
ಹೊಸಂಗಡಿ: ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ ಇದರ ಬೆಳ್ಳಿಹಬ್ಬದ ಅಂಗವಾಗಿ ಮತ್ತು ವೈದ್ಯರ ದಿನಾಚರಣೆ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಹೊಸಂಗಡಿಯ ಹೈಲ್ಯಾಂಡ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಣೆಗೈಯುತ್ತಿರುವ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ದಿನಾಂಕ 01-07-2022ನೇ ಶುಕ್ರವಾರದಂದು ರಕ್ತದಾನ ಶಿಬಿರ ಬೆಳಿಗ್ಗೆ 10 ರಿಂದ ಅಪರಾಹ್ನ 1 ಘಂಟೆಯವರೆಗೆ ಜರುಗಲಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಡಾ|| ಮುರಲೀ ಮೋಹನ್ ಚೂಂತಾರು ತಿಳಿಸಿದ್ದಾರೆ.
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ಸುರಕ್ಷಾ ದಂತ ಚಿಕಿತ್ಸಾಲಯದ ಜಂಟಿ ಆಶ್ರಯದಲ್ಲಿ ರಕ್ತನಿಧಿ ವೆನ್‍ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಕಾರದೊಂದಿಗೆ ಈ ರಕ್ತದಾನ ಶಿಬಿರ ಜರುಗಲಿದೆ. ಸುರಕ್ಷಾ ದಂತ ಚಿಕಿತ್ಸಾಲಯ ಜುಲೈ 3, 1997 ರಂದು ಹೊಸಂಗಡಿಯ ಹಿಲ್‍ಸೈಡ್ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡು ಇದೀಗ ತನ್ನ 25ನೇ ವರ್ಷದ ಸೇವೆಯನ್ನು ಪೂರೈಸಿ 03-07-2022 ರಂದು 26ನೇ ವರ್ಷಕ್ಕೆ ಕಾಲಿಡುತ್ತಿದೆ.
ಸಾರ್ವಜನಿಕರು ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕೆಂದು ದಂತ ಚಿಕಿತ್ಸಾಲಯದ ದಂತ ವೈದ್ಯರಾದ ಡಾ|| ರಾಜಶ್ರೀ ಮೋಹನ್ ಪ್ರಕಟಣೆಯಲ್ಲಿ ಕೋರಿರುತ್ತಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ