ಕೇರಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಬದಿಯಡ್ಕ ವಿದ್ಯಾಪೀಠದಲ್ಲಿ 100% ಫಲಿತಾಂಶದೊಂದಿಗೆ 11 ಮಂದಿಗೆ ಎ+

Upayuktha
0

ಬದಿಯಡ್ಕ: ಇಲ್ಲಿನ ಶ್ರೀ ಭಾರತೀ ವಿದ್ಯಾಪೀಠದ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.


ಒಟ್ಟು 25 ಮಂದಿ ವಿದ್ಯಾರ್ಥಿಗಳಲ್ಲಿ 11 ಮಂದಿ ಎಲ್ಲಾ ವಿಷಯದಲ್ಲೂ ಎಪ್ಲಸ್ ಹಾಗೂ ಮೂರು ಮಂದಿ ಒಂಭತ್ತು ವಿಷಯಗಳಲ್ಲಿ ಎಪ್ಲಸ್ ಅಂಕವನ್ನು ಪಡೆದಿರುತ್ತಾರೆ. ಶಾಲಾ ಆಡಳಿತ ಸಮಿತಿ, ರಕ್ಷಕ ಶಿಕ್ಷಕ ಸಂಘ, ಅಧ್ಯಾಪಕ ವೃಂದ, ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.

ಶ್ರದ್ಧಾ ಬಳ್ಳಂಬೆಟ್ಟು, ಅಮೃತಾ ಎಂ, ಪ್ರಣತಿ ಕೆ., ಸಿಂಚನಾ, ಸಮೀಕ್ಷಾ, ಸಹನಾ ಕೆ., ಸಾಧನಾ ಕೆ., ಆಕಾಶ್ ಎಸ್., ನೇತ್ರಾ ಎಂ., ದ್ವಿತಿಕಾ ರೈ, ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ ಎಪ್ಲಸ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
To Top