ಮಂಗಳೂರು: ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಕುರಿತು ತುಳು ಯಕ್ಷಗಾನ ತಾಳಮದ್ದಳೆ ಜುಲೈ 2 ರಿಂದ ಬೆಂಗಳೂರು ದೂರದರ್ಶನ 'ಚಂದನ' ವಾಹಿನಿಯಲ್ಲಿ ಮೂರು ಕಂತುಗಳಾಗಿ ಪ್ರಸಾರಗೊಳ್ಳಲಿದೆ. ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ನೇತೃತ್ವದಲ್ಲಿ ತೆಂಕುತಿಟ್ಟಿನ ಹೆಸರಾಂತ ಕಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ.
'ಕಾರ್ನಿಕೊದ ಸ್ವಾಮಿ ಕೊರಗಜ್ಜೆ' ಎಂಬ ಪ್ರಸಂಗ ಶೀರ್ಷಿಕೆಯೊಂದಿಗೆ ಕಿರುತೆರೆಯಲ್ಲಿ ಮೂಡಿ ಬರುವ ತಾಳಮದ್ದಳೆಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ (ಕೊರಗ ತನಿಯೆ), ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು (ಬೈರಕ್ಕೆ), ಪದ್ಮನಾಭ ಮಾಸ್ಟರ್ ತುಂಬೆ (ಈಸರೆ), ವಿಜಯಶಂಕರ ಆಳ್ವ ಮಿತ್ತಳಿಕೆ (ಪಾರೋತಿ), ಉಬರಡ್ಕ ಅವಿನಾಶ್ ಶೆಟ್ಟಿ (ಮೂಲ ಮೈಸಂದಾಯೆ) ಮತ್ತು ಪ್ರಶಾಂತ್ ಸಿ.ಕೆ. (ಚೆನ್ನೆ) ಪಾತ್ರವಹಿಸಿದ್ದಾರೆ. ಹರೀಶ್ ಶೆಟ್ಟಿ ಸೂಡಾ ಅವರ ಭಾಗವತಿಕೆಗೆ ಅಕ್ಷಯ ರಾವ್ ವಿಟ್ಲ ಮತ್ತು ಶ್ರೀಶ ರಾವ್ ನೆಡ್ಲೆ ಅವರ ಹಿಮ್ಮೇಳವಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ಪ್ರಸ್ತುತಪಡಿಸುವ ಈ ಕಾರ್ಯಕ್ರಮವನ್ನು ಬೆಂಗಳೂರು ದೂರದರ್ಶನದ ಕಾರ್ಯಕ್ರಮ ಅಧಿಕಾರಿ ಎನ್. ಪಂಕಜ ನಿರ್ಮಿಸಿದ್ದಾರೆ.
ತಾಳಮದ್ದಳೆಯ ಮೊದಲ ಕಂತು 2022 ಜುಲೈ ಎರಡರಂದು ಶನಿವಾರ ಬೆಳಿಗ್ಗೆ ಗಂ.930 ಕ್ಕೆ ಪ್ರಸಾರವಾಗುವುದು. 2 ಮತ್ತು 3ನೇ ಕಂತುಗಳು ಕ್ರಮವಾಗಿ ಜುಲೈ 9 ಮತ್ತು 16ರಂದು ನಿಗದಿತ ವೇಳೆಗೆ ಪ್ರಸಾರವಾಗುವುದೆಂದು ಕರ್ನಾಟಕ ಯಕ್ಷ ಭಾರತಿಯ ಪ್ರಕಟಣೆ ತಿಳಿಸಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ