ಗಿರಿನಗರ ಮಹಾಗಣಪತಿ ದೇವಾಲಯ - ಅಷ್ಟಬಂಧ~ಪುನಃಪ್ರತಿಷ್ಠೆ- ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

Upayuktha
0

ಬೆಂಗಳೂರು: ಗಿರಿನಗರದ ಮಹಾಗಣಪತಿ ದೇವಾಲಯದಲ್ಲಿ ಇಂದಿನಿಂದ ಅಷ್ಟಬಂಧ ~ಪುನಃಪ್ರತಿಷ್ಠೆ ~ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಆರಂಭವಾಗಿದ್ದು, ಜೂನ್ 9 ರ ವರೆಗೆ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


ಇಂದು ಗುರು-ಗಣಪತಿ ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಅಷ್ಟಬಂಧ ಸಮಿತಿಯ ಅಧ್ಯಕ್ಷರಾದ ಡಾ.ಬಿ.ಕೆ ವಿಶ್ವನಾಥ ಭಟ್ ಹಾಗೂ ಡಾ.ವಿದ್ಯಾ ಭಟ್ ದಂಪತಿಗಳು ಗಣಹೋಮ ನೆರವೇರಿಸಿದರು.


ದಿನಾಂಕ 08.06.2022 ಶುಭ ಮುಹೂರ್ತದಲ್ಲಿ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅಮೃತಹಸ್ತದಿಂದ ಮಹಾಗಣಪತಿ, ಸುಬ್ರಹ್ಮಣ್ಯ ಮುಂತಾದ ದೇವತಾ ಪ್ರತಿಷ್ಠೆ ಸಂಪನ್ನವಾಗಲಿದೆ. 


ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಮೋದಕ ಹವನ, ದೂರ್ವಾ ಗಣಪತಿ ಹವನ, ನಾಗಮೂಲಮಂತ್ರ ಹವನ, ನವಗ್ರಹ ಸಹಿತ ಗಣಪತಿ ಹವನ ಸೇರಿದಂತೆ ವಿವಿಧ ಹೋಮಗಳು ಪ್ರತಿದಿನ ನಡೆಯಲಿದ್ದು, ಪುನಃಪ್ರತಿಷ್ಠಯ ಅಂಗವಾಗಿ ಅಂಕುರ ಪೂಜೆ, ಕುಂಡ ಶುದ್ಧಿ, ಅಧಿವಾಸ ಪೂಜೆ, ಬ್ರಹ್ಮಕಲಶೋತ್ಸವಗಳು ನಡೆಯಲಿವೆ. ಸುಬ್ರಹ್ಮಣ್ಯ ದೇವರಿಗೆ ನೂತನ ಶಿಲಾಮಯ ಗುಡಿ ಸಮರ್ಪಿತವಾಗಲಿದೆ. ಭರತನಾಟ್ಯ, ಯಕ್ಷಗಾನ, ಭಜನೆ ಸಹಿತ ಪ್ರತಿದಿನ ವಿವಿಧ ಪ್ರಾಕಾರಗಳ ಕಲಾಸೇವೆ ಮಹಾಗಣಪತಿಗೆ ಸಮರ್ಪಿತವಾಗಲಿದೆ. ದಿನಾಂಕ 8 ಹಾಗೂ 9 ರಂದು ಸಭಾ ಕಾರ್ಯಕ್ರಮ ನಡೆಯಲಿದ್ದು, ಅನೇಕ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ.  


ಸಾರ್ವಜನಿಕರು ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶಾಸಕರು ಹಾಗೂ ಅಷ್ಟಬಂಧ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಎಲ್ ಎ ರವಿಸುಬ್ರಹ್ಮಣ್ಯ ಹಾಗೂ ಅಷ್ಟಬಂಧ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಕೆ ವಿಶ್ವನಾಥ್ ಭಟ್ ಕೋರಿದ್ದಾರೆ. 

~~~~~~~

ದೇವಾಲಯದ ಹಿನ್ನೆಲೆ: 

ಗಿರಿನಗರದ ಮೊದಲ ದೇವಾಲಯ:

ಶ್ರೀಮಹಾಗಣಪತಿ ದೇವಾಲಯವು ಗಿರಿನಗರದಲ್ಲಿ ನಿರ್ಮಿತವಾದ ಮೊದಲ ದೇವಾಲಯವಾಗಿದ್ದು, 1984 ರಲ್ಲಿ ಶ್ರೀರಾಮಚಂದ್ರಾಪುರಮಠದ ಹಿಂದಿನ ಶ್ರೀಗಳಾದ ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನ ಹಾಗೂ ಗಿರಿನಗರದ ನಿರ್ಮಾತೃಗಳಾದ ಶ್ರೀ ಬಿ. ಕೃಷ್ಣಭಟ್ ನೇತೃತ್ವದಲ್ಲಿ ನಿರ್ಮಾಣವಾಗಿದೆ. 'ಗಿರಿನಗರ ಪುರವರಾಧೀಶ್ವರ' ಎಂದು ಈ ಮಹಾಗಣಪತಿ ದೇವರನ್ನು ಜನರು ಭಕ್ತಿಯಿಂದ ಗೌರವಿಸುವ ವಾಡಿಕೆ ಇದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top