ಕ್ಲಾಟ್ ಪರೀಕ್ಷೆ: ಆಳ್ವಾಸ್‍ನ 4 ವಿದ್ಯಾರ್ಥಿಗಳು ತೇರ್ಗಡೆ

Upayuktha
0

ಮೂಡುಬಿದಿರೆ: ದೇಶದ 22 ರಾಷ್ಟ್ರೀಯ ಕಾನೂನು ಕಾಲೇಜುಗಳ ಪ್ರವೇಶಕ್ಕೆ ನಡೆಸಲಾಗಿದ್ದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲಾಟ್) ಫಲಿತಾಂಶ ಪ್ರಕಟವಾಗಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸುರಭಿ ಎಸ್. ಆರ್. ಕರ್ನಾಟಕ ರಾಜ್ಯ ಒಬಿಸಿ ವಿಭಾಗದಲ್ಲಿ 13ನೇ ರ‍್ಯಾಂಕ್‌, ಸಾಮಾನ್ಯ ವರ್ಗ ವಿಭಾಗದಲ್ಲಿ 197ನೇ ರ‍್ಯಾಂಕ್‌, ಹೃದಯ್ ಇಂಜಲ್ಲಿಕರ್ ಒಬಿಸಿ ವಿಭಾಗದಲ್ಲಿ 16ನೇ ರ‍್ಯಾಂಕ್‌, ಸಾಮಾನ್ಯ ವರ್ಗ ವಿಭಾಗದಲ್ಲಿ 218ನೇ ರ‍್ಯಾಂಕ್‌, ಸಹನ ಡಿ ಜಿ. ಒಬಿಸಿ ವಿಭಾಗದಲ್ಲಿ 35ನೇ ರ‍್ಯಾಂಕ್‌, ಸಾಮಾನ್ಯ ವರ್ಗ ವಿಭಾಗದಲ್ಲಿ 377ನೇ ರ‍್ಯಾಂಕ್‌, ಹಾಗೂ ಸಾರ್ಥಕ್ ಅಂಕುಶ್ ಎಂ. ಎಸ್ ಸಾಮಾನ್ಯ ವರ್ಗ ವಿಭಾಗದಲ್ಲಿ 429ನೇ ರ‍್ಯಾಂಕ್‌ ಪಡೆದಿದ್ದಾರೆ.


ವಿದ್ಯಾರ್ಥಿಗಳಿಗೆ ಆಳ್ವಾಸ್ ಸಂಸ್ಥೆಯಲ್ಲಿ ಕ್ಲಾಟ್ ಪರೀಕ್ಷಾ ತರಬೇತಿ ಪಡೆದಿದ್ದರು. ಸಾಧಕರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಕಾಲೇಜಿನ ಪ್ರಾಚಾರ್ಯ ಪ್ರೋ ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ ಹಾಗೂ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top