|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೆನರಾ ಕಾಲೇಜಿನಲ್ಲಿ ರಾ.ಸೇ.ಯೋ ಅಂತರ್ಕಾಲೇಜು ಸ್ಪರ್ಧಾವಳಿ 'ಸೃಜನ'

ಕೆನರಾ ಕಾಲೇಜಿನಲ್ಲಿ ರಾ.ಸೇ.ಯೋ ಅಂತರ್ಕಾಲೇಜು ಸ್ಪರ್ಧಾವಳಿ 'ಸೃಜನ'


ಮಂಗಳೂರು: ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗಾಗಿ ಅಂತರಕಾಲೇಜು ಸ್ಪರ್ಧಾವಳಿ 'ಸೃಜನಾ'ದ ಉದ್ಘಾಟನಾ ಕಾರ್ಯಕ್ರಮ ಕೆನರಾ ಕಾಲೇಜಿನಲ್ಲಿ ನಡೆಯಿತು. ನಿಕಟಪೂರ್ವ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಗಣನಾಥ ಎಕ್ಕಾರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು "ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಸಿದ್ಧಗೊಳಿಸುವ ಶಕ್ತಿ ರಾಸೇಯೋದಲ್ಲಿ ದೊರೆಯುತ್ತದೆ. ಶಿಕ್ಷಣದೊಂದಿಗೆ ಸೇವೆ ಮತ್ತು ವ್ಯಕ್ತಿತ್ವ ವಿಕಸನವನ್ನು ಉಂಟುಮಾಡುತ್ತದೆ. ಕೌಶಲ್ಯದ ಕೊರತೆಯನ್ನು ನೀಗಿಸಲು ಇಂತಹ ಪಠ್ಯಪೂರಕ ಚಟುವಟಿಕೆಗಳು ಬೇಕು. ಕೊಟ್ಟ ಕೆಲಸವನ್ನು ಚೆನ್ನಾಗಿ ಮಾಡುವುದು, ಸಾಂಸ್ಕೃತಿಕ ಮನಸ್ಸನ್ನು ರೂಢಿಸಿಕೊಳ್ಳಲು ಸಹಾಯಕ" ಎಂದು ಹೇಳಿ "ಇದೊಂದು ಪವಿತ್ರ ಕಾರ್ಯ, ವಿದ್ಯಾರ್ಥಿಗಳನ್ನು ಬೆಳೆಸುವ ಕಾರ್ಯ" ಎಂದು ನುಡಿದರು.


ಕೆನರಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಶ್ರೀ ಎಂ. ರಂಗನಾಥ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, "ಗಾಂಧೀಜಿಯವರ ನುಡಿಯಂತೆ ಯುವಜನಾಂಗದಲ್ಲಿ ಸೇವಾ ಮನೋಭಾವ, ಬಾಂಧವ್ಯ, ಸೃಜನಶೀಲ ಚಟುವಟಿಕೆಗಳಿಗೆ ರಾ. ಸೇ. ಯೋ ಸಹಕಾರಿಯಾಗಿದೆ" ಎಂದು ನುಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ. ವಿ ಎಲ್ಲ ಸ್ಪರ್ಧಾಳುಗಳು ಕಾರ್ಯಕ್ರಮದ ಸರ್ವಪ್ರಯೋಜನ ಪಡೆದು ಯಶಸ್ಸನ್ನು ಪಡೆಯಿರಿ" ಎಂದು ಶುಭಹಾರೈಸಿದರು.


ಸಂಚಾಲಕರಾದ ಶ್ರೀ ಜಗನ್ನಾಥ ಕಾಮತ್ ಧ್ವಜಾರೋಹಣಗೈದರು. ಸಿಬ್ಬಂದಿ ಕ್ಷೇಮಪಾಲನ ಕಾರ್ಯದರ್ಶಿ ಜಯಭಾರತಿ ಕೆ.ಪಿ ಸ್ವಾಗತಿಸಿ, ರಾಸೇಯೋ ದ ಯೋಜನಾಧಿಕಾರಿ ಶ್ರೀಮತಿ ಸೀಮಾ ಪ್ರಭು ವರದಿ ವಾಚಿಸಿದರು. ಕಾಲೇಜಿನ ವ್ಯವಸ್ಥಾಪಕ ಶ್ರೀ ಶಿವಾನಂದ ಪೈ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅನಿಲ, ಪದವಿಪೂರ್ವ ಕಾಲೇಜು ಡೀನ್ ಶ್ರೀ ಗೋಪಾಲಕೃಷ್ಣ ಶೆಟ್ಟಿ, ಯೋಜನಾಧಿಕಾರಿ ವಿದ್ಯಾರ್ಥಿ ಪ್ರತಿನಿಧಿಗಳಾದ ಕು. ಅನುಶ್ರೀ, ಪವನ್ ಶೆಟ್ಟಿ ಉಪಸ್ಥಿತರಿದ್ದರು. ರಾಸೇಯೋ ಯೋಜನಾಧಿಕಾರಿ ಶ್ರೀಮತಿ ವಾಣಿ. ಯು.ಎಸ್ ವಂದಿಸಿ, ಕು.ನಿರೀಕ್ಷಾ  ನಿರೂಪಿಸಿದರು.


ಸಮಾರೋಪ ಸಮಾರಂಭದಲ್ಲಿ ನ್ಯಾಯವಾದಿ ಶ್ರೀ ರವಿಪ್ರಸನ್ನ ಸಿ. ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಡಾ. ನಾಗರತ್ನ ಉಪಸ್ಥಿತರಿದ್ದರು. ಕೆನರಾ ಆಡಳಿತ ಮಂಡಳಿಯ ಪದಾಧಿಕಾರಿ ಶ್ರೀ ಬಸ್ತಿ ಪುರುಷೋತ್ತಮ ಶೆಣೈ ಅಧ್ಯಕ್ಷತೆವಹಿಸಿದ್ದರು. ಸ್ಪರ್ಧಾವಳಿಯ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಗೋವಿಂದದಾಸ ಕಾಲೇಜು ಸುರತ್ಕಲ್ ಪಡೆದುಕೊಂಡಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم