ಮಂಗಳೂರು ವಿವಿ: ಕನಕದಾಸರ ಕುರಿತು ಪ್ರಬಂಧಗಳ ಆಹ್ವಾನ

Upayuktha
0


ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರ ಮತ್ತು ಕರ್ನಾಟಕ ಸರಕಾರದ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಜುಲೈ ತಿಂಗಳ ಮೂರನೇ ವಾರದಲ್ಲಿ ನಡೆಸಲು ಉದ್ದೇಶಿಸಿರುವ `ಕನಕ ಸಾಹಿತ್ಯ ಸಮ್ಮೇಳನ’ದ ಪ್ರಯುಕ್ತ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಸಂಶೋಧನ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಾರ್ವಜನಿಕರಿಂದ ಸಂಶೋಧನ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ. 


‘ಉಪನಿಷತ್ತು ಚಿಂತನೆಗಳು ಮತ್ತು ಕನಕದಾಸರು’, ‘ಕನಕದಾಸರಲ್ಲಿ ಪುರಾಣ ಪ್ರಜ್ಞೆ’, `ದ್ವೈತ-ಅದ್ವೈತ ಚಿಂತನೆಗಳು ಮತ್ತು ಕನಕ’, `ಐತಿಹ್ಯಗಳು ಕಟ್ಟಿಕೊಡುವ ಕನಕದಾಸರ ವ್ಯಕ್ತಿತ್ವ’, `ವಚನ ಸಾಹಿತ್ಯ ಮತ್ತು ಕನಕ’, `ಕನಕದಾಸರ ಕೃತಿಗಳಲ್ಲಿ ಅಭಿವ್ಯಕ್ತಿಗೊಂಡ ವಿಜಯನಗರ ಸಾಮ್ರಾಜ್ಯ’, `ಭಜನೆ ಸಾಹಿತ್ಯ ಮತ್ತು ಕನಕದಾಸರು’, `ಕನಕದಾಸರ ಕೃತಿಗಳಲ್ಲಿ ಆಧುನಿಕತೆಯ ಪರಿಕಲ್ಪನೆ’, `ಅಲ್ಲಮನ ಬೆಡಗಿನ ವಚನಗಳು ಮತ್ತು ಕನಕದಾಸರ ಮುಂಡಿಗೆಗಳು’, `ಕನಕದಾಸರ ಕೃತಿಗಳ ಪ್ರಸ್ತುತತೆ’ (ಯಾವುದಾದರೂ ಒಂದು ಕೃತಿಯನ್ನು ಅನುಲಕ್ಷಿಸಿ), `ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’, `ಭಕ್ತ ಕನಕದಾಸ -ಸಿನಿಮಾ ವಿಶ್ಲೇಷಣೆ’, `ಕವಿಗಳು ಕಂಡಂತೆ ಕನಕ’ ಈ ಮೇಲಿನ ಯಾವುದಾದರೂ ಒಂದು ವಿಷಯದ ಕುರಿತು 8 ಪುಟಗಳು ಮೀರದಂತೆ  ಪ್ರಬಂಧ ಸಿದ್ಧಪಡಿಸಿ ಕಚೇರಿ ಇಮೇಲ್ ಐಡಿ kanakadasaresearchcenter2008@gmail.com  ಅಥವಾ ಅಂಚೆ ಮುಖಾಂತರ. ಸಂಯೋಜಕರು, ಕನಕದಾಸ ಸಂಶೋಧನ ಕೇಂದ್ರ, ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ-574199 ಈ ವಿಳಾಸಕ್ಕೆ ದಿನಾಂಕ: 15.07.2022 ರ ಒಳಗಾಗಿ ಸಲ್ಲಿಸಬಹುದಾಗಿದೆ ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆಯ್ದ ಪ್ರಬಂಧಗಳನ್ನು ‘ಕನಕ ಸಾಹಿತ್ಯ ಸಮ್ಮೇಳನ’ದ ರಾಷ್ಟ್ರೀಯ ವಿಚಾರಸಂಕಿರಣ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಲು ಅವಕಾಶ ಕಲ್ಪಿಸಲಾಗುವುದು ಮತ್ತು ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು 

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9591480138 (ಆನಂದ ಎಂ. ಕಿದೂರು ಸಂಶೋಧನ ಸಹಾಯಕರು) ಇವರನ್ನು ಸಂಪರ್ಕಿಸಬಹುದಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top