|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯುವಜನತೆಯ ಮಾರ್ಗದರ್ಶನಕ್ಕಾಗಿ ಕರ್ನಾಟಕ ಯುವ ನೀತಿ 2021 ಅಗತ್ಯ: ಡಾ. ರಾಜೇಂದ್ರ ಕೆ ವಿ

ಯುವಜನತೆಯ ಮಾರ್ಗದರ್ಶನಕ್ಕಾಗಿ ಕರ್ನಾಟಕ ಯುವ ನೀತಿ 2021 ಅಗತ್ಯ: ಡಾ. ರಾಜೇಂದ್ರ ಕೆ ವಿ


ಮಂಗಳೂರು: ಯುವಜನತೆಯೇ ನಮ್ಮ ದೇಶದ ಆಸ್ತಿ. ಆದರೆ ಅವರಿಗೆ ಸೂಕ್ತ ಸಮಯದಲ್ಲಿ ಮಾರ್ಗದರ್ಶನ ದೊರೆಯದಿದ್ದರೆ ಅವರೇ ಸಮಾಜಘಾತುಕರಾಗಬಹುದು. ಈ ನಿಟ್ಟಿನಲ್ಲಿ ಕರ್ನಾಟಕ ಯುವ ನೀತಿ- 2021 ರ ಜಾರಿ ಮುಖ್ಯವಾಗಿದೆ, ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಅಭಿಪ್ರಾಯಪಟ್ಟರು. 


ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ (ಮೈಸೂರು) ಮತ್ತು ಯುನಿಸೆಫ್ ಹೈದರಾಬಾದ್ ಮತ್ತು ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ (ಕೊಪ್ಪಳ) ಇವುಗಳ ಸಹಯೋಗದೊಂದಿಗೆ ಶನಿವಾರ ನಡೆದ ಕರ್ನಾಟಕ ಯುವ ನೀತಿ-  2021 ಕುರಿತು ಅಭಿಪ್ರಾಯ ಸಂಗ್ರಹಕ್ಕಾಗಿ ನಡೆದ ಪ್ರಾದೇಶಿಕ ಮಟ್ಟದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಯುವ ನೀತಿ-  2021 ರಾಜ್ಯದ ಬೆಳವಣಿಗೆಯ ದಿಕ್ಕನ್ನು ನಿರ್ಧರಿಸಬಲ್ಲುದು. ಇದರ ಯಶಸ್ಸಿಗೆ ಎಲ್ಲರ ಸಲಹೆ, ಮಾರ್ಗದರ್ಶನಗಳು ಅಗತ್ಯ, ಎಂದರು.


ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಯುವನೀತಿಯ ಪ್ರಾಮುಖ್ಯತೆ, ವ್ಯಾಪಕತೆಯನ್ನು ನಾವು ಮೊದಲು ಅರಿತುಕೊಳ್ಳಬೇಕು. ಈ ಕಾರ್ಯನೀತಿಯನ್ನು ನಿರ್ಧಿಷ್ಟ ಗುರಿಯೊಂದಿಗೆ, ಒಂದು ಚೌಕಟ್ಟಿನೊಳಗೆ ಜಾರಿಗೆ ತಂದರೆ ಹೆಚ್ಚು ಪರಿಣಾಮಕಾರಿಯಾಗಿರಲು ಸಾಧ್ಯ, ಎಂದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ರಮೇಶ್ ವೆಂಕಟರಾಮ್, ಯುವ ನೀತಿಯ ಹಿಂದೆ, ಯುವಕರ ಅಭಿವೃದ್ಧಿ ಮತ್ತು ಅಭಿವೃದ್ಧಿಗಾಗಿ ಯುವಕರನ್ನು ರೂಪಿಸುವ ಗುರಿಯಿದೆ. 15 ರಿಂದ 29 ವರ್ಷ ವಯಸ್ಸಿನ ಯುವಜನತೆಯ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯಮಟ್ಟದ ಯೋಜನೆ ರೂಪಿಸಲಾಗಿದೆ, ಎಂದರು.


ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ (ಕೊಪ್ಪಳ)ಯ ಹರೀಶ್ ಜೋಗಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು, ಎನ್ಎಸ್ಎಸ್ ಅಧಿಕಾರಿಗಳು- ವಿದ್ಯಾರ್ಥಿಗಳು ಹಾಗೂ ಇತರ ಪ್ರತಿನಿಧಿಗಳು ಉಪಸ್ಥಿತರಿದ್ದರು. ಪ್ರತಿನಿಧಿಗಳನ್ನು 6 ತಂಡಗಳಾಗಿ ವಿಂಗಡಿಸಿ, ಯೋಜನೆಯ 6 ಗಮನ ಕೇಂದ್ರೀಕೃತ ಕ್ಷೇತ್ರಗಳ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post