ಗೋಕರ್ಣ: ಸಾರ್ವಭೌಮ ಗುರುಕುಲದಲ್ಲಿ ವಿಶ್ವ ಪರಿಸರ ದಿನಾಚರಣೆ

Upayuktha
0

ಗೋಕರ್ಣ: ಜೂನ್ 5 2022 ರಂದು ಗೋಕರ್ಣದ ಸಾರ್ವಭೌಮ ಗುರುಕುಲದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಗುರುಕುಲದ ಉಪ ಪ್ರಾಂಶುಪಾಲರಾದ ವಿಶ್ವೇಶ್ವರ ಆರ್ಯರವರು ಮಕ್ಕಳಿಗೆ ಪರಿಸರ ನಾಶದ ಬಗ್ಗೆ ಗಮನ ಹರಿಸುವ ಮತ್ತು ಅದನ್ನು ರಕ್ಷಿಸುವ ಹೊಣೆ ನಮ್ಮೆಲ್ಲರದಾಗಿದೆ.ನಾವೆಲ್ಲರೂ ಪರಿಸರದ ಉಳಿವಿಗಾಗಿ ವಾಯುಮಾಲಿನ್ಯ, ಭೂಮಿಯ ಮಾಲಿನ್ಯ ಮಾಡುವುದನ್ನು ನಿಲ್ಲಿಸಬೇಕು. ಜೊತೆಗೆ ನೀರು ಪೋಲಾಗದಂತೆ ಮಿತವಾಗಿ ಬಳಸಬೇಕು. ಹಾಗೆಯೇ  ಅರಣ್ಯನಾಶ ಮಾಡದೇ ಸಸ್ಯಗಳನ್ನು ಹೆಚ್ಚು ಹೆಚ್ಚು  ಬೆಳೆಸಬೇಕು ಎಂದು ಮಕ್ಕಳಿಗೆ ಮನಮುಟ್ಟುವಂತೆ ಹೇಳಿದರು. ನಂತರ ತರಗತಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಅದನ್ನು ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿದರು.


ಈ ದಿನದ ವಿಶೇಷವಾಗಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲಾ ಮಕ್ಕಳು ತಮ್ಮ ತರಗತಿ ಶಿಕ್ಷಕರ ಜೊತೆಗೂಡಿ ಸಾರ್ವಭೌಮ ಗುರುಕುಲವನ್ನು ಪ್ಲಾಸ್ಟಿಕ್ ಮುಕ್ತ ಗುರುಕುಲವನ್ನಾಗಿ ಮಾಡಿದರು. ನಂತರ ಪ್ರಾಚಾರ್ಯರು, ಉಪ ಪ್ರಾಚಾರ್ಯರು ಹಾಗೂ ಎಲ್ಲಾ ಆರ್ಯ- ಆರ್ಯೆಯರ ಜೊತೆಗೂಡಿ ವಿದ್ಯಾರ್ಥಿಗಳು ಗಿಡಗಳನ್ನು ನೆಡುವುದರ ಮೂಲಕ "ಪರಿಸರ ಉಳಿಸಿ ಮನುಕುಲ ಬೆಳೆಸಿ" "ಹಸಿರೇ ಉಸಿರು" ಎಂದು ಸಾರುವ ಮೂಲಕ ಈ ದಿನವನ್ನು ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top