ಮೂಡುಬಿದಿರೆ: ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಇರಬೇಕು. ಯಾವುದೇ ವಿಷಯ ಪರಿಣತಿಯನ್ನು ಸಮಾಜದ ಒಳಿತಿಗಾಗಿ ಉಪಯೋಗಿಸಬೇಕು ಎಂದು ಐಸಿಎಆರ್‍ನ ಜೈವಿಕ ತಂತ್ರಜ್ಞಾನ ವಿಜ್ಞಾನಿ ಡಾ. ಹೆಚ್. ಹೆಚ್. ಕುಮಾರಸ್ವಾಮಿ ಹೇಳಿದರು.
ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗ ಗುರುವಾರ ಕುವೆಂಪು ಸಭಾಭವನದಲ್ಲಿ ಆಯೋಜಿಸಿದ್ದ ‘ವಿಜ್ಞಾನಿ-ವಿದ್ಯಾರ್ಥಿ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದನ್ನೂ ಸುಲಭವಾಗಿ ಅನುಕರಿಸುವ ಬದಲು ಪ್ರಶ್ನೆ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ನಮಗೆ ಎಲ್ಲವೂ ತಿಳಿದಿದೆ ಎಂದುಕೊಂಡರೆ ಅದು ತಪ್ಪು. ಪ್ರಶ್ನೆ ಎಲ್ಲಿ ಇರುತ್ತದೆಯೋ ಅಲ್ಲಿ ಬೆಳವಣಿಗೆ ಸಾದ್ಯ. ವಿಜ್ಞಾನದಲ್ಲಿ ನಮಗೆ ತಿಳಿಯದ ಅನೇಕ ವಿಷಯಗಳು ಅಡಗಿರುತ್ತವೆ. ವಿಜ್ಞಾನವನ್ನು ಅರಿತುಕೊಳ್ಳಲು ಹೆಚ್ಚು ಗ್ರಹಿಸಬೇಕು ಹಾಗೂ ಹೆಚ್ಚು ಓದಬೇಕು. ನಮ್ಮ ದೇಹ ಹಾಗೂ ಮನಸ್ಸನ್ನು ಸರಿಯಾಗಿ ನಿಯಂತ್ರಿಸುವುದು ಬಹಳ ಮುಖ್ಯ. ಅದರಲ್ಲೂ ಸಮತೋಲಿತ ಆಹಾರ, ಸ್ಮರಣವೃದ್ಧಿಯನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ವಿಜ್ಞಾನ ಬೇರೆಯಲ್ಲ, ಸಮಾಜ ಬೇರೆಯಲ್ಲ ಸಮಾಜದ ಒಳಿತಿಗಾಗಿ, ಸುಸ್ತಿರ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸುವ ವಿಜ್ಞಾನ ನಮಗಿಂದು ಬೇಕು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿಭಾ ನಿರೂಪಿಸಿ, ವರ್ಷಾ ಸ್ವಾಗತಿಸಿ, ಧನ್ಯಾ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ