ ಪೆಜತ್ತಾಯ ಹಾಗೂ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಸಮರ್ಥ್ ವಿಶ್ವನಾಥ್ ಜೋಶಿ ಅವರಿಗೆ ತಲಾ 1 ಲಕ್ಷ ರೂಪಾಯಿ ನಗದು ಹಾಗೂ ತೃತೀಯ ಸ್ಥಾನ ಪಡೆದ ವಾಣಿಜ್ಯ ವಿಭಾಗದ ಶಹಾ ವೇದಾಂತ್ ದೀಪಕ್ ಹಾಗೂ ಪ್ರಜ್ಞಾ ಗಣಪತಿ ಹೆಗ್ಡೆ ಅವರಿಗೆ ತಲಾ 50 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು.

-ಡಾ. ಎಂ. ಮೋಹನ್ ಆಳ್ವ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top