ಅಷ್ಟ ಸಾಧಕರಿಗೆ ಶಿವಳ್ಳಿ ರತ್ನ ಪ್ರಶಸ್ತಿ ಪ್ರದಾನ

Upayuktha
0

ಮಂಗಳೂರು: ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂಟು ಮಂದಿ ಶಿವಳ್ಳಿ ಬ್ರಾಹ್ಮಣ ಸಮುದಾಯದ ಸಾಧಕರಿಗೆ ಶರವು ಬಾಲಂಭಟ್‌ ಸಭಾಂಗಣದಲ್ಲಿ ನಡೆದ ಶಿವಳ್ಳಿ ಸ್ಪಂದನ ವಾರ್ಷಿಕೋತ್ಸವದಲ್ಲಿ ಶಿವಳ್ಳಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಕುಡುಪು ದೇಗುಲದ ತಂತ್ರಿ ವೇದಮೂರ್ತಿ ಕುಡುಪು ನರಸಿಂಹ ತಂತ್ರಿ  ಅವರಿಗೆ ತಂತ್ರಾಗಮ ರತ್ನ ಪ್ರಶಸ್ತಿ, ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಸಮಾಜ ರತ್ನ, ಎಂ.ಬಿ. ಪುರಾಣಿಕ್‌ ಅವರಿಗೆ ಶಿಕ್ಷಣ ರತ್ನ, ಸಾರಿಗೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರೂರು ಪ್ರಭಾಕರ ರಾವ್‌ ಅವರಿಗೆ ಉದ್ಯಮ ರತ್ನ, ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹರಿನಾರಾಯಣ, ಲೀಲಾವತಿ ಬೈಪಡಿತ್ತಾಯ ದಂಪತಿಗೆ ಕಲಾರತ್ನ, ಪವರಲ್‌ ಲಿಪ್ಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕಗಳನ್ನು ಗಳಿಸಿದ ದೀಪಾ ಕೆ. ಅವರಿಗೆ ಕ್ರೀಡಾರತ್ನ, ಪಾಕಶಾಸ್ತ್ರ ಪ್ರವೀಣರಾದ ಶರವು ರಾಘವೇಂದ್ರ ಅವರಿಗೆ ಪಾಕಶಾಸ್ತ್ರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈಗಿನ ಬ್ರಾಹ್ಮಣರಲ್ಲಿ ಕ್ಷತ್ರಿಯ, ವೈಶ್ಯ, ಶೂದ್ರ ಸಹಿತ ಎಲ್ಲ ವರ್ಣಗಳು ಮಿಳಿತವಾಗಿದೆ. ಕಲಿಯುಗದ ವಾಸ್ತವಕ್ಕೆ ಒಗ್ಗಿ ವ್ಯಕ್ತಿತ್ವದ ಮೇರುವಿನಲ್ಲಿ ಊರಿಗೆ ಒಳಿತು ಮಾಡುವ ಬ್ರಾಹ್ಮಣ್ಯವನ್ನು ಇರಿಸಿಕೊಂಡು ಬದುಕಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಎಂ.ಎಂ. ದಯಾಕರ್‌ ಹೇಳಿದರು.


ಸರಕಾರಿ ಇಲಾಖೆಗಳಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಶಿವಳ್ಳಿಯವರ ಸಂಖ್ಯೆ ಇಳಿಮುಖವಾಗಿದೆ. ಅನ್ಯ ಸಂಸ್ಕೃತಿ ಜತೆ ಹೊಂದಾಣಿಕೆ ಮಾಡುವ ಬದಲು ನಮ್ಮದೇ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.


ಪ್ರಶಸ್ತಿ ಪುರಸ್ಕೃತ ಎಂ.ಬಿ. ಪುರಾಣಿಕ್‌ ಮಾತನಾಡಿ, ಸಮುದಾಯದ ಮಕ್ಕಳಿಗೆ ಬಾಲ್ಯದಲ್ಲಿಯೇ ಶಿವಳ್ಳಿ ಹಿಂದೂ ಸಂಸ್ಕಾರವನ್ನು ಕಲಿಸಬೇಕು. ಹುಟ್ಟು ಹಬ್ಬದಲ್ಲಿ ಕೇಕ್‌ ಕತ್ತರಿಸುತ್ತಾ ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ನಿಜವಾದ ಸಂಸ್ಕಾರ ಹೊರ ರಾಜ್ಯದಲ್ಲಿರುವ ಶಿವಳ್ಳಿ ಸಮುದಾಯದಲ್ಲಿ ಉಳಿದುಕೊಂಡಿದೆ ಎಂದರು.


ಬ್ರಾಹ್ಮಣ ಸಮುದಾಯದಲ್ಲಿ ಶಿವಳ್ಳಿ ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಯುವತಿಯರು ಅಂತರ್‌ ಧರ್ಮೀಯ ವಿವಾಹ ಆಗುತ್ತಿರುವುದೇ ಕಾರಣ. ಮಕ್ಕಳಲ್ಲಿ ಸರಿಯಾದ ಸಂಸ್ಕಾರ ಬೆಳೆಸಬೇಕು ಎಂದರು. ಈ ಸಂದರ್ಭ ಸಮುದಾಯದ ಪತ್ರಿಕೆ ಸ್ಪಂದನವಾಣಿಯನ್ನು ಬಿಡುಗಡೆಗೊಳಿಸಲಾಯಿತು.


ಶಿವಳ್ಳಿ ಸ್ಪಂದನ ಅಧ್ಯಕ್ಷ ಕೆ. ಕೃಷ್ಣ ಭಟ್‌ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ ನಿರೂಪಿಸಿದರು. ಕಾರ್ಯದರ್ಶಿ ಗಣೇಶ್‌ ಹೆಬ್ಬಾರ್‌ ವಂದಿಸಿದರು. ಕಟೀಲು ವಲಯ ಅಧ್ಯಕ್ಷ ಅನಂತಪದ್ಮನಾಭ ಸನ್ಮಾನ ಪತ್ರ ವಾಚಿಸಿದರು. ವೇದಿಕೆಯಲ್ಲಿ ಖಜಾಂಚಿ ಸುಮನಾ ರಾವ್‌ ಇದ್ದರು.


ಉಪಾಧ್ಯಕ್ಷ ಉದಯಶಂಕರ್‌ ನೇತೃತ್ವದಲ್ಲಿ ವಿವಿಧ ವಲಯಗಳಿಂದ ಸಾಂಸ್ಕೃತಿಕ ಕಾಯಕ್ರಮಗಳು ನಡೆಯಿತು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top