ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Upayuktha
0

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಆಂಡ್  ಹುಮ್ಯಾನಿಟೀಸ್ ಪಾಂಡೇಶ್ವರ ಕ್ಯಾಂಪಸ್ ನ ಉನ್ನತ ಭಾರತ್ ಅಭಿಯಾನ ವೇದಿಕೆ, ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ರೀಕನ್‌ಸ್ಟ್ರಕ್ಷನ್ ಏಜೆನ್ಸಿ (ಸಿರಾ), ಮತ್ತು ಎನ್‌ಎಸ್‌ಎಸ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚೇಳ್ಯಾರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಜೂನ್ 21, 2022 ರಂದು ಆಚರಿಸಲಾಯಿತು.


ಚೇಳ್ಯಾರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ. ನಿತ್ಯಾನಂದ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ತಿಳಿಸಿದರು. 


ಶಿಕ್ಷಣ ಇಲಾಖೆ ಮಂಗಳೂರಿನ ಬ್ಲಾಕ್ ಸಂಪನ್ಮೂಲ ವ್ಯಕ್ತಿ ನಾಗರಾಜ್ ಎಂ. ಮಾತನಾಡಿ, ಯೋಗವು ನಮ್ಮ ದೈನಂದಿನ ಜೀವನ ಮತ್ತು ನಮ್ಮ ಆರೋಗ್ಯದೊಂದಿಗೆ ಹೇಗೆ ಸಂಪರ್ಕ ಹೊಂದಿದೆ ಎಂಬುದನ್ನು ವಿವರಿಸಿ, ಯೋಗವನ್ನು ಕೇವಲ ಯೋಗ ದಿನಕ್ಕಾಗಿ ಮೀಸಲಿರಿಸದೆ ತಮ್ಮ ದೈನಂದಿನ ಜೀವನದಲ್ಲಿ ಮುಂದುವರಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಚೇಳ್ಯಾರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ  ಕೃಷ್ಣವೇಣಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ, ಯೋಗ ತರಬೇತುದಾರೆ ಮತ್ತು ಕೋಮಲಸ್ಪರ್ಶ್ ಸಲಹಾ ಕೇಂದ್ರದ ಪಿಆರ್‌ಒ ಸುನೀತಾ ನಾಯಕ್ ವಿದ್ಯಾರ್ಥಿಗಳಿಗೆ ಯೋಗ ತರಗತಿಗಳನ್ನು ನಡೆಸಿದರು.


ಶ್ರೀನಿವಾಸ ವಿಶ್ವವಿದ್ಯಾಲಯದ ಸಿರಾ ಕೋ-ಆರ್ಡಿನೇಟರ್ ಡಾ.ವಿದ್ಯಾ ಎನ್., ಕಾರ್ಯಕ್ರಮ ಸಂಯೋಜಕ, ಶ್ರೀನಿವಾಸ ವಿಶ್ವವಿದ್ಯಾಲಯದ ಐಎಸ್ಎಸ್ಎಚ್ ನ ಉಪನ್ಯಾಸಕ ಪ್ರೊ. ಜಾಯ್ಸನ್ ಪಿ. ಕಾರ್ಡೋಜಾ, ಶ್ರೀನಿವಾಸ ವಿಶ್ವವಿದ್ಯಾಲಯದ ಐಎಸ್ಎಸ್ಎಚ್ ಬಿಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕಿ ಪ್ರೊ.ಸುಶ್ಮಿತಾ, ಚೇಳ್ಯಾರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಶ್ರೀನಿವಾಸ ವಿಶ್ವವಿದ್ಯಾನಿಲಯದ ಎಂಎಸ್ ಡಬ್ಲ್ಯೂ ಮತ್ತು ಬಿಎಸ್ ಡಬ್ಲ್ಯೂ ವಿದ್ಯಾರ್ಥಿಗಳು, ಚೇಳ್ಯಾರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಯೋಗ ದಿನಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.


ವಿದ್ಯಾರ್ಥಿನಿ ಪ್ರಜ್ಞಾ ಸ್ವಾಗತಿಸಿ, ಶ್ರೇಯಸ್ ಶೆಣೈ ವಂದಿಸಿದರು. ರಾಜು ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top