ಬದಿಯಡ್ಕ: ಪುತ್ತೂರಿನ ನಾಟ್ಯರಂಗ ಬಳಗದ ಕಲಾವಿದೆಯರು ನಿರ್ದೇಶಕಿ ಮಂಜುಳಾ ಸುಬ್ರಹ್ಮಣ್ಯ ಇವರ ಸಾರಥ್ಯದಲ್ಲಿ ಕನ್ನೆಪ್ಪಾಡಿ ಆಶ್ರಯ ವೃದ್ಧರ ಸೇವಾಶ್ರಮದಲ್ಲಿ ನೃತ್ಯಾಂಜಲಿ ಪ್ರಸ್ತುತ ಪಡಿಸಿದರು. ತಮ್ಮ ಅಜ್ಜಿಯ ಸ್ಮರಣಾರ್ಥ ಅನಾಥಾಶ್ರಮದಲ್ಲಿರುವ ವೃದ್ಧರೊಂದಿಗೆ ದಿನ ಕಳೆಯುವುದರೊಂದಿಗೆ, ಶಾಸ್ತ್ರೀಯ ನೃತ್ಯಪ್ರದರ್ಶನವನ್ನೂ ನೀಡಿರುವುದು ಹಿರಿಯರಿಗೆ ಸಂಭ್ರಮವೆನಿಸಿತು.
ನೃತ್ಯ ಪ್ರದರ್ಶನದಲ್ಲಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರೊಂದಿಗೆ ಸಹ ಕಲಾವಿದೆಯರಾಗಿ ರಚನಾ ನರಿಯೂರು, ಇಶಾ ಸುಲೋಚನ, ಋದ್ಧಿ ಎಂ.ವಿ. ಭಾಗವಹಿಸಿದ್ದರು. ಜೊತೆಗೆ ಕುಟುಂಬಿಕರು ಹಾಗೂ ನಾಟ್ಯರಂಗದ ಪೋಷಕರು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ