|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಚಯ: ಯಕ್ಷ 'ಪ್ರಿಯೆ'-ಕಲಾ ಸಂಪನ್ನೆ

ಪರಿಚಯ: ಯಕ್ಷ 'ಪ್ರಿಯೆ'-ಕಲಾ ಸಂಪನ್ನೆ


ಕರಾವಳಿಯ ಗಂಡು ಕಲೆ ಯಕ್ಷಗಾನ. ಈ ಗಂಡು ಕಲೆಯಲ್ಲಿ ಅನೇಕ ಹಿರಿಯ ಹಾಗೂ ಯುವ ಕಲಾವಿದರು ಕಾಣ ಸಿಗುತ್ತಾರೆ. ಪ್ರಸ್ತುತ ಈ ಗಂಡು ಕಲೆಯಲ್ಲಿ ಅನೇಕ ಮಹಿಳಾ ಕಲಾವಿದರು ಕೂಡ ಇದ್ದಾರೆ ಅನ್ನುವುದು ಅತ್ಯಂತ ಖುಷಿಯ ವಿಷಯ. ನಾವಿಲ್ಲಿ ಪರಿಚಯಿಸ ಹೊರಟಿರುವುದು ಅಂತಹದ್ದೇ ಒಬ್ಬಾಕೆ ಸಾಧಕಿಯನ್ನು.


22.12.1996 ರಂದು ಸುಜಾತ ಹಾಗೂ ಪೀಟರ್ ಡಿಸೋಜ ಇವರ ಮಗಳಾಗಿ ಪ್ರಿಯಾ ಬ್ರಹ್ಮಾವರ ಅವರ ಜನನ. ಬಿ.ಕಾಂ ಇವರ ವಿದ್ಯಾಭ್ಯಾಸ.


ಅಮ್ಮ ಮೊದಲಿಂದಲೂ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು ಹಾಗೂ ಅವರು ನನ್ನ ಸ್ಟ್ರೆಂತ್ ಹಾಗೂ ಕಲೆಯ ಬಗ್ಗೆ ಚಿಕ್ಕಂದಿನಿಂದಲೂ ಇದ್ದ ಆಸಕ್ತಿ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ ಪ್ರಿಯಾ.


ಶಾಲಾ ದಿನಗಳಲ್ಲಿ ಪ್ರತಿ ವರ್ಷ ಬೇರೆ ಬೇರೆ ಗುರುಗಳ ಮಾರ್ಗದರ್ಶನದಲ್ಲಿ ಕಲಿತಿರುತ್ತಾರೆ.

ಪ್ರಥಮ ಗುರುಗಳು ಕೃಷ್ಣಸ್ವಾಮಿ ಜೋಶಿ, ನಂತರದಲ್ಲಿ ನರಸಿಂಹ ತುಂಗಾ, ನಾರಾಯಣ‌ ಪ್ರಭು, ನವೀನ್ ಕೋಟ. ಪ್ರಸ್ತುತ ಯಕ್ಷ ಮಹಿಳಾ ಬಳಗ ಕೋಟ ಈ ತಂಡದಲ್ಲಿ ಸುಧಾ ಮಣೂರು ಕೋಟ ಇವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ನೀವು ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಮೊದಲಿಗೆ ಕಥೆಯನ್ನು ಪೂರ್ಣವಾಗಿ ತಿಳಿದುಕೊಳ್ಳುತೇನೆ. ನಂತರ ಪಾತ್ರಕ್ಕೆ ಒದಗುವ ಸನ್ನಿವೇಶಕ್ಕೆ ಹಾಗೂ ಪಾತ್ರಕ್ಕೆ ತಕ್ಕ ಭಾವ, ಕುಣಿತ, ಮಾತು, ಪದ್ಯ ಹಾಗೂ ತಾಳ ಇವುಗಳೆಲ್ಲದರ ಬಗ್ಗೆ ತಯಾರಿ ಮಾಡಿ, ಆದಷ್ಟು ನನಗೆ ನೀಡಿದ ಪಾತ್ರ ನಾನಾಗಲು ಬೇಕಾದ ಎಲ್ಲಾ ತಯಾರಿ ನಡೆಸುತ್ತೇನೆ.


ಯಕ್ಷಗಾನದ ಎಲ್ಲಾ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು ಹಾಗೂ ಇವರು ವೇಷ ಮಾಡಿದ ಕೃಷ್ಣ ಲೀಲೆ ಕಂಸ ವಧೆ, ದ್ರೌಪದಿ ಪ್ರತಾಪ, ದೇವಿ ಮಹಾತ್ಮೆ ಎಂದಿಗೂ ನೆಚ್ಚಿನ ಪ್ರಸಂಗ.

ಎಲ್ಲಾ ವೇಷಗಳು ನೆಚ್ಚಿನ ವೇಷಗಳು ಅದರಲ್ಲೂ ಕೃಷ್ಣನ ವೇಷ ತುಂಬಾನೇ ಅಚ್ಚುಮೆಚ್ಚು ಹಾಗೂ ಎಲ್ಲಾ ರೀತಿಯ ಸಾತ್ವಿಕ ಹಾಗೂ ಪುಂಡು ವೇಷಗಳು ನನಗೆ ನೆಚ್ಚಿನದ್ದು ಎಂದು ಹೇಳುತ್ತಾರೆ ಪ್ರಿಯಾ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನದಲ್ಲಿ ಈಗ ಮಹಿಳೆಯರೂ ಮಿಂಚುತ್ತಿರುವುದು ಸಂತಸದ ವಿಚಾರ. ಯಕ್ಷಗಾನ ಈಗಿನ ಕಾಲಕ್ಕೆ ತಕ್ಕಂತೆ ಸೃಜನಾತ್ಮಕವಾಗಿ ಬದಲಾಗುತ್ತಿರುವುದು ಸ್ವಾಗತಾರ್ಹ.‌ ಆದರೆ ಅದು ಎಂದೂ ಅತಿಯಾಗಬಾರದು. ರಂಗದಲ್ಲಿ ಕಥೆಗೆ ಸಂಬಂಧಿಸದ ವೈಯಕ್ತಿಕ ವಿಚಾರ ಮಾತನಾಡುವುದು ಇದು ಕಲಾವಿದನಿಗೆ ಶೋಭೆ ತರುವುದಿಲ್ಲ. ಹಾಗೆಯೇ  ಯಕ್ಷಗಾನ ‌ಎಂದರೆ ಬರೇ ಕುಣಿತವಲ್ಲ, ಅಲ್ಲಿ ಮಾತು, ಭಾವ ಎಲ್ಲದಕ್ಕೂ ಸಮಾನ ಪ್ರಾಮುಖ್ಯತೆ ಕೊಟ್ಟಾಗ ಮಾತ್ರವೇ ಅದು ಪ್ರೇಕ್ಷಕರ ಮನ ಮುಟ್ಟಲು ಸಾಧ್ಯ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಇಂದಿನ ದಿನಗಳಲ್ಲಿ ಜನರಿಗೆ ಮನೋರಂಜನೆಗೆ ಏನೂ ಕಡಿಮೆಯಿಲ್ಲ. ಅಂತದ್ರಲ್ಲಿ ಯಕ್ಷಗಾನದ ಬಗ್ಗೆ ಪ್ರೀತಿಯಿಂದ ಬರುವ ಪ್ರೇಕ್ಷಕರನ್ನು ಹಿಡಿದಿಡುವ ಕೆಲಸ ಕಲಾವಿದನಿಗೆ ಸವಾಲೆ ಸರಿ. ಈಗಿನ ಪ್ರೇಕ್ಷಕರು ಹೊಸತನದ ಆಶಯದೊಂದಿಗೆ ಬರುವ ಕಾರಣ ಅವರ ನಿರೀಕ್ಷೆ ಹುಸಿಯಾಗದಂತೆ ನೋಡಿಕೊಳ್ಳಬೇಕು.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನಾದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನದಲ್ಲಿ ನಾನು ಕಲಿಯಲು ಇನ್ನೂ ಅನೇಕ ವಿಚಾರಗಳಿವೆ. ಯಕ್ಷಗಾನದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಒಂದಿಷ್ಟು ಕಲಿಯುತ್ತಾ, ಕಲಿಯಲು ಆಸಕ್ತಿ ಇರುವ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡುವ ಸದಾಶಯ ಹೊಂದಿದ್ದೇನೆ.


ಯಕ್ಷಗಾನ, ನಾಟಕ, ನೃತ್ಯ, ಕ್ರಾಫ್ಟ್ ಮೇಕಿಂಗ್ ಇವರ ಹವ್ಯಾಸಗಳು.

ಭರತನಾಟ್ಯದ ಜೂನಿಯರ್ ಪರೀಕ್ಷೆಯನ್ನು ವಿದ್ವಾನ್ ಚಂದ್ರಶೇಖರ್ ನಾವಡ, ಸೀನಿಯರ್ ಪರೀಕ್ಷೆಯನ್ನು ವಿದ್ವಾನ್ ಶ್ರೀಧರ್ ರಾವ್ ಬನ್ನಂಜೆ ಇವರ ಮಾರ್ಗದರ್ಶನದಲ್ಲಿ ಪ್ರಥಮ ಶ್ರೇಣಿಯಲ್ಲಿ ಮುಗಿಸಿರುತ್ತಾರೆ ಪ್ರಿಯಾ.

Rotaract ನಂತಹ ಸಂಘ ಸಂಸ್ಥೆಗಳಲ್ಲಿ ಇದ್ದು ಅದರ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿ, ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಡಿರುತ್ತಾರೆ. ಪ್ರಸ್ತುತ ಮಂದಾರ ಬೈಕಾಡಿ ಇಲ್ಲಿ ರೋಹಿತ್ ಎಸ್ ಬೈಕಾಡಿಯವರ ಮಾರ್ಗದರ್ಶನದಲ್ಲಿ ರಂಗಭೂಮಿ ನಾಟಕಗಳಲ್ಲಿ ಅಭಿನಯಿಸಿ ರಂಗಭೂಮಿ ಬಗ್ಗೆ ಒಂದಿಷ್ಟು ತಿಳಿದಿಕೊಳ್ಳುತ್ತಿದ್ದಾರೆ. ಆಲ್ವೀನ್ ಅಂದ್ರಾದೆ ನೇತೃತ್ವದ ವಿ.ಆರ್ ಫ್ರೆಂಡ್ಸ್ ಸಾಸ್ತಾನ ತಂಡದೊಂದಿಗೆ 100ಕ್ಕೂ ಹೆಚ್ಚು ಹಾಸ್ಯ ನಾಟಕ ಪ್ರದರ್ಶನದಲ್ಲಿ ಭಾಗಹಿಸಿರುವ ಇವರು, ಬಿಡುವಿನ ಸಮಯದಲ್ಲಿ ಕೆಲವೊಂದು ಕಥೆಗಳಿಗೆ ದನಿಯಾಗುತ, ಹಾಗೆಯೇ ಬಡವನೊಡಲ ಬೊಳ್ಳಿ ಎಂಬ ವಿಡಿಯೋ ಸಾಂಗ್‌ನಲ್ಲಿ ಅಭಿನಯಿಸಿದ್ದಾರೆ.


ಡಿಗ್ರಿ ಕಾಲೇಜಿನಲ್ಲಿ ಸ್ಪೇಶಲ್ ಅವಾರ್ಡ್, ಕಾಲೇಜಿನ NSS ಘಟಕದಿಂದ ಸನ್ಮಾನ ಇವರಿಗೆ ದೊರೆತಿರುತ್ತದೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post