ನಿಟ್ಟೆಯಲ್ಲಿ ಯೋಗ ದಿನಾಚರಣೆ

Upayuktha
0



ನಿಟ್ಟೆ: 'ದೈನಂದಿನ ಯೋಗಾಭ್ಯಾಸದಿಂದ ನಮ್ಮ ದೈಹಿಕ ಉಲ್ಲಾಸ ಹಾಗೂ ಆರೋಗ್ಯ ಉತ್ತಮಗೊಳ್ಳಲಿದೆ ಎಂಬ ವಿಚಾರ ವೈಜ್ನಾನಿಕವಾಗಿ ವಿಶ್ವದಾದ್ಯಂತ ಅಂಗೀಕರಿಸಲ್ಪಟ್ಟ ವಿಷಯವಾಗಿದೆʼ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್‌ ಎನ್‌ ಚಿಪ್ಳೂಣ್ಕರ್‌ ಅಭಿಪ್ರಾಯಪಟ್ಟರು.


ಅವರು ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್, ನಿಟ್ಟೆ ಸಮೂಹ ವಿದ್ಯಾಸಂಸ್ಥೆ ಹಾಗೂ ವಿದ್ಯಾಥಿ೯ ನಿಲಯದ ಸಹಯೋಗದಲ್ಲಿ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಯೋಗ ದಿನಾ‍ಚರಣೆ ಕಾರ್ಯಕ್ರಮ ಹಾಗೂ 21 ದಿನಗಳ ಯೋಗ ತರಬೇತಿ ಶಿಬಿರ 'ಯೋಗ ಉತ್ಸವ'ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


'ಕಳೆದ 8 ವರ್ಷಗಳ ಹಿಂದೆ ಜೂ.೨೧ ರನ್ನು ವಿಶ್ವಸಂಸ್ಥೆಯು ವಿಶ್ವ ಯೋಗದಿನವನ್ನಾಗಿ ಘೋ‍ಷಿಸಿದ ವಿಚಾರದಲ್ಲಿ ಭಾರತದ ಪಾತ್ರವನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಈ ಬಾರಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕದ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಯೋಗದಿನದಲ್ಲಿ ಭಾಗವಹಿಸಿರುವುದು ನಮಗೆ ಸಂತಸದ ವಿಷಯ' ಎಂದರು.


ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಕ್ಯಾಂಪಸ್‌ನ ಮೈಟೆನೆನ್ಸ್‌ & ಡೆವಲ್ಮೆಂಟ್‌ ನಿದೇ೯ಶಕ ಶ್ರೀ ಯೋಗೀಶ್‌ ಹೆಗ್ಡೆ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ʼನಿಟ್ಟೆ ಕ್ಯಾಂಪಸ್‌ನಲ್ಲಿ ನಡೆಸಲಾದ 21 ದಿನಗಳ ಯೋಗತರಬೇತಿ ಶಿಬಿರವು  ವಿದ್ಯಾಥಿ೯ಗಳಲ್ಲಿ ದೈಹಿಕ ಆರೋಗ್ಯ ಮಾನಸಿಕ ನೆಮ್ಮದಿ ಹಾಗೂ ಆಧ್ಯಾತ್ಮಿಕ ಅಂಶವನ್ನು ವೃದ್ಧಿಸುವ ಕೆಲಸ ಮಾಡಿದೆ. ಇಂದು ನಿಟ್ಟೆ ಕ್ಯಾಂಪಸ್‌ನಲ್ಲಿನ ವಿವಿಧ ವಿದ್ಯಾಸಂಸ್ಥೆಗಳು ಒಟ್ಟುಗೂಡಿಸಿಕೊಂಡು ಒಂದು ಉತ್ತಮ ರೀತಿಯ ವಿಶ್ವ ಯೋಗದಿನವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿ‍ಷಯವಾಗಿದೆ. ಈ ನಿಟ್ಟಿನಲ್ಲಿ ತಯಾರಿಗೆ ಶ್ರಮಿಸಿದ ಪ್ರತಿಯೋರ್ವರಿಗೂ ಶುಭಾಶಯ. ಇಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾದ ಯೋಗದಿನದ ಓರ್ವ ಸಂಘಟಕ ಕಾರ್ಕಳದವರು ಎನ್ನುವುದು ಸಂತಸದ ವಿಚಾರವಾಗಿದೆ. ಯೋಗವನ್ನು ಪ್ರತಿದಿನವೂ ಅಭ್ಯಸಿಸುವುದು ಅತಿಮುಖ್ಯʼ ಎಂದರು.


ಯೋಗ ಶಿಬಿರದ ಸಂಯೋಜಕ ಡಾ.ಅಜಿತ್‌ ಹೆಬ್ಬಾಳೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಐ ಆರ್ ಮಿತ್ತಂತಾಯ, ಡಾ.ಶ್ರೀನಿವಾಸ್ ರಾವ್ ಬಿ ಆರ್, ನಿಟ್ಟೆ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಬಿ.ಕೆ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಕೆ, ಪಿ.ಯು ಕಾಲೇಜಿನ ಪ್ರಾಂಶುಪಾಲೆ ಭವಾನಿ, ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ರಾಧಾ ಪ್ರಭು, ಹುಡುಗರ ವಿದ್ಯಾಥಿ೯ನಿಲಯದ ಚೀಫ್ ವಾರ್ಡನ್ ಡಾ. ವಿಶ್ವನಾಥ ಹಾಗೂ ಯೋಗಗುರು ಡಾ.ಅಜಿತ್ ಹೆಬ್ಬಾಳೆ ಉಪಸ್ಥಿತರಿದ್ದರು.


ನಿಟ್ಟೆ ಕ್ಯಾಂಪಸ್ ನ ವಿದ್ಯಾರ್ಥಿ-ಸಿಬ್ಬಂದಿಗಳನ್ನು ಒಳಗೊಂಡಂತೆ ಒಟ್ಟು ೮೫೪ ಮಂದಿ ಈ ಸಂದರ್ಭದಲ್ಲಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.


ನಿಟ್ಟೆ ಮಹಿಳಾ ವಿದ್ಯಾರ್ಥಿನಿಲಯದ ಚೀಫ್ ವಾರ್ಡನ್ ಡಾ.ವೀಣಾದೇವಿ ಶಾಸ್ತ್ರೀಮಠ್ ಸ್ವಾಗತಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಯೋಗ ತಂಡವಾದ ಯುಜ್‌ ಫಾರ್‌ ಲೈಫ್‌ ನ ವಿದ್ಯಾಥಿ೯ ನಾಯಕಿ ಶ್ರೀವಾಣಿ ಬಾಯರಿ ವಂದಿಸಿದರು. ಸಹಪ್ರಾಧ್ಯಾಪಕ ಡಾ.ಸರ್ವಜಿತ್ ಕಾರ್ಯಕ್ರಮ ನಿರೂಪಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top