||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಳ್ವಾಸ್ ಕಾಲೇಜಿನಲ್ಲಿ "ಇನಾಮು 2022"- ಫೋರಮ್ ವಾರ್ಷಿಕೋತ್ಸವ

ಆಳ್ವಾಸ್ ಕಾಲೇಜಿನಲ್ಲಿ "ಇನಾಮು 2022"- ಫೋರಮ್ ವಾರ್ಷಿಕೋತ್ಸವ


ಉಪಯುಕ್ತ ನ್ಯೂಸ್

ಮೂಡುಬಿದಿರೆ: ಎಲ್ಲರೂ ಕೂಡಿ ಕೆಲಸ ಮಾಡಿದಾಗ ಸಿಗುವ ಫಲಿತಾಂಶ ಒಳ್ಳೆಯದೇ ಆಗಿರುತ್ತದೆ. ನಾವು ಯಾವತ್ತೂ ಬೇರೆಯವರಿಗಿಂತ ಒಳ್ಳೆಯ ಫಲಿತಂಶವನ್ನು ನೀಡಬೇಕು ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು.


ಆಳ್ವಾಸ್ ಕಾಲೇಜಿನ ವಿ. ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ "ಇನಾಮು  2022" ಫೋರಮ್ ಡೇ ಸೆಲೆಬ್ರೇಶನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆವರು, ಸಿಕ್ಕ ಅವಕಾಶವನ್ನು ಚೆನ್ನಾಗಿ ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿ ಹಂತದಲ್ಲಿ ಮಾಡಿದ ಕೆಲಸ ಮುಂದೆ ಔದ್ಯೋಗಿಕ ಜೀವನದಲ್ಲೂ ಸಹಾಯ ಮಾಡುತ್ತದೆ. ಎಲ್ಲಾ ಕ್ಷೇತ್ರದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಕಲೆ, ಕ್ರೀಡೆ, ನಾಯಕತ್ವ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಬೆಳೆಯಬೇಕು ಎಂದರು.


ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಶ್ರಮವಹಿಸಿ ಮಾಡಿದ ಕೆಲಸ ನಮ್ಮನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ. ನಾವು ನಮ್ಮ ಪ್ರತಿಭೆಯನ್ನು ಎಲ್ಲರಿಗೂ ಪರಿಚಯಿಸಬೇಕು. ನಮ್ಮ ಗುರಿಯತ್ತ ನಮ್ಮ ಶಕ್ತಿ ಇದ್ದಾಗ ಕೈಗೊಂಡ ಕೆಲಸದಲ್ಲಿ ಯಶಸ್ಸು ಗಳಿಸಬಹುದು ಎಂದರು.


ಸಭಾ ಕಾರ್ಯಕ್ರಮದ ಬಳಿಕ ವಿವಿಧ ಫೆÇೀರಮ್ ಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿತು. ಯಕ್ಷಗಾನ, ಭಜನೆ, ಪೇಂಟಿಂಗ್, ಯೋಗ ಹೀಗೆ ವಿದ್ಯಾರ್ಥಿಗಳ ವಿವಿಧ ಪ್ರತಿಭೆಗಳು ಅನಾವರಣಗೊಂಡವು. ಕಾರ್ಯಕ್ರಮದಲ್ಲಿ ಫೋರಮ್ ಸಂಯೋಜಕರಾದ ಯೋಗೀಶ್ ಕೈರೋಡಿ ಹಾಗೂ ಹರಿಣಾಕ್ಷಿ ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಸೌಜನ್ಯ ಆರ್. ಭಟ್ ಕಾರ್ಯಕ್ರಮ ನಿರೂಪಿಸಿದರೆ, ವಿದ್ಯಾರ್ಥಿ ಅಭಿಷೇಕ್ ವಂದಿಸಿದರು.


ಆಳ್ವಾಸ್ ಕಾಲೇಜಿನಲ್ಲಿ ಆಧ್ಯಾತ್ಮ, ಡ್ಯಾನ್ಸ್, ಹ್ಯುಮಾನಿಟೀಸ್ ಹೀಗೆ ಒಟ್ಟು 23 ಫೋರಂಗಳು ಇದ್ದು, ಇದರಲ್ಲಿ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಎಲ್ಲಾ ಫೋರಂಗಳ ಮೂಲಕ, ಒಂದು ವರ್ಷದಲ್ಲಿ ಇನಾಮು- 2022 ಅಡಿಯಲ್ಲಿ ಒಟ್ಟು 28 ದಿನದಲ್ಲಿ 24 ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಹಾಗೂ 500ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಈವೆಂಟ್ ನ ಸಮಗ್ರ ಚಾಂಪಿಯನ್ ಆಗಿ ಕಾಮರ್ಸ್ ಫೆÇೀರಂ ಹೊರಹೊಮ್ಮಿತು. ಎನ್‍ಸಿಸಿ ಆರ್ಮಿ ಹಾಗೂ ಹ್ಯುಮಾನಿಟೀಸ್ ಫೋರಂ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡವು. ಅತ್ಯುತ್ತಮ ಕಾಂಪಿಟೀಶನ್ ಆರ್ಗನೈಜರ್ ಪ್ರಶಸ್ತಿಯನ್ನು ಎನ್‍ಸಿಸಿ ನೇವಿ ಫೋರಂ ಪಡೆದುಕೊಂಡಿತು.


ವಿದ್ಯಾರ್ಥಿ ಜೀವನದ ಶ್ರಮ, ಭವಿಷ್ಯದಲ್ಲಿ ಫಲ: ಡಾ. ಉದಯ್ ಕುಮಾರ್

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಂಶುಪಾಲ ಡಾ. ಉದಯ ಕುಮಾರ್ ಇರುವತ್ತುರು, ಶ್ರಮ ವಹಿಸಿ ಕೆಲಸ ಮಾಡಿದರೆ ನಮ್ಮ ಮುಂದಿನ ಜೀವನವು ಹೂವಿನಂತೆ ಸುಂದರವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಶ್ರಮವಹಿಸಿ ಮಾಡಿದ ಕೆಲಸವು ಭವಿಷ್ಯದಲ್ಲಿ ಫಲ ಕೊಡುತ್ತದೆ. ಸ್ಪರ್ಧೆಗಳಲ್ಲಿ ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯವಾಗುತ್ತದೆ. ಹೀಗೆ ಹೆಚ್ಚೆಚ್ಚು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಅಭಿವೃದ್ಧಿಗೂ ಪೂರಕ ಎಂದು ಹೇಳಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post