|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀಪಾದರಾಜರ ಆರಾಧನೆ: ಬೆಂಗಳೂರು ಸಿಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಮಠದ ಆವರಣ ಸ್ವಚ್ಛತೆ

ಶ್ರೀಪಾದರಾಜರ ಆರಾಧನೆ: ಬೆಂಗಳೂರು ಸಿಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಮಠದ ಆವರಣ ಸ್ವಚ್ಛತೆ


ಬೆಂಗಳೂರು: ಹರಿದಾಸ ಸಾಹಿತ್ಯದ ಸವ್ಯಸಾಚಿ ಮುಳಬಾಗಿಲಿನ ತಪೋನಿದಿ ಶ್ರೀಪಾದರಾಜರ ಆರಾಧನೆಯನ್ನು ಸೋಮವಾರ (ಜೂ.13) ನಾಡಿನಾದ್ಯಂತ ಸಂಭ್ರಮದ ಸಡಗರ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಬಾರಿ ಬೆಂಗಳೂರಿನ ಸಿಟಿ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವಚ್ಚ ಭಾರತ ಆಂದೋಲನದ ಅಂಗವಾಗಿ ಹಾಗೂ ಪರಿಸರ ದಿನಾಚರಣೆಯ ಸಲುವಾಗಿ ಕೋಣನ ಕುಂಟೆಯ ರಾಯರ ಮಠದ ಸುತ್ತಮುತ್ತಲಿನ ರಸ್ತೆಯನ್ನು ಶುಚಿ ಮಾಡಿದರು. ಶ್ರೀಮಠದ ಆವರಣದಲ್ಲಿ ಗಿಡ ನೆಡುವ ಮೂಲಕ ಆಚರಿಸಿದರು.


ಕೋಣನ ಕುಂಟೆ ರಾಯರ ಮಠದ ಕಾರ್ಯದರ್ಶಿಗಳಾದ ಪಿ.ಎನ್. ಫಣಿ ಕುಮಾರ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ತಿಳಿಸಿದರು. ಶ್ರೀಮಠದ ಅಧ್ಯಕ್ಷರಾದ ಡಾ||ಅನಂತ ಪದ್ಮನಾಭ ರಾವ್ ಅವರು ರಾಘವೇಂದ್ರ ಸ್ವಾಮಿಗಳ ಪ್ರಸಾದವನ್ನು ವಿದ್ಯಾರ್ಥಿಗಳಿಗೆ ನೀಡಿ ರಾಘವೇಂದ್ರ ಸ್ವಾಮಿಗಳು ಎಲ್ಲರಿಗೂ ಉತ್ತಮ ಭವಿಷ್ಯ ನೀಡಲಿ ಎಂದು ಹಾರೈಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿweb counter

0 Comments

Post a Comment

Post a Comment (0)

Previous Post Next Post