ನೆನಪುಗಳ ಬೆಟ್ಟದ ಮೇಲೆ ನಿಂತು ನೋಡಿದಾಗ...

Upayuktha
0

ನೆನಪುಗಳ ಗುಡ್ಡದ ಮೇಲೆ ನಿಂತು ನಡೆದ ದಾರಿಯನ್ನೊಮ್ಮೆ ಹಿಂದಿರುಗಿ ನೋಡಿದೆ. ಅದೆಷ್ಟೋ ಕಲ್ಲು ಮುಳ್ಳಿನ ದಾರಿಯಲ್ಲಿ ನಡೆದಾಗಿತ್ತು. ಬದುಕಿನ ಅರ್ಧ ದಾರಿ ಸವೆದು ಇನ್ನರ್ಧದ ಈ ಬಾಳ ದಾರಿಯಲ್ಲಿ ಇನ್ನೆಷ್ಟು ಕಂಟಕಗಳು ಎದುರಾಗುತ್ತದೆಯೋ ಗೊತ್ತಿಲ್ಲ.


ನಾಲ್ಕಾಣೆ ಜೀವನದಲ್ಲಿ ಹೋಗುವವರು ಎಷ್ಟೋ ಬರುವವರು ಎಷ್ಟೋ. ಅಂತವರಲ್ಲಿ ಬಂದು ಹೋದವರಿಂದ ಅನೇಕ ಅನುಭವಗಳನ್ನು ಪಡೆದಿರುತ್ತೇವೆ. ಅವರ ಬಗ್ಗೆ ನಾವು ಯೋಚಿಸದೆ ನಾವು ನಮಗಾಗಿ ಬದುಕಬೇಕು. ನಾವು ಅಂದುಕೊಂಡಂತೆ ಎಲ್ಲವೂ ಈಡೇರುವುದು ಕಷ್ಟ. ಕಾರಣ ಬದುಕೊಂದು ತೆರೆದ ಪುಸ್ತಕ. ನಾವೊಂದು ಬಗೆದರೆ ದೈವವೊಂದು ಬಗೆಯದು.


ಬದುಕು ಕೂಡ ಹಾಗೇ ಒಂದು ಸೆರೆಮನೆ ಇದ್ದ ಹಾಗೆ. ನಾಲ್ಕು ದಿನದ ಬದುಕಿನಲ್ಲಿ ನಾವು ಕೋಪ, ಅಹಂಕಾರ, ಪ್ರೀತಿ, ಮೋಹ, ದ್ವೇಷದಿಂದ ನಮ್ಮ ಜೀವನವನ್ನು ಬಂಧಿಸಿದ್ದೇವೆ. ಹುಟ್ಟು ಸಾವಿನ ಮಧ್ಯೆ ಸಿಗುವ ಒಂದು ಸಣ್ಣ ಬಿಡುವು ಅಷ್ಟೇ. ನನ್ನ ಪ್ರಕಾರ ಈ ಬದುಕೊಂದು ವಿಚಿತ್ರ ಬಂಡಿ. ದಿನಕ್ಕೊಂದು ಸಮಸ್ಯೆ, ಈಡೇರದ ಏನೆನೋ ಆಸೆಗಳು, ಕಲ್ಪನೆಗಳು, ಕನಸುಗಳು, ಬೇಡದ ಆಲೋಚನೆಗಳು ಸದಾ ಬೆನ್ನ ಹಿಂದೆ ಸುತ್ತುತ್ತಲೇ ಇರುತ್ತವೆ.


ನಮ್ಮ ಜೀವನ ಸೆರೆಮನೆಯಾಗಲು ಕಾರಣ ನಮ್ಮ ಆಸೆ ಆಕಾಂಕ್ಷೆಗಳು, ನಾವು ಬೇರೆಯವರಂತೆ ಇರಬೇಕೆಂದು ಬಯಸುವುದು. ನಾವು ಹುಟ್ಟುವಾಗ ಯಾರನ್ನು ನಂಬಿಕೊಂಡು ಬಂದಿರುವುದಿಲ್ಲ ಅಂತಹುದರಲ್ಲಿ ನಮ್ಮ ಬದುಕು ನಮಗಾಗಿ ಮೀಸಲು ಅದರಲ್ಲಿ ನಾವು ಬೇರೆಯವರನ್ನು ಮೆಚ್ಚಿಸಲು ಏನಿದೆ??...


-ನಿರೀಕ್ಷಾ. ಸಿ.

ದ್ವಿತೀಯ ಬಿಎ ಪತ್ರಿಕೋದ್ಯಮ

ವಿವೇಕಾನಂದ ಕಾಲೇಜು ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top