|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಡಿಪು ಭಾರತಿ ನೃತ್ಯಾಲಯ ವಾರ್ಷಿಕೋತ್ಸವ | ಗುರುವಂದನೆ ಕಾರ್ಯಕ್ರಮ ಸಂಪನ್ನ

ಮುಡಿಪು ಭಾರತಿ ನೃತ್ಯಾಲಯ ವಾರ್ಷಿಕೋತ್ಸವ | ಗುರುವಂದನೆ ಕಾರ್ಯಕ್ರಮ ಸಂಪನ್ನ

ಸಂಸ್ಕೃತಿ ಬಿಂಬಿಸುವ ಕಲೆಗಳಿಗೆ ಮನ್ನಣೆ: ಪೋಷಕರಿಗೆ ಚಂದ್ರಶೇಖರ ಶೆಟ್ಟಿ ಕರೆ


ಮುಡಿಪು: ಇಂದಿನ ಯುವಪೀಳಿಗೆಯು ಕಲೆಯನ್ನು ಆಯ್ಕೆ ಮಾಡುವಲ್ಲಿ ಜಾಗ್ರತೆ ವಹಿಸಬೇಕು. ಸಂಸ್ಕೃತಿಯನ್ನು ಬಿಂಬಿಸುವ ಕಲೆಗಳಿಗೆ ಮನ್ನಣೆ ನೀಡುವಂತೆ, ಭರತನಾಟ್ಯದಂತಹ ನೃತ್ಯ ಪ್ರಕಾರಗಳ ತರಗತಿಗಳಿಗೆ ಮಕ್ಕಳನ್ನು ಸೇರಿಸಲು ಹೆತ್ತವರು ಆಸಕ್ತಿ ವಹಿಸಬೇಕು ಎಂದು ಮಂಗಳೂರು ಸನಾತನ ನಾಟ್ಯಾಲಯ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಹೇಳಿದ್ದಾರೆ.


ಬಂಟ್ವಾಳ ತಾಲೂಕಿನ ಮುಡಿಪು ಗೋಪಾಲಕೃಷ್ಣ ಸಭಾಂಗಣದಲ್ಲಿ ಜೂ.11ರಂದು ನಡೆದ ಮುಡಿಪು ಭಾರತಿ ನೃತ್ಯಾಲಯದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.


ಮಂಗಳೂರು ಸನಾತನ ನಾಟ್ಯಾಲಯದ ಅಧ್ಯಕ್ಷೆ ಶಾರದಾ ಮಣಿಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಡಿಪು ಶ್ರೀ ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ. ಮುರಳಿಮೋಹನ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಇನ್ನೊರ್ವ ಅತಿಥಿ ವಿದುಷಿ ಶ್ರೀಲತಾ ನಾಗರಾಜ್ ಹಾಜರಿದ್ದರು.


ಶಾರದಾಮಣಿ ಶೇಖರ್ ಹಾಗೂ ಶ್ರೀಲತಾ ನಾಗರಾಜ್ ಅವರಿಗೆ ಭಾರತಿ ನೃತ್ಯಾಲಯದ ಗುರು ಉಮಾ ವಿ. ಹೆಬ್ಬಾರ್ ಗುರುವಂದನೆ ನೆರವೇರಿಸಿದರು.


ಉಮಾ ವಿ.ಹೆಬ್ಬಾರ್ ಅವರಿಗೆ ಭಾರತಿ ನೃತ್ಯಾಲಯದ (ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾದ) ಹಿರಿಯ ಶಿಷ್ಯೆಯರು ಗುರುವಂದನೆ ಸಲ್ಲಿಸಿದರು. ಪೋಷಕರ ವತಿಯಿಂದ ಗುರುಕಾಣಿಕೆ ನೀಡಲಾಯಿತು.


ನೃತ್ಯಾಲಯದ ವಿದ್ಯಾರ್ಥಿಗಳಾದ ವೀಕ್ಷಾ, ತನಿಷ, ಪ್ರಕೃತಿ, ಹಾಗೂ ಮೇಧಾ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಅವರಿಗೆ ಸ್ಮರಣಿಕೆ ಕೊಟ್ಟು ಪುರಸ್ಕರಿಸಲಾಯಿತು. ರಾಮಕೃಷ್ಣ ಭಟ್ ಸ್ವಾಗತಿಸಿದರು. ಹೇಮಲತಾ ವಂದಿಸಿದರು. ಸ್ವಪ್ನಾ ಭಟ್ ನಿರೂಪಿಸಿದರು. ನೃತ್ಯಾಲಯದ ಮಕ್ಕಳಿಂದ ನೃತ್ಯ ಸಿಂಚನ ಪ್ರಸ್ತುತಗೊಂಡಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم