ಪುಂಜಾಲಕಟ್ಟೆ: ಸ.ಪ್ರ.ದ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Upayuktha
0

ಪುಂಜಾಲಕಟ್ಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯ ಆಂತರಿಕ ಗುಣಮಟ್ಟ ಭರವಸೆ ಕೋಶ, ರಾಷ್ಟ್ರೀಯ ಸೇವಾ ಯೋಜನೆ (ಘಟಕ 1 & 2), ಭಾರತೀಯ ಯುವ ರೆಡ್‌ ಕ್ರಾಸ್, ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶೇಷ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.


ಯೋಗವು ಭಾರತೀಯ ಪುರಾತನ ಸಂಸ್ಕೃತಿಯ ಅತ್ಯಮೂಲ್ಯ ಕೊಡುಗೆ ಇದು ಕೇವಲ ವ್ಯಾಯಾಮ ಅಲ್ಲ ನಾವು ಜಗತ್ತು ಮತ್ತು ಪರಿಸರದೊಂದಿಗೆ ಏಕತೆ ಕಂಡುಕೊಳ್ಳುವ ವಿಧಾನವಾಗಿದೆ. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಕುಮಾರಿ ಶ್ವೇತಾ, ಯೋಗ ಚಿಕಿತ್ಸಕಿ, ಪುತ್ತೂರು ಅವರು ಯೋಗಾಭ್ಯಾಸ ಮಾಡುವುದರಿಂದ ಜ್ಞಾನಕ್ಕೆ ಯೋಗ ಬರುತ್ತದೆ ಅಜ್ಞಾನಕ್ಕೆ ರೋಗ ಬರುತ್ತದೆ ಸ್ನೇಹಕ್ಕೆ ಶಕ್ತಿ ತುಂಬುತ್ತದೆ ದೇಹಕ್ಕೆ ಆ ಶಕ್ತಿ ಆಗುತ್ತದೆ ಮನಸ್ಸು ಸದೃಢವಾಗುತ್ತದೆ ಸಮಾಜ ಪ್ರಜ್ವಲವಾಗುತ್ತದೆ ನೆಮ್ಮದಿಯ ಬದುಕು ಸಿಗುತ್ತದೆ. ಟೆನ್ಶನ್ ಗೆ ಯೋಗ ರಾಮಬಾಣ ಎಂದು ಕುಮಾರಿ ಶ್ವೇತ ಮೇಡಂ ಅವರು ಬಹಳ ಅರ್ಥಪೂರ್ಣವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.


ಅಧ್ಯಕ್ಷ ಸ್ಥಾನವನ್ನು ಡಾ.ಟಿ. ಕೆ. ಶರತ್ ಕುಮಾರ್ ಪ್ರಾಂಶುಪಾಲರು ವಹಿಸಿದರು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರೆ ಏನಂದರೆ ಹೊರಜಗತ್ತಿನಲ್ಲಿ ಏನಾಗುತ್ತದೆ ಎಂಬುದನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ ಆದರೆ ನಮ್ಮ ದೇಹದ ಒಳಗೆ ಏನಾಗುತ್ತದೆ ಎಂಬುದನ್ನು ಯೋಗದಿಂದ ನಿಯಂತ್ರಿಸಬಹುದು. ಯೋಗ ಯೋಗ್ಯತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿದರು. 


ಈ ಕಾರ್ಯಕ್ರಮವನ್ನು ಪ್ರೊ.ಸಂತೋಷ್ ಪ್ರಭು ಎಂ. ಮತ್ತು ಪ್ರೊ. ಚಿತ್ರ ಪಡಿಯಾ‌, ಯೋಜನಾಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ. ಮತ್ತು ಪ್ರೊ.ಶೇಖರ್ ಕೆ., & ಡಾ.ವೈಶಾಲಿ ಯು ಸಂಚಾಲಕರು, ಭಾರತೀಯ ಯುವ ರೆಡ್ ಕ್ರಾಸ್ ಅವರು ಈ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು. ವೇದಿಕೆಯಲ್ಲಿ ಕನ್ನಡ ಉಪನ್ಯಾಸಕರಾದ ಗಾಯತ್ರಿ ಮೇಡಂ,  ಕನ್ನಡ ಉಪನ್ಯಾಸಕರಾದ ಕುಮಾರ್ ಸರ್, ಇತಿಹಾಸ ಉಪನ್ಯಾಸಕಿ ಪದ್ಮಶ್ರೀ ಮೇಡಂ, ಅರ್ಥಶಾಸ್ತ್ರ ಉಪನ್ಯಾಸಕಿ ಸ್ವಾತಿ ಮೇಡಂ ಇತಿಹಾಸ ಉಪನ್ಯಾಸಕರಾದ ಮುನಿಕೃಷ್ಣಪ್ಪ ಅವರು ಇದ್ದರು.


ನಿರೂಪಣೆ ಫಾತಿಮತ್ ರಾಫಿಯ ರೆಡ್ ಕ್ರಾಸ್ ನಾಯಕಿ, ಪ್ರಾರ್ಥನೆ ಭೂಮಿಕಾ, ಸ್ವಾಗತ ಸುರಕ್ಷತಾ, ಧನ್ಯವಾದ ಮಧುರ ಅವರು ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top