||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಲೋಕಸೇವಾ'ಗೆ 'ಜನಸೇವಾ' ಸಹಕಾರ ಯೋಜನೆ

'ಲೋಕಸೇವಾ'ಗೆ 'ಜನಸೇವಾ' ಸಹಕಾರ ಯೋಜನೆ


ಭಾರತದಲ್ಲಿ ಅತ್ಯಂತ ಗೌರವಯುತ, ಘನತೆ ಇರುವ, ಮತ್ತು ಶ್ರೇಷ್ಠವಾದ ಆಯೋಗಗಳಲ್ಲಿ ಕೇಂದ್ರ ಲೋಕಸೇವಾ ಆಯೋಗ ಮತ್ತದರ ವಿವಿಧ ಹುದ್ದೆಗಳು ಅಗ್ರ ಸ್ಥಾನದಲ್ಲಿವೆ. ಕಠಿಣ ಪರೀಕ್ಷಾ ಪದ್ಧತಿ, ಕ್ಲಿಷ್ಟಕರ ಸಂದರ್ಶನ ಪ್ರಕ್ರಿಯೆ ಮತ್ತು ಅತ್ಯಂತ ಅರ್ಹರ ನೇಮಕಾತಿ ಈ ಆಯೋಗದ ಹೆಗ್ಗಳಿಕೆ. ಕೋಟ್ಯಂತರ ಜನರ ಕನಸಿನ ಹುದ್ದೆ ಕೆಲವೇ ಕೆಲವರ ಪಾಲಿಗೆ ಮಾತ್ರ ದಕ್ಕುವುದು ಆಯೋಗದ ಶ್ರೇಷ್ಠತೆಯನ್ನು ಇಮ್ಮಡಿಗೊಳಿಸಿದೆ. ನಿರಂತರ ಅಧ್ಯಯನ ಮತ್ತು ಸರ್ವರೀತಿಯ ಪ್ರಯತ್ನದಿಂದ ಕೆಲವೇ ಕೆಲವರು ಮಾತ್ರ ಕೇಂದ್ರ ಲೋಕಸೇವಾ ಆಯೋಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡುವ ಯೋಗ್ಯತೆ ಮತ್ತು ಅರ್ಹತೆ ಪಡೆಯುತ್ತಾರೆ.

ನಮ್ಮ ಬ್ರಾಹ್ಮಣ ಸಮುದಾಯದಲ್ಲಿ ಬುದ್ಧಿವಂತರಿಗೆ ಮತ್ತು ಸತತ ಪರಿಶ್ರಮದಿಂದ ಗುರಿ ಸಾಧಿಸುವ ಯುವಕ-ಯುವತಿಯರ ಸಂಖ್ಯೆಗೆ ಕಡಿಮೆ ಏನಿಲ್ಲ! ಆದರೂ ಲೋಕಸೇವಾ ಆಯೋಗದಲ್ಲಿ ನಮ್ಮವರ ಪ್ರಾತಿನಿಧ್ಯ ಶೂನ್ಯಕ್ಕೆ ತುಂಬಾ ಹತ್ತಿರವಿರುವುದು ವಾಸ್ತವ!


'ಬುದ್ಧಿವಂತರೆನಿಸಿಕೊಂಡ ಬ್ರಾಹ್ಮಣರು ಲೋಕಸೇವಾ ಆಯೋಗದಲ್ಲಿ ತಮ್ಮ ಛಾಪು ಮೂಡಿಸಿ ಮುಂದಿನ ದಿನಗಳಲ್ಲಿ ಒಳ್ಳೆಯ ಸಂಖ್ಯೆಯಲ್ಲಿ ನಮ್ಮ ಸಮುದಾಯವನ್ನು ಯುವಪೀಳಿಗೆ ಪ್ರತಿನಿಧಿಸುವ ಕನಸು ಮತ್ತು ಗುರಿಯೊಂದಿಗೆ, ಉನ್ನತ ಹುದ್ದೆಗೆ ನಮ್ಮ ಯುವ ಸಮುದಾಯದ ಹಲವರು ಆಯ್ಕೆಗೊಂಡು ಆ ಮೂಲಕ ಆ ಕ್ಷೇತ್ರದಲ್ಲಿ ನಮ್ಮವರ ಸಹಭಾಗಿತ್ವ ಇರುವಂತಾಗಲಿ' ಎನ್ನುವ ಮತ್ತೊಂದು ಹೊಸ-ಮಹತ್ವಾಕಾಂಕ್ಷಿ ಯೋಜನೆಯ ಪ್ರಸ್ತಾಪದೊಂದಿಗೆ ಜನ ಸೇವಾ ಸಂಸ್ಥೆ ನಿಮ್ಮೆದುರು ಬಂದಿದೆ.

 

'ಲೋಕಸೇವಾ'ಗೆ 'ಜನಸೇವಾ' ಸಹಕಾರ ಎನ್ನುವ ಈ ಯೋಜನೆಯಡಿಯಲ್ಲಿ ನಮ್ಮ ಸಮುದಾಯದ ಅರ್ಹ ಮತ್ತು ಆರ್ಥಿಕವಾಗಿ ಹಿಂದುಳಿದ ಯುವಕ-ಯುವತಿಯರಿಗೆ ಲೋಕಸೇವಾ ಆಯೋಗದ ತರಬೇತಿ, ಪರೀಕ್ಷೆ ಮತ್ತು ಇನ್ನಿತರ ವಿಷಯಗಳಿಗೆ ಸಾಲರೂಪದ ಧನಸಹಾಯ ನೀಡುವ ಯೋಜನೆಯಿದು.


ವಿವರಗಳು ಇಂತಿವೆ:

1. ನಮ್ಮ ಸಮುದಾಯದ, ಲೋಕಸೇವಾ ಆಯೋಗದ ತರಬೇತಿ ಮತ್ತು ಪರೀಕ್ಷೆಗೆ ಅರ್ಹರಾಗಿರುವ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು.

2. ಅರ್ಜಿಯೊಂದಿಗೆ ಈವರೆಗಿನ ಪರೀಕ್ಷೆಗಳ ಅಂಕಪಟ್ಟಿಗಳು ಮತ್ತು ಸ್ಥಳೀಯ ಬ್ರಾಹ್ಮಣ ಸಮುದಾಯದ ಸಂಘಟನೆಯ ಶಿಫಾರಸು ಪತ್ರ ಲಗತ್ತಿಸಿರಬೇಕು.

3. ಪಡೆಯುವ ಧನಸಹಾಯ ಬಡ್ಡಿರಹಿತ ಸಾಲ ರೂಪದ್ದಾಗಿದೆ. ತೇರ್ಗಡೆ ಹೊಂದಿದ ಬಳಿಕ ಅಥವಾ ಮೂರು ಪ್ರಯತ್ನಗಳ ನಂತರದ (whichever is earlier) 36 ತಿಂಗಳೊಳಗೆ ಪಡೆದ ಸಹಾಯದ ಮೊತ್ತವನ್ನು ಜನಸೇವಾ ಸಂಸ್ಥೆಗೆ ಮರುಪಾವತಿ ಮಾಡುವ ಕರಾರಿನೊಂದಿಗೆ ಸಹಕಾರ ನೀಡಲಾಗುವುದು.

4. ಆರ್ಥಿಕ ಸಹಕಾರ ಕೋರಿ ಬಂದ‌ ಅರ್ಜಿಗಳನ್ನು ಪುರಸ್ಕರಿಸುವ ಯಾ ತಿರಸ್ಕರಿಸುವ ವಿಚಾರದಲ್ಲಿ ಜನ ಸೇವಾ ಸಂಸ್ಥೆಯ ತೀರ್ಮಾನವೇ ಅಂತಿಮ.


'ಲೋಕಹಿತಂ ಮಮ ಕರಣೀಯಂ...' ಎನ್ನುವ ಚೆನ್ನುಡಿಯ ಆಶಯದಂತೆ 'ಲೋಕಸೇವಾ ಆಯೋಗದಲ್ಲಿ ಮುಂದಿನ ವರ್ಷಗಳಲ್ಲಿ ನಮ್ಮ ಸಮುದಾಯದ ಹಲವರು ಈ ಯೋಜನೆಯ ಸದುಪಯೋಗದೊಂದಿಗೆ ತೇರ್ಗಡೆ ಹೊಂದಿ, ಸೇರಿಕೊಂಡು ಕನಸಿನ ವೃತ್ತಿಯನ್ನು ತಮ್ಮದಾಗಿಸುವಂತಾಗಲಿ' ಎನ್ನುವುದು ನಮ್ಮ ಆಶಯ.


ಅರ್ಹ ಫಲಾನುಭವಿಗಳನ್ನು ಗುರುತಿಸುವ ಜವಾಬ್ದಾರಿಯ ಜೊತೆ ಜೊತೆಗೆ, ಅಂಥಾ ನಿರಂತರ ಕಾರ್ಯಕ್ಕೆ ಆರ್ಥಿಕ ಸಹಾಯಹಸ್ತ ನೀಡುವ ಮಹಾನುಭಾವರನ್ನು, ನಮ್ಮೊಂದಿಗೆ ಈ ಸತ್ಕಾರ್ಯಕ್ಕೆ ಕೈ ಜೋಡಿಸುವ ಸಂಸ್ಥೆಗಳ ವಿವರಗಳನ್ನೂ ಕಲೆಹಾಕುವ ಪ್ರಕ್ರಿಯೆ ಪ್ರಗತಿಯಲ್ಲಿದೆ.


"ಆರ್ಥಿಕ ಸಹಾಯ ಬೇಡುವವರ ಮತ್ತು ನೀಡುವವರ" ನಡುವಿನ ಕೊಂಡಿಯಾಗಿ ಕೆಲಸ ಮಾಡುವ, ಆ ಮೂಲಕ ಫಲಾನುಭವಿಗಳ ಬಾಳಲ್ಲಿ ನಗು ತುಂಬುವ, ದಾನಿಗಳ ಮನದಲ್ಲಿ ನೆಮ್ಮದಿ ತರುವ ನಿರಂತರ ಕಾಯಕದಲ್ಲಿ ಜನಸೇವಾ ಚಾರಿಟೇಬಲ್ ಅಸೋಸಿಯೇಷನ್ ತೊಡಗಿಸಿಕೊಂಡಿದೆ.


ಬನ್ನಿ, ಸಹಕರಿಸಿ, ಜೊತೆಗೂಡಿ ಈ ಕಾರ್ಯದಲ್ಲಿ ಯಶ ಕಾಣೋಣ.


ಬ್ರಾಹ್ಮಣ ಸಮುದಾಯದ ಅಶಕ್ತ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ, ನಮ್ಮ ಕೈಲಾದ ಕಿಂಚಿತ್ತು ಸಹಾಯ ಮಾಡುವ ಧ್ಯೇಯ ಮತ್ತು ಬದ್ಧತೆ ನಮ್ಮದು.


ನಿಮ್ಮ ಸಹಾಯ, ಸಹಕಾರ ಸದಾ ನಮ್ಮ ಜೊತೆ ಹೀಗೇ ಇರಲಿ. ಶುಭವಾಗಲಿ, ಆಕಾಂಕ್ಷಿಗಳ ಕನಸು ನನಸಾಗಲಿ...


ಸರ್ವೇ ಸಂತು ನಿರಾಮಯಾ...


ಧನ್ಯವಾದಗಳೊಂದಿಗೆ..,

ಜನಸೇವಾ ಬಳಗ


(ಸಲಹೆ, ಸೂಚನೆಗಳಿಗೆ ಸ್ವಾಗತ. ಜನಸೇವಾ ಚಾರಿಟೇಬಲ್ ಅಸೋಸಿಯೇಷನ್'ನೊಂದಿಗೆ ವಿವಿಧ ಸೇವಾ ಕೈಂಕರ್ಯದಲ್ಲಿ ಕೈಜೋಡಿಸಲು, ಸೇರಿಕೊಳ್ಳಲು ಇಚ್ಚಿಸುವವರು ಸಂಪರ್ಕಿಸಿ: ನಾಗರಾಜ ಉಪ್ಪಂಗಳ - 9535000365 / ಪಾಂಡುರಂಗ ಗುರ್ಜರ್ - 9342281752. ನೀವು ನೀಡುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆಯ 80G ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ.)


(ಜನಸೇವಾ ಚಾರಿಟೇಬಲ್ ಅಸೋಸಿಯೇಷನ್' ಪ್ರಕಟಣೆಯನ್ನು ಯಥಾವತ್ ಪ್ರಕಟಿಸಲಾಗಿದೆ)

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post