ಪಿಯುಸಿ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಮಹತ್ಸಾಧನೆ

Upayuktha
0

32 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ

98.27% ದಾಖಲೆಯ ಫಲಿತಾಂಶ



ಮೂಡುಬಿದಿರೆ: ಕರ್ನಾಟಕ ರಾಜ್ಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜು 98.27% ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 1911 ವಿದ್ಯಾರ್ಥಿಗಳಲ್ಲಿ 1878 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 32 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ಸ್ಥಾನಗಳನ್ನು ಪಡೆಯುವ ಮೂಲಕ ಆಳ್ವಾಸ್ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ  ಮಹತ್ಸಾಧನೆ ಮೆರೆಯುವಂತೆ ಮಾಡಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ವಿಜ್ಞಾನ ವಿಭಾಗದಲ್ಲಿ ಶ್ರೀಕೃಷ್ಣ ಪೆಜತ್ತಾಯ ಪಿ ಎಸ್ 597 ಅಂಕಗಳೊಂದಿಗೆ ಹಾಗೂ ವಾಣಿಜ್ಯ ವಿಭಾಗದಲ್ಲಿ ಸಮರ್ಥ್ ವಿಶ್ವನಾಥ್ ಜೋಶಿ 595 ಅಂಕಗಳೊಂದಿಗೆ ರಾಜ್ಯದಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದರೆ, ವಾಣಿಜ್ಯ ವಿಭಾಗದಲ್ಲಿ 2 ವಿದ್ಯಾರ್ಥಿಗಳು 3ನೇ ಸ್ಥಾನ ಪಡೆದಿದ್ದಾರೆ. 33 ವಿದ್ಯಾರ್ಥಿಗಳು  98% ಕ್ಕಿಂತಲೂ ಅಧಿಕ ಫಲಿತಾಂಶ ಪಡೆದಿದ್ದು, 322 ವಿದ್ಯಾರ್ಥಿಗಳು 95% ಕ್ಕಿಂತಲೂ ಅಧಿಕ, 870 ವಿದ್ಯಾರ್ಥಿಗಳು 90%ಕ್ಕಿಂತಲೂ ಅಧಿಕ, 1209 ವಿದ್ಯಾರ್ಥಿಗಳು 85% ಕ್ಕಿಂತ ಅಧಿಕ ಹಾಗೂ 611 ವಿದ್ಯಾರ್ಥಿಗಳು ಪ್ರಥಮ ದರ್ಜೆ ಫಲಿತಾಂಶ ದಾಖಲಿಸಿದ್ದಾರೆ.  


5 ವಿಷಯಗಳಲ್ಲಿ ಓರ್ವ ವಿದ್ಯಾರ್ಥಿ ನೂರಕ್ಕೆ 100 ಅಂಕ, 4 ವಿಷಯಗಳಲ್ಲಿ 18 ವಿದ್ಯಾರ್ಥಿಗಳು ನೂರಕ್ಕೆ 100, 3 ವಿಷಯಗಳಲ್ಲಿ 65 ವಿದ್ಯಾರ್ಥಿಗಳು, 2 ವಿಷಯಗಲ್ಲಿ 125 ವಿದ್ಯಾರ್ಥಿಗಳು, 1 ವಿಷಯದಲ್ಲಿ 339 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ 19 ವಿಷಯವಾರು ಪತ್ರಿಕೆಗಳಲ್ಲಿ 548 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕ ಪಡೆದಿದ್ದಾರೆ.


ಗಣಿತ ವಿಷಯದಲ್ಲಿ 343 ವಿದ್ಯಾರ್ಥಿಗಳು, ಕಂಪ್ಯೂಟರ್ ಸೈನ್ಸ್ ನಲ್ಲಿ 105 ವಿದ್ಯಾರ್ಥಿಗಳು, ಅಕೌಂಟೆನ್ಸಿ ಯಲ್ಲಿ 101 ವಿದ್ಯಾರ್ಥಿಗಳು, ರಸಾಯನ ಶಾಸ್ತ್ರದಲ್ಲಿ 89 ವಿದ್ಯಾರ್ಥಿಗಳು, ಜೀವವಿಜ್ಞಾನದಲ್ಲಿ 72, ಬೌತಶಾಸ್ತ್ರದಲ್ಲಿ 63, ಸಂಖ್ಯಾಶಾಸ್ತ್ರದಲ್ಲಿ 51 ವಿದ್ಯಾರ್ಥಿಗಳು, ಬ್ಯುಸಿನೆಸ್ ಸ್ಟಡೀಸ್ ನಲ್ಲಿ 35 ವಿದ್ಯಾರ್ಥಿಗಳು, ಅರ್ಥಶಾಸ್ತ್ರದಲ್ಲಿ 31 ವಿದ್ಯಾರ್ಥಿಗಳು, ಬೇಸಿಕ್ ಮ್ಯಾತ್ಸ್ ನಲ್ಲಿ 15 ವಿದ್ಯಾರ್ಥಿಗಳು, ಎಲೆಕ್ಟ್ರಾನಿಕ್ಸ್ ನಲ್ಲಿ 6 ವಿದ್ಯಾರ್ಥಿಗಳು ಹಾಗೂ ಭಾμÁ ವಿಷಯಗಳಾದ ಸಂಸ್ಕøತದಲ್ಲಿ 47 ವಿದ್ಯಾರ್ಥಿಗಳು, ಹಿಂದಿಯಲ್ಲಿ 6 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.


ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕೌಶಿಕ ಅಂಗವೈಕಲ್ಯದ ಮಿತಿಯ ನಡುವೆಯೂ ಕಾಲಿನಲ್ಲೆ  ಪರೀಕ್ಷೆ ಬರೆದು 524 ಅಂಕ ಪಡೆದು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆ ಹೊಂದಿದ್ದಾನೆ. ಇವನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಶಿಕ್ಷಣ ಪಡೆಯುತ್ತಿರುವ  ವಿದ್ಯಾರ್ಥಿಯಾಗಿದ್ದಾನೆ.

- ಡಾ ಎಂ ಮೋಹನ್ ಆಳ್ವ.


ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಣ ಸಂಸ್ಥೆಯ  ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ ವೃಂದ, ಶಿಕ್ಷಕೇತರ ವೃಂದ, ಹಾಗೂ ಪೋಷಕರ ಸಹಕಾರ ಅಭಿನಂದನೀಯ ಎಂದು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೋ ಸದಾಕತ್ ಉಪಸ್ಥಿತರಿದ್ದರು. 

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top